ಲಿಂಗಸೂಗೂರು: ಇತ್ತೀಚಿನ ದಿನಗಳಲ್ಲಿ ಹುಟ್ಟು ಹಬ್ಬದ ಸಂಭ್ರಮ ವೆಂದರೆ ಸಾಕು ಮೋಜು ಮಸ್ತಿ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಇವುಗಳ ಮಧ್ಯೆ ಸಮಾಜದಲ್ಲಿ ಪ್ರತಿಯೊಂದು ಶುಭ ಕಾರ್ಯಗಳು ಇತರರಿಗೆ ಮಾದರಿ ಆಗಬೇಕು ಎಂಬ ಸಾಲಿನಲ್ಲಿ ಸೇರಿರುವ ಲಿಂಗಸುಗೂರು ತಾಲೂಕಾ ಹಡಪದ ಸಮಾಜದ ಅಧ್ಯಕ್ಷ ಶರಣಬಸವ ಈಚನಾಳ ತನ್ನ ಮಗಳ ಎರಡನೇ ವರ್ಷ ದ ಹುಟ್ಟು ಹಬ್ಬದ ಪ್ರಯುಕ್ತ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಅಂಕಲಿಪಿ, ನೋಟ್ ಬುಕ್, ಪೆನ್ನು, ವಿತರಣೆ ಮಾಡುವ ಮೂಲಕ ಮಕ್ಕಳಿಗೆ ಶೈಕ್ಷಣಿಕ ಜೀವನಕ್ಕೆ ಪ್ರೋತ್ಸಾಹ ನಿಟ್ಟಿನಲ್ಲಿ ಮಗಳ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.
ಇದಲ್ಲದೆ ಕಳೆದ ಬಾರಿ ಮೊದಲ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಕುಡಿಯುವ ನೀರಿನ ಅರವಟ್ಟಿಗೆ ಸ್ಥಾಪನೆ ಮಾಡಿದ್ದರು. ಕೋವಿಡ್ ಸಂದರ್ಭದಲ್ಲಿ ತನ್ನ ಹುಟ್ಟು ಹಬ್ಬವನ್ನು ಕಾರ್ಮಿಕರಿಗೆ ಸ್ಯಾನಿಟೈಜರ್, ಮಾಸ್ಕ್, ನೀಡಿ ಸಿಹಿ ಹಂಚುವ ಮೂಲಕ ಸಾಮಾಜಿಕ ಕಳಕಳಿ ಮೆರೆದು ಸಾರ್ವಜನಿಕರ ಮೆಚ್ಚುಗೆ ಪಾತ್ರರಾಗಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆದಪ್ಪ ಮೇಟಿ, ಗ್ರಾಮ ಪಂಚಾಯತ್ ಸದಸ್ಯರಾದ ಮರಿಯಪ್ಪ ಕಟ್ಟಿಮನಿ, ಕೇಮಣ್ಣ, ರೈತ ಮುಖಂಡ ಆನಂದ ಕುಂಬಾರ, ಸಣ್ಣಗದ್ದೆಪ್ಪ ಚಿಗರಿ, ಬಸವರಾಜ ಕಟ್ಟಿಮನಿ, ಮಲ್ಲರೆಡ್ಡಪ್ಪ ದೊಡ್ಡಮನಿ, ಸಹದೇವಪ್ಪ ಕರಡಿ, ಅಮರೇಶ ಮೇಟಿ, ಅಮರೇಶ ಕುಂಬಾರ, ಅಂಗನವಾಡಿ ಕಾರ್ಯಕರ್ತೆಯರಾದ ಸರಸ್ವತಿ ಬಡೀಗೇರ್, ಶರಣಮ್ಮ, ಇನ್ನಿತರಿದ್ದರು.