ಇಂಡಿ : ಹಿಜಾಬ್ ವಿವಾದದ ಹೈಕೋರ್ಟ್ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಮುಸ್ಲಿಂ ಸಮಾಜದ ವರ್ತಕರು ತಮ್ಮ ಹೊಟೇಲ್, ಅಂಗಡಿ- ಮುಂಗಟ್ಟುಗಳು ಬಂದ್ ಮಾಡಿದ್ದಾರೆ. ಇಂಡಿ ಬಸ್ ಸ್ಟ್ಯಾಂಡ್, ಮಾರ್ಕೆಟ್ ಸೇರಿದಂತೆ ಬಹುತೇಕ ಭಾಗಗಳಲ್ಲಿ ಬಂದ್ ಮಾಡಲಾಗಿದೆ. ಇನ್ನು 75% ಕ್ಕಿಂತ ಹೊಟೇಲ್, ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು. ಆದ್ರೇ, ಯಾವುದೇ ಅಹಿತರ ಘಟನೆಗಳು ನಡೆಯದಂತೆ ಪೊಲೀಸರಿಂದ ಬೀಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.