ಇಂಡಿ : ಇತ್ತೀಚೆಗೆ 30/01/2022 ಭಾನುವಾರ ದಂದು ಶ್ರೀ ಜಗನ್ನಾಥ ದಾಸರು ಎಂಬ ಚಲನ ಚಿತ್ರದ 50ನೇ ದಿನದ ಸಂಭ್ರಮ ವನ್ನು ಬೆಂಗಳೂರಿನ ಉತ್ತರಾಧಿ ಮಠದಲ್ಲಿ ಆಚರಿಸಲಾಯಿತು.
ಆ ಸಮಯದಲ್ಲಿ “ವಿಶ್ವ ಮಧ್ವಮತ ವೆಲ್ಫೇರ ಅಸೋಸಿಯೇಶನ್ ಬೆಂಗಳೂರು” ದವರು ಚಿತ್ರದ ನಟ,ನಿರ್ದೇಶಕ ನಿರ್ಮಾಪಕರನ್ನು , ಹಾಗೂ ನಿಂಬೆ ನಾಡಿನ ಗ್ರಾಮೀಣ ಭಾಗದ ಯುವ ಕವಿ ರಾಘವೇಂದ್ರ ದೇಶಪಾಂಡೆ (ಗೊರನಾಳ) ಭಕ್ತಿ ಗೀತೆ “ಕಾಡುವ ನೋವನು ನೀಗಿಸು” ಎಂಬ ಗೀತೆಯನ್ನು ಬರೆದಿದ್ದು ಇವರನ್ನು, ಹಾಗೂ ಸಂಗೀತ ನಿರ್ದೇಶಕ ರನ್ನು , ಸಂಗೀತಗಾರರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ತೇಜಸ್ವಿನಿ ಅನಂತ ಕುಮಾರ, ಪ್ರಾಣೇಶ ಗಂಗಾವತಿ, ಶಾಸಕ ಮಳವಳ್ಳಿಯವರು ಇನ್ನೂ ಮುಂತಾದ ಗಣ್ಯರು ಭಾಗವಹಿಸಿದ್ದರು. ಶಾಸಕ ಮಳವಳ್ಳಿ ಅವರು, ಮಾತಾನಾಡಿ ಈ ಚಲನ ಚಿತ್ರವನ್ನು ಎಲ್ಲಾ ಶಾಲಾ ಮಕ್ಕಳಿಗೂ ಪ್ರದರ್ಶಿಸಿಬೇಕು. ಮಕ್ಕಳಿಲ್ಲಿ ಸಂಸ್ಕಾರ ಸಂಸ್ಕೃತಿ ಬೆಳೆಯುತ್ತದೆ, ನಡೆ ನುಡಿಯ ಬಗ್ಗೆ ತಿಳಿಯುತ್ತದೆ ಎಂದರು.
ತೇಜಸ್ವಿನಿ ಅನಂತಕುಮಾರ ಅವರು ಮಾತನಾಡಿ, ಶ್ರೀ ಜಗನ್ನಾಥ ದಾಸರು ಚಿತ್ರ ದಾಖಲೆ ನಿರ್ಮಿಸಿದೆ ನಾವು ತಿಳಿದು ಕೊಂಡಿದ್ದಕ್ಕಿಂತ ಹೆಚ್ಚು ಜನರು ಇದನ್ನು ವೀಕ್ಷಣೆ ಮಾಡಿದ್ದಾರೆ, ಮೇಲಾಗಿ ಈ ಚಿತ್ರ ಕುಟುಂಬದ ಎಲ್ಲ ಜನರು ಕುಳಿತು ನೋಡಬಹುದಾದಂಥ ಚಿತ್ರ ಇದಾಗಿದೆ. ಈ ಚಿತ್ರವನ್ನು ತೆರೆಗೆ ತಂದಂಥ ನಿರ್ದೇಶಕ, ನಿರೂಪಕ ಹಾಗೂ ಎಲ್ಲಾ ಕಲಾವಿದರಿಗೂ ತುಂಬಾ ಅಭಿನಂದನೆ ತಿಳಿಸಿದರು.