ವಿಜಯಪುರ | ಗುಂಡು ಹಾರಿಸಿ ದರೋಡೆಕೋರನ ಬಂಧನ..! ಎಲ್ಲಿ ಗೊತ್ತಾ..?
ವಿಜಯಪುರ: ಮುಸುಕುಧಾರಿಯ ಮೇಲೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಈ ಬಗ್ಗೆ ವಿಜಯಪುರ ಜಿಲ್ಲಾಸ್ಪತ್ರೆಗೆ ಎಸ್ಪಿ ಲಕ್ಷ್ಮಣ ನಿಂಬರಗಿ ಭೇಟಿ ಮಾತನಾಡಿದರು. ತಪ್ಪಿಸಿಕೊಳ್ತಿದ್ದ ಮುಸುಕುಧಾರಿ ಮೇಲೆ 5 ಸುತ್ತು ಪೈರಿಂಗ್ ಮಾಡಲಾಗಿದೆ. ಕಾಲಿಗೆ ಮೂರು ಗುಂಡು ತಗಲಿವೆ. ಎಕ್ಸರೇ ಮಾಡಿಸಲಾಗುತ್ತಿದೆ ಎಂದರು. ಅಲ್ಲದೇ, ಮುಸುಕುಧಾರಿ ಗ್ಯಾಂಗ್ ಸಂಬಂಧ ಈ ವರೆಗೆ 3 ಪ್ರಕರಣಗಳು ದಾಖಲು ಆಗಿದ್ದಾವೆ. ಹೀಗಾಗಿ ದರೋಡೆಕೋರ ಬಂಧನಕ್ಕೆ ತಂಡಗಳ ರಚನೆ ಮಾಡಲಾಗಿದ್ದು, ಗೋಳಗುಮ್ಮಟ ಸಿಪಿಐ ಮಲ್ಯಯ್ಯ ಮಠಪತಿ ಗುಂಡು ಹಾರಿಸಿ ದರೋಡೆಕೊರನ ಬಂಧಿಸಿದ್ದಾರೆ. ಮಧ್ಯಪ್ರದೇಶ ಮಹೇಶ್ ಬಂಧಿತ ಆರೋಪಿಯಾಗಿದ್ದಾನೆ. ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದರು.