ಶ್ರೀ ರಾಮ ಪ್ರಾಣ ಪ್ರತಿಷ್ಠಾಪನ ಮಹೋತ್ಸವ : ಸದ್ಭಾವ ಸೇವಾ ಸಮಿತಿಯಿಂದ ಪಾನಕ ಮಜ್ಜಿಗೆ ವಿತರಣೆ
ಹನೂರು: ಅಯೋದ್ಯೆಯ ರಾಮಮಂದಿರ ಉದ್ಘಾಟನಾ ಹಾಗೂ ಶ್ರೀರಾಮ ಪ್ರಾಣ ಪ್ರತಿಷ್ಠಾಪನ ದಿನದ ಅಂಗವಾಗಿ ಹನೂರಿನಲ್ಲಿ ಸದ್ಭಾವ ಸೇವಾ ಸಮಿತಿ ಹಾಗೂ ಆಟೋ ಚಾಲಕರ ಸಹಯೋಗದಲ್ಲಿ ಶ್ರೀರಾಮನಿಗೆ ಪೂಜೆ ಸಲ್ಲಿಸಿ ಪಾನಕ ಹಾಗೂ ಮಜ್ಜಿಗೆ ನೀಡಲಾಯಿತು.
ಹನೂರು ಪಟ್ಟಣದ ಆಟೋ ನಿಲ್ದಾಣದ ಮುಂಭಾಗ ಸದ್ಭಾವ ಸೇವಾ ಸಮಿತಿ ವತಿಯಿಂದ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನ ಅಂಗವಾಗಿ ಪಾನಕ ಹಾಗೂ ಮಜ್ಜಿಗೆಯನ್ನು ಶ್ರೀರಾಮ ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ವಿತರಿಸಿ ಸಂಭ್ರಮಿಸಿದರು. ಸದ್ಭಾವ ಸೇವಾ ಸಮಿತಿಯ ಅಧ್ಯಕ್ಷರಾದ ಗಂಗಾಧರ್ ಮಾತನಾಡಿ ಹಿಂದುಗಳ ಆರಾಧ್ಯ ದೈವ ಶ್ರೀರಾಮನ ಮಂದಿರ ಉದ್ಘಾಟನೆಯಾಗಿದ್ದು ಭಾರತೀಯರ ಮನಸಲ್ಲಿ ತುಂಬಾ ಸಡಗರ ಉಂಟುಮಾಡಿದೆ ಕೋಟಿ ಕೋಟಿ ಜನರ ಶತಮಾನಗಳ ಬಯಕೆಯೂ ಈ ದಿನ ಈಡೇರಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸದ್ಭಾವ ಸೇವಾ ಸಮಿತಿಯ ಸದಸ್ಯರುಗಳು,ಪಟ್ಟಣದ ನಾಗರೀಕರು, ಆಟೋ ಚಾಲಕರು ಭಾಗವಹಿಸಿದ್ದರು.