ಎಸ್ಎನ್ ಡಿ ನ್ಯಾಷನಲ್ ಪಬ್ಲಿಕ್ ಶಾಲೆಯ ಮಕ್ಕಳು ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ.
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ, ವಿಜಯಪುರ
ಮುದ್ದೇಬಿಹಾಳ: ಕೃಷ್ಣ ಜನ್ಮಾಷ್ಟಮಿ ನಿಮಿತ್ಯವಾಗಿ ತಾಲೂಕಿನ ಹುಲ್ಲೂರ ಗ್ರಾಮದ ಎಸ್ ಎನ್ ಡಿ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಶಾಲೆಯ ಮಕ್ಕಳಿಗೆ ಕೃಷ್ಣ ರಾಧೆಯ ಉಡುಗೆ ಹಾಕಿಕೊಂಡು ಮಕ್ಕಳು ವಿಜೃಂಭೀಸಿದರು. ತರಗತಿ ವರ್ಗಾವರು. ಎಲ್ ಕೆ ಜಿ,ಯು ಕೆ ಜಿ, 1 ರಿಂದ 5 ನೇ ತರಗತಿಯ ಮಕ್ಕಳಿಗೆ ಪ್ರಥಮ ದ್ವಿತೀಯ ಅಂತ ಎಲ್ಲ ಪಾಲಕರ ಸಮಕ್ಷಮದಲ್ಲಿ ಬಹುಮಾನ ವಿತರಿಸಲಾಯಿತು.
ಅದರಲ್ಲೂ ಜಾತಿ ಬೇದ ಮರೆತು ಮುಸ್ಲಿಂ ಸಮುಧಾಯದ 1ನೇ ತರಗತಿಯಲ್ಲಿ ರಿಧಾ ಕರ್ಜಗಿ ಹಾಗೂ ಯುಕೆಜಿ ವಿದ್ಯಾರ್ಥಿನಿ ರಿಫಾ ಕರ್ಜಗಿ ಎರಡು ವಿದ್ಯಾರ್ಥಿಗಳು ಪ್ರಥಮ ಬಹುಮಾನ ಪಡೆದುಕೊಂಡರು.
ರಾಧೆಯ ವೇಧದಲ್ಲಿ ಕಾಣಿಸಿಕೊಂಡರು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಸಂಸ್ಥೆಯ ವತಿಯಿಂದ ಸಮಾಧಾನಕರವಾದ ವಸ್ತುಗಳನ್ನು ನೀಡಲಾಯಿತು.
ನಂತರ ಮೋಸರಿನ ಗಡಿಗೆ ಒಡೆಯುವ ಸ್ಪರ್ಧೆಯನ್ನು ತರಗತಿವಾರು ಪಾಲಕರಿಗಾಗಿ ಏರ್ಪಡಿಸಲಾಗಿತ್ತು.
ಈ ವೇಳೆ ಪಾಲಕರಾದ ವೇದಾಂತ ಯರಜರಿ ಯು ಕೆ ಜಿ ಯಲ್ಲಿ ರೂಪಾ ಹೂಗಾರ, ಗೀತಾ ಪಾಟೀಲ, ಪರಸಪ್ಪ ವಡ್ಡರ, ಎಲ್ಲಾ ಮಕ್ಕಳಿಗೆ ಪ್ರಥಮ ಬಹುಮಾನ ವನ್ನು ಎಸ್ ಎನ್ ಡಿ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಅಧ್ಯಕ್ಷ ಎಂ ಎಸ್ ಕೊಪ್ಪ ಅವರು ಬಹುಮಾನ ವಿತರಿಸಿದರು. ಪಾಲಕ ಪ್ರತಿನಿಧಿ ಗೀತಾ ಪಾಟೀಲ ಮಾತನಾಡಿ ಹಳ್ಳಿಯಲ್ಲಿರುವ ನಮ್ಮಂತಹ ಎಲೆಮಾರಿಯ ಕಾಯಿಯಂತಿರುವ ಪ್ರತಿಭೆಗಳ್ಳನ್ನು ಗುರುತಿಸಿ ಅವರಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಒಳ್ಳೆಯ ಅವಕಾಶಗಳನ್ನು ಈ ಶಾಲೆ ಒದಗಿಸಿ ಕೊಡುತ್ತಿದೆ.ಈ ಶಾಲೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಇದೇ ವೇಳೆ ಗ್ರಾಮದಲ್ಲಿ ಪಥ ಸಂಚಲನ ಮಾಡಿ ಶ್ರೀ ಸಾಯಿ ಮಾಂದಿರಕ್ಕೆ ಹೋಗಿ ಸಾಯಿ ದರ್ಶನ ಪಡೆದುಕೊಂಡರು.
ಸಂಸ್ಥೆಯ ಅಧ್ಯಕ್ಷರು ಎಲ್ಲರಿಗೂ ಶುಭಾಶಯ ಕೋರಿದರು.
ಎಚ್ ಆರ್ ಬಾಗಲಕೋಟ, ನಿರೂಪಿಸಿದರು. ಶೋಭಾ ವಂದಿಸಿದರು. ನಿರ್ಣಾಯಾಕರಾಗಿ ವಿಜಯಲಕ್ಷ್ಮಿ ಯವರು ನಿರ್ವಹಿಸಿದರು.