ಇಂಡಿ : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಸಿದ್ದಾರಾಮ ದೇವೇಂದ್ರ ತಳವಾರ ಅವರನ್ನು ಜಿಲ್ಲಾಧ್ಯಕ್ಷ ಎಸ್ ಬಿ ಕೆಂಬೋಗಿ (ಕೊಡಿಹಳ್ಳಿ ಚಂದ್ರಶೇಖರ್ ಬಣ) ಆಯ್ಕೆ ಮಾಡಿ ಆದೇಶ ಪತ್ರ ನೀಡಿದ್ದಾರೆ.
ಈ ಹಿಂದೆ ಇಂಡಿ ತಾಲೂಕಿನ ಅಧ್ಯಕ್ಷರಾಗಿರುವ ನ್ಯಾಯವಾದಿ ತಮ್ಮಾರಾಯ ಆಸಂಗಿ ಅವರನ್ನು ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿರುವ ಹಿನ್ನೆಲೆ ತೆರವಾದ ಸ್ಥಾನಕ್ಕೆ ತಾಲೂಕಿನ ನಾದ ಕೆಡಿ ಗ್ರಾಮದ ಸಿದ್ದರಾಮ ತಳವಾರ ಅವರನ್ನು ತಾಲ್ಲೂಕು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಎಸ್ ಬಿ ಕೆಂಬೋಗಿ ಮಾತನಾಡಿದ ಅವರು, ರೈತರ ಆಶೋತ್ತರಗಳಿಗೆ ಸ್ಪಂದಿಸುವ ಹಾಗೂ ಅವರ ಸಮಸ್ಯೆಗಳಿಗೆ ಧ್ವನಿಯಾಗಿ ನಿಲ್ಲಬೇಕು.ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘದ ಸೈದಾಂತಿಕ ಸಿದ್ದಾಂತಗಳನ್ನು ಮೈಗೂಡಿಸಿಕೊಂಡು ಸಂವಿಧಾನದ ಬದ್ದ ನೀತಿ ನಿಯಮಗಳನ್ನು ತೋರದೆ ಶಿಸ್ತಿನಿಂದ ಮತ್ತು ನಿಷ್ಠೆಯಿಂದ ನಿರ್ವಹಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ತಮ್ಮಾರಾಯ ರಾ ಆಸಂಗಿ, ಮಳಸಿದ್ದಯ್ಯ ಹಿರೇಮಠ,ರಫಿಕ ಚೌದರಿ,ಹಣಮಂತ ಗುಡ್ಲ,ಜಗದೇವ ರಾಠೋಡ,ಸುನೀಲ ರಾಠೋಡ,ಶ್ರೀಶೈಲ ಹುಗಾರ ಇತರರು ಹಾಜರು ಇದ್ದರು