ಹಿರೇಮಸಳಿ ಗ್ರಾಮದಲ್ಲಿ ಶುದ್ದಗಂಗಾ ಘಟಕ ಉದ್ಘಾಟನೆ..
ಇಂಡಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು
ಜನಪರ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಈ
ಸಂಸ್ಥೆ ಒಂದು ಮಿನಿ ಸರ್ಕಾರದಂತೆ ಕೆಲಸ ನಿರ್ವಹಿಸುತ್ತಿದೆ
ಎಂದು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಶೋಭಾ ಹೊರಪೇಟ ಅಭಿಪ್ರಾಯಪಟ್ಟರು.
ಅವರು ಇತ್ತೀಚೆಗೆ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು
ಗ್ರಾಮಪಂಚಾಯತ್ ಮಸಳಿ ಸಂಯೋಗದೊಂದಿಗೆ
ಶುದ್ದಗಂಗಾ ಘಟಕ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರ ಶ್ರೇಯೋಭಿವೃಧ್ಧಿಗೂ ಧರ್ಮಸ್ಥಳ
ಸಂಸ್ಥೆ ಶ್ರಮಿಸುತ್ತಿದೆ. ಸಂಸ್ಥೆಯಿಂದ ಸಹಾಯ ಪಡೆದು
ಲಕ್ಷಾಂತರ ಮಹಿಳೆಯರು ಆರ್ಥಿಕವಾಗಿ ಏಳ್ಗೆ
ಕಂಡುಕೊಂಡಿದ್ದಾರೆ ಎಂದರು. ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ನಿರ್ದೇಶಕ ಸಂತೋಶಕುಮಾರ ರೈ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೇವಲ ಸಂಘ ರಚನೆ ಮಾಡಿ ಸಾಲ ನೀಡುವುದು ನಮ್ಮ ಉದ್ದೇಶವಲ್ಲ. ಜನಪರ ಕಾರ್ಯಕ್ರಮಗಳಾದ ಸುಜ್ಞಾನ ನಿಧಿ ಶಿಷ್ಯವೇತನ, ದೇವಸ್ಥಾನಗಳಿಗೆ ಅನುದಾನ ವಿತರಣೆ, ನಿರ್ಗತಿಕರಿಗೆ ಮಾಸಾಸನ ನೀಡುವುದು ವಾಸ್ತಲ್ಯ ಕಾರ್ಯಕ್ರಮದ ಅಡಿಯಲ್ಲಿ ಕಟ್ಟಡ ನಿರ್ಮಾಣ ಮಾಡುವುದು, ಶಾಲೆಗಳಿಗೆ ಜ್ಞಾನ ದೀಪ ಶಿಕ್ಷಕರನ್ನು ನೇಮಕ ನೀಡುವುದು, ಶುದ್ಧ ಗಂಗಾ ಕುಡಿಯುವ ನೀರಿನ ಘಟಕ ಸ್ಥಾಪನೆ, ಶಾಲೆಗಳಿಗೆ ಡೆಸ್ಕ್, ಬೆಂಚ್ ವಿತರಣೆ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಪೂಜ್ಯ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆಯುವ ಗ್ರಾಮಾಭಿವೃದ್ಧಿ ಯೋಜನೆ ಇದಾಗಿದೆ ಎಂದು ತಿಳಿಸಿದರು.
ಕೇಂದ್ರ ಕಚೇರಿಯ ಶುದ್ಧಗಂಗಾ ಯೋಜನಾಧಿಕಾರಿ
ಫಕೀರಪ್ಪ ಬೆಲ್ಲಮುದ್ದಿ ಮಾತನಾಡಿ, ಘಟಕದ ನಿರ್ವಹಣೆ
ಮತ್ತು ಶುದ್ಧ ನೀರಿನಿಂದ ಪ್ರಯೋಜನಗಳ ಬಗ್ಗೆ
ತಿಳಿಸಿದರು. ತಾಲೂಕ ಯೋಜನಾಧಿಕಾರಿಗಳಾದ ನಟರಾಜ್ ಎಲ್.ಎಂ.ಪ್ರಾಸ್ತಾವಿಕವಾಗಿ ಮಾತನಾಡಿದರು.
ತಾಲೂಕಿನ ಕೃಷಿ ಅಧಿಕಾರಿ ಪ್ರಕಾಶ ಬಡಿಗೇರ, ಮಸಳಿ
ಗ್ರಾಮ ಪಂಚಾಯತಿ ಅಧ್ಯೆಕ್ಷೆ ಕಸ್ತೂರಿಬಾಯಿ
ದೊಡಮನಿ, ಉಪಾಧ್ಯಕ್ಷ ಚಂದ್ರಭಾಗ್ಯ ಸಿಂದಗಿ,
ಗ್ರಾಮ ಪಂಚಾಯತ್ ಸರ್ವ ಸದಸ್ಯರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಕೃಷ್ಣಪ್ಪ ಸುಣಗಾರ, ನಜೀರ್ ಗುಬ್ಬೆವಾಡ,
ಸೇವಾಪ್ರತಿನಿಧಿ ಸವಿತಾ ಆರ್.ಕೆ, ಶೃತಿ ಚಾಂದಕವಟೆ
ಮತ್ತು ಸ್ವ ಸಹಾಯ ಸಂಘದ ಸದಸ್ಯರು ಗ್ರಾಮದ
ಗಣ್ಯರು ಸದಸ್ಯರು ಎಲ್ಲರೂ ಭಾಗವಹಿಸಿದ್ದರು.
ಶುದ್ಧ ಗಂಗಾ ಮೇಲ್ವಿಚಾರಕರು ಶಂಬಾಜಿ ಮಿರಗಾನಿ
ಸ್ವಾಗತಿಸಿ, ವಂದಿಸಿದರು.