ಲಿಂಗಸೂಗೂರು: ಪಟ್ಟಣಕ್ಕೆ ಆಗಮಿಸಿದ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ಬೆಂಗಳೂರ ರಾಜ್ಯಾಧ್ಯಕ್ಷರಾದ ಸಿದ್ದಪ್ಪ ಮುಂಡಗೋಡ ಹಾಗೂ ರಾಜ್ಯ ಉಪಾಧ್ಯಕ್ಷರಾದ ಸಂತೋಷ್ ಬೈಲಹೊಂಗಲ ಇವರಿಗೆ ಲಿಂಗಸೂಗೂರು ತಾಲೂಕು ಹಡಪದ ಅಪ್ಪಣ್ಣ ಯುವಕ ಸಂಘದ ವತಿಯಿಂದ ಸನ್ಮಾನಿಸಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯಾಧ್ಯಕ್ಷ ನಾಗರಾಜ್ ಸರ್ಜಾಪುರ, ಲಿಂಗಸುಗೂರು ತಾಲುಕಾ ಯುವಕ ಸಂಘದ ಅಧ್ಯಕ್ಷ ಶರಣಬಸವ ಈಚನಾಳ, ಗೌರವಾಧ್ಯಕ್ಷ ಮುತ್ತಣ್ಣ ಗುಡಿಹಾಳ, ಪ್ರಧಾನ ಕಾರ್ಯದರ್ಶಿ ಚುಡಾಮಣಿ ಚಿತ್ತಾಪುರ, ಆದಪ್ಪ, ಶರಣಬಸವ, ಮಂಜುನಾಥ, ವಿಶ್ವ, ಬಸವರಾಜ, ರವಿ, ನಾಗರಾಜ್, ವಿರೇಶ, ಅಶೋಕ್ ಇನ್ನಿತರರು ಉಪಸ್ಥಿತರಿದ್ದರು.