ಶ್ರೀ ಶಾಂತೇಶ್ವರ ಬ್ಯಾಂಕು ೩೦ ಲಕ್ಷ ರೂ ಲಾಭ
ಇಂಡಿ : ಉಳ್ಳವರು ಮತ್ತು ಬಡವರ ಮಧ್ಯೆ ಉಂಟಾಗಿದ್ದ
ಕAದಕವನ್ನು ತೆಗೆದುಹಾಕಿ ಬಡವರು ಮತ್ತು ಮಧ್ಯಮ – ವರ್ಗದವರ ಅಭಿವೃದ್ಧಿ ಸಾಧಿಸಿ ಅರ್ಥಿಕವಾಗಿ ಮೇಲೆ ಬರಲು ಪ್ರೇರೆಪಿಸಿದ್ದು ಸಹಕಾರ ಸಂಘಗಳು ಎಂದು ಶ್ರೀ ಶಾಂತೇಶ್ವರ ಸೌಹಾರ್ಧ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕಾಸುಗೌಡ ಬಿರಾದಾರ ಹೇಳಿದರು.
ಪಟ್ಟಣದ ಶ್ರೀ ಸದ್ಗುರು ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ನಡೆದ ೧೪ ನೇ ವಾರ್ಷೀಕ ಮಹಾ – ಸಭೆಯಲ್ಲಿ ಮಾತನಾಡಿದರು. ಪಟ್ಟಣದಲ್ಲಿ ೧೪ ವರ್ಷಗಳ ಹಿಂದೆ ಸ್ಥಾಪನೆಯಾದ ಶ್ರೀ ಶಾಂತೇಶ್ವರ ಸಹಕಾರಿ ಸೌಹಾರ್ಧ ಕಳೆದ ಮಾರ್ಚ ೨೦೨೩ ರ ವರೆಗೂ ಸದಸ್ಯರಿಗೆ ೧೪ ಕೋಟಿ ೭೦ ಲಕ್ಷ ರೂ ಗಳಿಗೂ ಹೆಚ್ಚು ಸಾಲ ನೀಡಿದ್ದು ೨೦೨೨-೨೩ ನೇ ಸಾಲಿ ನಲ್ಲಿ ೩೦ ಲಕ್ಷ ರೂ ಲಾಭಗಳಿಸಿ ನಿಮ್ಮೇಲ್ಲರ ಸಹಕಾರದಿಂದ ಮುನ್ನಡೆಯುತ್ತಿದೆ ಎಂದರು. ಸಹಕಾರಿ ಸಂಘ ಸಂಪೂರ್ಣ ಗಣಕೀಕೃತಗೊಂಡಿದ್ದು, ಆನ್ ಲೈನ್ ಸೇವೆ ಆರ್.ಟಿ.ಜಿ.ಎಸ್, ನೆಫ್ಟ ಮತ್ತು ಅಕೌಂಟ ಟ್ರಾನ್ಸಫರ ವ್ಯವಸ್ಥೆ ಪ್ರಾರಂಭಿಸಲಾಗುವದು ಎಂದರು.
ಸಂಘ ಎಪಿಎಂಸಿ ಎದುರಿಗೆ ಸ್ವಂತ ಕಟ್ಟಡ ಹೊಂದಿದೆ. ೧
ಕೋಟಿ ೬೦ ಲಕ್ಷ ರೂ ವೆಚ್ಚದಲ್ಲಿ ನಾಲ್ಕು ಅಂತಸ್ತಿನ
ಕಟ್ಟಡ ನಿರ್ಮಾಣಗೊಂಡಿದೆ ಎಂದರು. ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಂಕರಗೌಡ ಎಸ್ ಪಾಟೀಲರು ಮಾತನಾಡಿ ೨೦೦೯ ರಲ್ಲಿ ಕೇವಲ ೩ ಲಕ್ಷ ರೂ ಬಂಡವಾಳದೊಂದಗೆ ಪ್ರಾರಂಭವಾದ ಬ್ಯಾಂಕು ಇಂದು ದುಡಿಯುವ ಬಂಡವಾಳ ೨೭ ಕೋಟಿ ರೂ ಇದೆ. ೧೪ ಕೋಟಿ ೭೬ ಲಕ್ಷ ರೂ ಸಾಲ ವಿತರಣೆ, ಶೇಅರ್ ಬಂಡವಾಳ ೧ ಕೋಟಿ ೩೫ ಲಕ್ಷ ರೂ ಠೇವಣಿ ೨೨ ಕೋಟಿ ೭೫ ಲಕ್ಷ ಮತ್ತು ಗುಂತಾವನೆ ೮ ಕೋಟಿ ೫೯ ಲಕ್ಷ ಇದೆ ಮತ್ತು ಎರಡು ಸಾವಿರ ಸದಸ್ಯರನ್ನು ಹೊಂದಿದೆ ಎಂದರು.
ನಿಕಟಪೂರ್ವ ನಿರ್ದೇಶಕ ಕಲ್ಲಪ್ಪ ಮಸಳಿ ಇವರ
ಮೊಮ್ಮಗಳು ಚೇತನಾ ಬಸವರಾಜ ಮಸಳಿ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾಗಿ ನೇಮಕಾತಿ ಹೊಂದಿದ್ದಕ್ಕೆ ಸನ್ಮಾನಿಸಲಾಯಿತು. ಆಡಳಿತ ಮಂಡಳಿಯ ಅಶೋಕಗೌಡ ಪಾಟೀಲ, ಭೀಮರಾಯ ಮದರಖಂಡಿ,
ಮಲ್ಲನಗೌಡ ಬಿರಾದಾರ, ವೀರನಗೌಡ ಪಾಟೀಲ, ಸೋಮಶೇಖರ ಬಿರಾದಾರ, ವಿಜಯಕುಮಾರ ಉಡಚಣ, ಶಾಂತುಗೌಡ ಬಿರಾದಾರ, ಭೀಮಾಶಂಕರ ಮಸಳಿ, ಶ್ರೀಮತಿ ಗೌರಾಬಾಯಿ ಹದಗಲ್ಲ, ಮಾಮಲ್ಲಪ್ಪ ಜೋರಾಪುರ, ಲಿಂಬು ರಾಠೋಡ, ಶ್ರೀಮತಿ ಲೀಲಾವತಿ ಪತ್ತಾರ, ಸಿಬ್ಬಂದಿವರ್ಗದವರಾದ ಸಂಪತ್ ಹಿಳ್ಳಿ,
ಮೌಲಾಲಿ ರಾಠೋಡ, ವಿನೋದ ದೇಸಾಯಿ, ಕೇದಾರ ಬಿರಾದಾರ, ಸುರೇಶ ಹೊಟಗಿ, ಸಾತಪ್ಪ ಸದಲಾಪುರ,
ಅಕ್ಷಯಕುಮಾರ ಯಾಳಗಿ, ಗಜಾನನ ಪಾಟೀಲ, ನಾಗನಗೌಡ ಪಾಟೀಲ, ಶ್ರೀಶೈಲ ಕನ್ನೂರ ಮತ್ತಿತರಿದ್ದರು.