ಇಂಡಿಯಲ್ಲಿ ಶಿವಚಿದಂಬರ ಜಯಂತಿ ಆಚರಣೆ
ಇಂಡಿ : ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಇಂದು ಶ್ರೀ ಶಿವಚಿದಂಬರ ಮಹಾಸ್ವಾಮಿಗಳ 265 ನೇ ಜಯಂತಿ ಆಚರಣೆಯನ್ನು ಶ್ರೀ ರಾಘವೇಂದ್ರ ಸೇವಾ ಸಮೀತಿ ಹಾಗೂ ಶ್ರೀ ಗುರುಸಾರ್ವಭೌಮ ಭಜನಾ ಮಂಡಳಿ ಸಹಯೋಗದೊಂದಿಗೆ ಅತ್ಯಂತ ಭಕ್ತಿ ಶೃದ್ಧೆಗಳಿಂದ ಕೃಷ್ಣಾಜಿ ಚಟ್ಟರಕಿ ಇವರ ಪೌರೋಹಿತದಲ್ಲಿ ಆಚರಿಸಲಾಯಿತು.
ಬೆಳಿಗ್ಗೆ ಶಿವಚಿದಂಬರರಿಗೆ ಕಾಕಡಾರತಿ ನಂತರ
ರುದ್ರಾಭಿಷೇಕ ಮಹಾಪೂಜೆ, ಮಂಗಳಾರುತಿ, ಜನ್ಮೋತ್ಸವ, ತೊಟ್ಟಿಲೋತ್ಸವ, ಪಲ್ಲಕ್ಕಿ ಸೇವೆ, ನೈವೇದ್ಯ,
ತೀರ್ಥ ಪ್ರಸಾದ ಸಾಯಂಕಾಲ ಸಂಗೀತ ಸೇವೆ
ಕಾರ್ಯಕ್ರಮ ಅತ್ಯಂತ ವಿಜೃಂಬಣೆಯಿಂದ ಸಾಂಗವಾಯಿತು.
ಆಚರಣೆಯಲ್ಲಿ ಇಂಡಿ ತಾಲೂಕಾ ಬ್ರಾಹ್ಮಣ ಸಮಾಜ
ಅಧ್ಯಕ್ಷರಾದ ಶ್ರೀ ಸತೀಶ್ಚಂದ್ರ ಜಿ.ಕುಲಕರ್ಣಿ,
ವಕೀಲರು, ಜಿ.ಎಸ್.ಜೋಶಿ ವಕೀಲರು, ಆನಂದ ಕುಲಕರ್ಣಿ, ದತ್ತಾ ಜೋಶಿ ಇಂಜಿನಿಯರ್, ದತ್ತಾ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ, ಸಂಜೀವ ಚಟ್ಟರಕಿ, ಎನ್.ಕೆ. ನಾಡಪುರೋಹಿತ, ಎಸ್.ಬಿ.ಕುಲಕರ್ಣಿ,
ಶಿವಚಿದಂಬರ ಕುಲಕರ್ಣಿ, ಮನೋಜ ಕುಲಕರ್ಣಿ, ಜಗನ್ನಾಥ ಪಾಟೀಲ, ಎಚ್.ವಿ. ಪಾಟೀಲ, ಮಹೇಶ ಜೋಶಿ, ಶ್ರೀಧರ ದೇಶಪಾಂಡೆ, ಜಗನ್ನಾಥ ಜಾಗೀರದಾರ, ಕೆ.ಡಿ.ಜೋಶಿ, ಸಿ.ಎ.ಕುಲಕರ್ಣಿ, ದತ್ತೋಪಂಥ ಕುಲಕರ್ಣಿ ಹಾಗೂ ನೂರಾರು ಸುಮಂಗಲೆಯರು ಮತ್ತು ತಾಲೂಕಿನ
ವಿಪ್ರಬಾಂಧವರು ಭಕ್ತಿ ಶೃದ್ಧೆಗಳಿಂದ ಭಾಗವಹಿದ್ದರು.