ಶ್ರೀಗಳ ಪ್ರವಚನ ಯುವ ಜನಾಂಗಕ್ಕೆ ಮಾದರಿ
ಇಂಡಿ: ಶ್ರೀಗಳು ತಮ್ಮ ಆಧ್ಯಾತ್ಮಿಕ ಪ್ರವಚನದ ಮೂಲಕ ಸಾಮಾಜಿಕ ಕಳಕಳಿಯನ್ನು ಹೊಂದಿದವರು ಹಾಗೂ ಅವರು ಸದಾ ಮಕ್ಕಳಿಗೆ ಮಾರ್ಗದರ್ಶನ ಮತ್ತು ತತ್ವಗಳನ್ನು ಬೋಧಿಸುವ ಮೂಲಕ ದಾರಿದೀಪ – ವಾಗಿದ್ದಾರೆ. ಅಲ್ಲದೆ ಶ್ರೀಗಳ ಸರಳತೆ, ಆಧ್ಯಾತ್ಮಿಕ ಪ್ರವಚನ, ನಡೆ-ನುಡಿ ವಿಚಾರಗಳು ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿವೆ ಎಂದು ನಾದ ಸರಕಾರಿ
ಪ್ರೌಢಶಾಲೆ ಮುಖ್ಯ ಗುರು ಸಿ.ಎಂ. ಬಂಡಗರ ಹೇಳಿದರು.
ಮಂಗಳವಾರ ಪಟ್ಟಣದ ಆರ್.ಎಂ. ಶಹಾ ಪಬ್ಲಿಕ್ ಶಾಲೆಯಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಪುಣ್ಯಸ್ಮರಣೆ ಅಂಗವಾಗಿ ನಡೆದ ಗುರುನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ನಾದ ಪ್ರೌಢಶಾಲೆಯ ದೈಹಿಕ
ಶಿಕ್ಷಕ ಸಂಗನಗೌಡ ಹಚ್ಚಡದ ಮಾತನಾಡಿ,
ಸಿದ್ದೇಶ್ವರ ಶ್ರೀಗಳು 20-21ನೇ ಶತಮಾನದ ವಿಶ್ವ
ಮಾನವರು. ವಿವೇಕಾನಂದ ನಂತರ ಸಮಾಜದಲ್ಲಿರುವ
ಜನರಿಗೆ ಮಾರ್ಗದರ್ಶನ ನೀಡಿದವರು. ಅವರ
ಪ್ರವಚನದಿಂದ ಹಲವಾರು ಜನ ಜೀವನದಲ್ಲಿ
ಬದಲಾವಣೆಯನ್ನು ಕಂಡಿದ್ದಾರೆ ಎಂದು ಮಾರ್ಮಿಕವಾಗಿ
ನುಡಿದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಿ.ಆರ್. ಶಹಾ, ಶಿಕ್ಷಕ
ಬಿ.ಎ. ಕಡಿಹಳ್ಳಿ, ರೂಪಾ ಕಿಟ್ಟ್‍ದ, ಭಾಗ್ಯಜ್ಯೋತಿ ಕೋಳಾರಿ ಮಾತನಾಡಿದರು. ಸಂಸ್ಥೆಯ ಆಡಳಿತಾಧಿಕಾರಿ ಕಲ್ಪನಾ ಶಹಾ, ನಿಶ್ಕಾಂತ ಶಹಾ, ಕಾಲೇಜು ವಿಭಾಗದ ಪ್ರಾಂಶುಪಾಲ ಪರವೀನ್ ಜಮಾದಾರ್, ಎಲ್ಲ ಶಿಕ್ಷಕ ವೃಂದದವರು ಹಾಗೂ ಸಹ ಸಿಬ್ಬಂದಿ ವರ್ಗದವರು ಮಕ್ಕಳು ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವ ಮೂಲಕ ಶ್ರೀಗಳಿಗೆ ನಮನವನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶ್ರೀಗಳ ಕುರಿತು ವಿದ್ಯಾರ್ಥಿಗಳು
ಕಥಾವಾಚನ ಹಾಗೂ ಕವನ ವಾಚನ ಮಾಡಿದರು. ಸವಿತಾ ಸಾಲಿ ಅವರು ಶ್ರೀ ಸಿದ್ದೇಶ್ವರ ಮಹಾಸ್ವಾಮಿಜಿ – ಯವರ ಬಾಲ್ಯದಜೀವನ ಅವರ ಸಾಧನೆಗಳನ್ನು ಕುರಿತು ಸವಿವರವಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ದೇಶ್ವರ
ಮಹಾಸ್ವಾಮೀಜಿಯವರು ರಚಿಸಿದ ಪುಸ್ತಕಗಳನ್ನು ಸಂಸ್ಥೆಯ ವತಿಯಿಂದ ಎಲ್ಲ ಶಿಕ್ಷಕವೃಂದದವರಿಗೆ ವಿತರಿಸಲಾಯಿತು.
ಇಂಡಿ: ಪಟ್ಟಣದ ಆರ್.ಎಂ. ಶಹಾ ಪಬ್ಲಿಕ್ ಶಾಲೆಯಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಪುಣ್ಯಸ್ಮರಣೆ ಅಂಗವಾಗಿ ನಡೆದ ಗುರುನಮನ ಕಾರ್ಯಕ್ರಮದಲ್ಲಿ ಸಿ.ಎಂ. ಬಂಡಗರ ಮಾತನಾಡಿದರು.