ಕುರಿ ಸಾಕಾಣಿಕೆ ಲಾಭದಾಯಕ ಡಾ. ಅಡಕಿ
ಇಂಡಿ : ರೈತರು ಕೇವಲ ಕೃಷಿಯನ್ನೇ ಅವಲಂಬಿಸದೇ ಕುರಿ ಮೆಕೆ ಮರಿ ಸಾಕುತ್ತ ಅಧಿಕ ಲಾಭ ಪಡೆದುಕೊಳ್ಳಬಹುದು ಎಂದು ಪಶು ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ. ರಾಜಕುಮಾರ ಅಡಕಿ ಹೇಳಿದರು.
ಅವರು ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡ ಕುರಿ ಮತ್ತು ಮೇಕೆ ಸಾಗಾಣ ಕೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದೆ ಉಪ ಜೀವನಕ್ಕಾಗಿಕುರಿ ಸಾಗಾಣ ಕೆ ಮಾಡುತ್ತಿದ್ದರು. ಇಂದು ಹೆಚ್ಚು ಹಣ ಗಳಿಸಲು ಕುರಿ ಮೆಕೆ ಸಾಗಾಣ ಕೆ ರೈತರು ಮಾಡಬೇಕಾಗಿದೆ. ಸರಕಾರದಿಂದ ಕುರಿ ಸಾಗಾಣ ಕೆಗೆ ಅನೇಕ ಸವಲತ್ತುಗಳಿದ್ದು ಅದರ ಲಾಭ ಪಡೆದುಕೊಳ್ಳಲು ಕೇಳಿಕೊಂಡರು.
ವಿಜಯಪುರ ಕೃಷಿ ವಿವಿಯ ಪ್ರಾಧ್ಯಾಪಕ ಜೆ. ಶ್ರೀನಿವಾಸ ಮಾತನಾಡಿ ಕೃಷಿ ಜತೆಗೆ ಪ್ರತಿ ತಿಂಗಳು ಆದಾಯ ಬರುವಂತಹ ಉಪ ಕಸಬು ಮಾಡಲು ರೈತರು ಸ್ವಾವಲಂಬಿ ಜೀವನ ಸಾಗಿಸಲು ಕುರಿ ಸಾಗಾಣ ಕೆ ಅತ್ಯುತ್ತಮ ದಾರಿ. ಆರಂಭಿಕ ಹಂತದಲ್ಲಿ ಖರೀದಿಸಿದ ಮರಿಗಳನ್ನು ಚೆನ್ನಾಗಿ ಕಾಳಜಿ ಮಾಡಿ ಮೇಯಿಸಿ ದೊಡ್ಡದಾದ ಮೇಲೆ ಮಾರಾಟ ಮಾಡಿದಾಗ ಲಕ್ಷಾಂತರ ರೂ ಆದಾಯ ಪಡೆಯಬಹುದು ಎಂದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಶಿವಶಂಕರಮೂರ್ತಿ ಮಾತನಾಡಿ ಕೃಷಿಯೊಂದಿಗೆ ಉಪ ಕಸಬು ಮಾಡುವ ರೈತರಿಗೆ ರೈತರು ಅರ್ಥಿಕವಾಗಿ ಸದೃಡರಾಗಲು ಕುರು ಸಾಘಾಣ ಕೆ ಯೋಜನೆ ಫಲಪ್ರದವಾಗಿದೆ. ಕೇವಲ ಸರ್ಟಿಫಿಕೇಟಗಾಗಿ ಯುವಕರು ತರಬೇತಿ ಮಾಡದೇ ಕುರಿ ಸಾಗಾಣ ಕೆಗೆಂದೆ ತರಬೇತಿ ಮಾಡಿ ಒಳ್ಳೆಯ ಉದ್ಯೋಗ ಮಾಡಿ ಜೀವನ ಹೆಚ್ಚಿಸಿಕೊಳ್ಳಲು ಸಲಹೆ ನೀಡಿದರು.
ವಿಜ್ಞಾನಿ ಪ್ರಸಾದ ಭಾರತದಲ್ಲಿರುವ ಕುರಿಯ ತಳಿಗಳು, ಸರಕಾರದ ಸೌಲಭ್ಯಗಳು,ಕುರಿಯ ಸಾಕಾಣ ಕೆಯ ವಸತಿ ನಿರ್ವಹಣೆ, ಕುರಿ ಮರಿಯ ನಿರ್ವಹಣೆ ಸಾಮಾನ್ಯ ರೋಗಗಳ ಕುರಿತು ತರಬೇತಿದಾರರಿಗೆ ಮಾಹಿತಿ ನೀಡಿದರು.
ಡಾ. ಪ್ರೇಮಚಂದ್ರ, ಡಾ. ಪ್ರಕಾಶ ಮಾತನಾಡಿದರು.
ವೇದಿಕೆಯಲ್ಲಿ ಡಾ. ಬಾಲಾಜಿ, ಮಜೀದ , ಡಾ. ವೀಣಾ ಚಂದಾವರಿ, ಮಂಜುಳಾ ಹೊಸಮನಿ ಮತ್ತಿತರಿದ್ದರು.
ಇಂಡಿ ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಕುರಿ ಸಾಗಾಣ ಕೆ ಕಾರ್ಯಕ್ರಮ ಉದ್ಘಾಟಿಸಿ ಡಾ. ರಾಜಕುಮಾರ ಅಡಕಿ ಮಾತನಾಡಿದರು.

hdrForward: 6; highlight: 1; algolist: 0;
multi-frame: 1;
brp_mask: 8;
brp_del_th: 0.0000,0.0000;
brp_del_sen: 0.0000,0.0000;
delta:1;
bokeh:1;
module: photo;hw-remosaic: false;touch: (-1.0, -1.0);sceneMode: 4194304;cct_value: 0;AI_Scene: (-1, -1);aec_lux: 267.50076;aec_lux_index: 0;albedo: ;confidence: ;motionLevel: 0;weatherinfo: null;temperature: 33;