ಶರಣಪ್ಪ ಸುಣಗಾರ ಅವರಿಗೆ ವಿಧಾನ ಪರಿಷತ್ ನಾಮ ನಿರ್ದೇಶನ ಆಗ್ರಹ ..!
ದೇವರಹಿಪ್ಪರಗಿ : ರಾಜಕೀಯವಾಗಿ ಹಿಂದುಳಿದಿರುವ ಶೋಷಿತ ತಳವಾರ ಸಮುದಾಯಕ್ಕೆ ರಾಜಕೀಯ ವಿಧಾನ ಪರಿಷತ್ ನಾಮ ನಿರ್ದೇಶನ ಸೇರಿದಂತೆ, ನಿಗಮ- ಮಂಡಳಿಗಳಿಗೆ ಅವಕಾಶ ಕಲ್ಪಿಸಬೇಕೆಂದು ಅಖಿಲ ಕರ್ನಾಟಕ ನಾಯಕ ತಳವಾರ ಜನಾಂದಗ ಹಿತರಕ್ಷಣಾ ಸಮಿತಿ ದೇವರಹಿಪ್ಪರಗಿ ತಾಲೂಕು ಅಧ್ಯಕ್ಷ ವಿಜಯ ಸಾಲವಾಡಗಿ ಹಾಗೂ ಪದಾಧಿಕಾರಿಗಳು ಸಮುದಾಯದ ಪರವಾಗಿ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಸುಮಾರು ೫೦ ವರ್ಷಗಳಿಂದ ಕರ್ನಾಟಕ ರಾಜ್ಯದಲ್ಲಿ ರಾಜಕೀಯವಾಗಿ ಅನೇಕ ಸಮುದಾಯಗಳಿಗೆ ಹಲವಾರು ಕ್ಷೇತ್ರದ ಜನರಿಗೆ ರಾಜ್ಯ ವಿಧಾನ ಪರಿಷತ್ ಆಯ್ಕೆ ಹಾಗೂ ನಾಮ ನಿರ್ದೇಶನ ಮಾಡುವ ಮೂಲಕ ನ್ಯಾಯ ನೀಡಿದ್ದು, ಈ ಸರ್ಕಾರದ ಕಾರ್ಯಕ್ಕೆ ಶ್ಲಾಘನೀಯ.
ಆದರೆ ಪ್ರಾಚೀನ ಇತಿಹಾಸ ಇರುವ ಬುಡಕಟ್ಟು ಜನಾಂಗವಾಗಿರುವ ಸಮಾಜದ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸುತ್ತಿರುವ ತಳವಾರ ಸಮುದಾಯದ ಯಾವುದೇ ವ್ಯಕ್ತಿಗೂ ರಾಜ್ಯ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಮಾಡುವುದಾಗಲಿ, ನಾಮ ನಿರ್ದೇಶನ ಮಾಡುವುದಾಗಲಿ ಮಾಡಿಲ್ಲ. ಇರುವುದರಿಂದ ಈ ಸಮುದಾಯಕ್ಕೆ ಅನ್ಯಾಯ ಮಾಡಿದಂತಾಗಿದೆ.
ಉತ್ತರ ಕರ್ನಾಟಕ ಹಾಗೂ ಮುಂಬೈ ಪ್ರಾಂತದಲ್ಲಿ ಬರುವ ಬೆಳಗಾವಿ, ಧಾರವಾಡ, ಬಾಗಲಕೋಟ ಹಾಗೂ ವಿಜಯಪುರ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಸಂಖ್ಯೆ ಹೊಂದಿದ್ದರೂ ಇಲ್ಲಿಯವರೆಗೆ ಈ ಸಮುದಾಯದ ಯಾವೊಬ್ಬ ವ್ಯಕ್ತಿಗೂ ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆ ಮಾಡದೇ ಇರುವುದು ಮತ್ತು ನಾಮ ನಿರ್ದೇಶನ ಮಾಡದೇ ಸಮುದಾಯಕ್ಕೆ ಅನ್ಯಾಯ ಮಾಡಿದಂತಾಗಿದೆ.
ವರ್ತಮಾನದಲ್ಲಿ ತಳವಾರ ಪರಿವಾರ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ದೊರಕದೆ ಇರುವುದರಿಂದ ಅನೇಕ ಜ್ವಲಂತ ಸಮಸ್ಯೆಗಳು ಸಮುದಾಯದಲ್ಲಿವೆ. ಹಾಗೂ ಹಲವಾರು ಕಾರಣಗಳಿಂದ ಸಮಾಜವು ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ಇದೆ. ಆದ್ದರಿಂದ ಕಾಂಗ್ರೆಸ್ ಕಟ್ಟಾ ಕಾರ್ಯಕರ್ತನಾಗಿ ಮುಖಂಡನಾಗಿ ಜನಸಾಮಾನ್ಯರ ಸೇವೆ ಮಾಡುತ್ತೀರುವ ಹಾಗೂ ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಯಾಗಿ ಸ್ಪರ್ಧಿಸಿ ಪರಾಭವಗೊಂಡಿರುವ ಶರಣಪ್ಪ ಸುಣಗಾರ ಅವರಿಗೆ ವಿಧಾನ ಪರಿಷತ್ ಸದಸ್ಯಯನ್ನಾಗಿ ಆಯ್ಕೆ ಮಾಡಿ ಈ ಸಮುದಾಯಕ್ಕೆ ನ್ಯಾಯ ಒದಗಿಸಬೇಕಾಗಿದೆ. ಅದಲ್ಲದೇ ಮುಂಬರುವ ಲೋಕ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಸಮುದಾಯಕ್ಕೆ ನ್ಯಾಯ ಒದಗಿಸುವ ಕಾರ್ಯ ಮಾಡಿದ್ದೆಯಾದಲ್ಲಿ ಪ್ರಶಂಸನೀಯ ಕಾರ್ಯವಾಗುತ್ತದೆ. ಹಾಗಾಗಿ ಈ ಸಮುದಾಯದ ಪರವಾಗಿ ಅಖಿಲ ಕರ್ನಾಟಕ ನಾಯಕ ತಳವಾರ ಜನಾಂಗದ ಹಿತಾ ರಕ್ಷಣಾ ಸಮಿತಿ ದೇವರಹಿಪ್ಪರಗಿ ತಾಲೂಕು ಘಟಕ ಅಧ್ಯಕ್ಷ ವಿಜಯ ಸಾಲವಾಡಗಿ, ಉಪಾಧ್ಯಕ್ಷ ಸುರೇಶ ನಾಟೀಕಾರ, ಪ್ರಧಾನ ಕಾರ್ಯದರ್ಶಿ ಪ್ರಭು ನಾಟೀಕಾರ, ಕಾರ್ಯದರ್ಶಿ ಸಾವಿರಲಿಂಗ ಬಂದ್ರೋಡಿ, ಶಿವಾನಂದ ಗೊರಗುಂಗಿ ಹಾಗೂ ಪದಾಧಿಕಾರಿಗಳು ಸರಕಾರಕ್ಕೆ ಪತ್ರಿಕಾ ಮಾದ್ಯಮದ ಮೂಲಕ ಒತ್ತಾಯ ಮಾಡುತ್ತವೆ ಎಂದು ತಿಳಿಸಿದರು.