ಇಂಡಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮಣೆ..
ತಾಲೂಕು ಆಡಳಿತ ಸೌಧದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ..!
ಇಂಡಿ : ತಾಲೂಕು ಆಡಳಿತ ಕಛೇರಿಯಲ್ಲಿ ಉಪ ತಹಶಿಲ್ದಾರ ಬಸವರಾಜ ರಾವೂರ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶ್ರೀ ಕೃಷ್ಣ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚಾಣೆ ಮಾಡಿದರು.
ಈ ಸಂದರ್ಭದಲ್ಲಿ ಪಟ್ಟಣದ ತಾಲೂಕು ಮಿನಿ ವಿಧಾನ ಸೌಧದ ಕಾರ್ಯಾಲಯದ ಸಭಾಭವನದಲ್ಲಿ ಹಮ್ಮಿಕೊಂಡಿರುವ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮದಲ್ಲಿ ಭಾಗವಹಿಸಿ ಶ್ರೀ ಕೃಷ್ಣ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಉಪ ತಹಶಿಲ್ದಾರ ಬಿ.ಎ. ರಾವೂರ ಮಾತಾನಾಡಿದರು.
ನಾಡಿನಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಆಚರಣೆ ಜೋರು ಇದೆ. ಅದರಂತೆ ಶಾಲಾ, ಕಾಲೇಜು ಅದರಲ್ಲಿಯೂ ವಿಶೇಷವಾಗಿ ಪುಟಾಣಿ ಮಕ್ಕಳು ಶ್ರೀಕೃಷ್ಣ ವೇಷ ಧರಿಸಿ ಸಂಭ್ರಮಾಚರಣೆಗಳು ನಡೆಯುತ್ತೆವೆ. ಇಂದು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ಧೆಭಕ್ತಿಯಿಂದ ಆಚರಿಸೋಣ. ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸಿದ ಜಗದೋದ್ಧಾರಕನನ್ನು ಪೂಜಿಸಿ ಪಾವನರಾಗೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿರಸ್ತೆದಾರ ಆರ್ ಬಿ ಮೂಗಿ, ದೈಹಿಕ ಶಿಕ್ಷಣ ತಾಲೂಕು ಅಧಿಕಾರಿ ಎ.ಎಸ್ ಲಾಳಸೇರಿ , ಕಂದಾಯ ನೀರಿಕ್ಷಕ ಎಚ್ ಎಚ್ ಗುನ್ನಾಪುರ, ಸಂಕೇತ ಪಾಟೀಲ ಗ್ರಾಮ ಲೆಕ್ಕಾಧಿಕಾರಿ ಪ್ರಕಾಶ ಚವಡಿಹಾಳ, ಹೆಚ್ಚುವರಿ ಗ್ರಾಮ ಲೆಕ್ಕಾಧಿಕಾರಿ ನಧಾಪ್ ರೆಶ್ಮೆ ಇಲಾಖೆ ಮಠಪತಿ, ಅರಣ್ಯ ಇಲಾಖೆ ರಾಜು ಹಾಗೂ ಅನೇಕ ಇಲಾಖೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.