ಹಿಂದೂಗಳ ಹಬ್ಬಗಳಲ್ಲಿ ಶಿವರಾತ್ರಿಯ ಪವಿತ್ರ ಹಬ್ಬ..!
ಇಂಡಿ: ತಾಲೂಕಿನ ಶಿರಶ್ಯಾಡ ಹಿರೇಮಠದ ಅಭಿನವ
ಮುರುಘೇಂದ್ರ ಶಿವಾಚಾರ್ಯರ ನೇತೃತ್ವದಲ್ಲಿ
ಮಹಾಶಿವರಾತ್ರಿ ಹಬ್ಬದ ನಿಮಿತ್ಯ ಸಾವಿರಾರು ಜನ ಭಕ್ತರು 10 ನೇ ವರ್ಷ ಶಿರಶ್ಯಾಡ ಗ್ರಾಮದಿಂದ ಸಂಗೋಗಿ
ಗ್ರಾಮದ ಸಂಗಮನಾಥ ದೇವಾಲಯದವರೆಗೆ
ಪಾದಯಾತ್ರೆ ಮೂಲಕ ತೆರಳಿ ಸಾರ್ವಜನಿಕ ಇಷ್ಟಲಿಂಗ
ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಶಿರಶ್ಯಾಡ ಹಿರೇಮಠದ ಅಭಿನವ
ಮುರುಘೇಂದ್ರ ಶಿವಾಚಾರ್ಯರು ಆಶಿರ್ವಚನ ನೀಡಿ,
ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಶಿವರಾತ್ರಿಯ
ಶಿವಯೋಗವೂ ಒಂದಾಗಿದ್ದು ಇಂದಿನ ದಿವಸ ನದಿಯಲ್ಲಿ ಪುಣ್ಯಸ್ನಾನ ಮಾಡಿ ಇಷ್ಟಲಿಂಗ ಪೂಜೆ ನೆರವೇರಿಸಿ ಕೊಳ್ಳುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.
ಪಾದಯಾತ್ರೆಯಲ್ಲಿ ಶರಣುಸಾಹುಕಾರ ಬಿರಾದಾರ,
ಬಾಬುಗೌಡ ಪಾಟೀಲ, ಕಲ್ಲಪ್ಪಗೌಡ ಪಾಟೀಲ,
ಡಾ|| ಗುರುದತ್ತ ದೇಸಾಯಿ, ಹಿರಗಪ್ಪ ಸುರಗಿಹಳ್ಳಿ
ಭೂಮಗೊಂಡ ಪಾಸೋಡಿ, ಶಿವಗೊಂಡ ಕಮತಗಿ,
ಚಂದ್ರಶೇಖರ ಪಾಸೋಡಿ ಯಶವಂತ ತೆಲಗ, ಸಂಗಮೇಶ ಪಾಸೋಡಿ, ಯಶವಂತ್ರಾಯ ಬಿರಾದಾರ, ಸಿದ್ದು ಅಂಕಲಗಿ, ಶಿವು ಮೇತ್ರಿ ಸೇರಿದಂತೆ ಮತ್ತಿತರರು
ಇದ್ದರು.
ಇಂಡಿ: ಅಭಿನವ ಮುರುಘೇಂದ್ರ ಶಿವಾಚಾರ್ಯರ
ನೇತೃತ್ವದಲ್ಲಿ ಮಹಾಶಿವರಾತ್ರಿ ಹಬ್ಬದ ನಿಮಿತ್ಯ ಸಾವಿರಾರು ಜನ ಭಕ್ತರು 10 ನೇ ವರ್ಷ ಶಿರಶ್ಯಾಡ ಗ್ರಾಮದಿಂದ ಸಂಗೋಗಿ ಗ್ರಾಮದ ಸಂಗಮನಾಥ
ದೇವಾಲಯದವರೆಗೆ ಪಾದಯಾತ್ರೆ ಮೂಲಕ ತೆರಳಿ
ಸಾರ್ವಜನಿಕ ಇಷ್ಟಲಿಂಗ ಪೂಜೆ ನೆರವೇರಿಸಿದರು.