ಶಂಕರಾಚಾರ್ಯ ಜಯಂತಿ; ಅಲ್ಪಾಯುಷ್ಯದಲ್ಲಿ ಅಗಾಧ ಸಾಧನೆ : ಉಪ ತಹಶಿಲ್ದಾರ ಬಸವರಾಜ
ಇಂಡಿ : ಪ್ರಾಚೀನ ಭಾರತದ ಇತಿಹಾಸವು ಅನೇಕ ಪ್ರಸಿದ್ಧ ತತ್ವಜ್ಞಾನಿಗಳ ಹೆಸರನ್ನು ಒಳಗೊಂಡಿದೆ. ಅವರಲ್ಲಿ ಆದಿ ಶಂಕರಾಚಾರ್ಯರೂ ಒಬ್ಬರು ಎಂದು ಉಪ ತಹಶಿಲ್ದಾರ ಬಸವರಾಜ ರಾವೂರ ಹೇಳಿದರು.
ಪಟ್ಟಣದ ತಾಲ್ಲೂಕು ಆಡಳಿತ ಸೌಧದಲ್ಲಿ, ತಾಲ್ಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಆದಿ ಶಂಕರಾಚಾರ್ಯರ ಜಯಂತಿಯ ನಿಮಿತ್ತವಾಗಿ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚಾಣೆ ಮಾಡಿ ಮಾತನಾಡಿದರು.
ಶಂಕರಾಚಾರ್ಯರು ಪ್ರಾಚೀನ ಕಾಲದ ಶ್ರೇಷ್ಠ ಋಷಿಗಳಲ್ಲಿ ಒಬ್ಬರು. ಅವರ ಜನ್ಮದಿನವನ್ನು ದೇಶದಾದ್ಯಂತ ಶಂಕರಾಚಾರ್ಯ ಜಯಂತಿ ಎಂದು ಸಂಭ್ರಮದಿಂದ ಆಚರಿಸಲಾಗುತ್ತದೆ. ಕೇರಳದ ಕಾಲಡಿ ಪ್ರದೇಶದಲ್ಲಿ 8ನೇ ಶತಮಾನದಲ್ಲಿ ಜನಿಸಿದ ಶಂಕರ್ ಭಗವದ್ಪಾದರು 32 ವರ್ಷಕ್ಕೇ ಮರಣ ಹೊಂದಿದರೂ, ಅವರು ಸನಾತನ ಸಂಸ್ಕೃತಿಗೆ ನೀಡಿದ ಕೊಡುಗೆ ಅಪಾರವಾದುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಂದಾಯ ನೀರಿಕ್ಷಿಕ ಎಚ್ ಎಚ್ ಗುನ್ನಾಪುರ, ಗ್ರಾಮ ಆಡಳಿತ ಅಧಿಕಾರಿ ಪ್ರಕಾಶ ಚೌಡಿಹಾಳ, ಸಂಕೇತ್ ಪಾಟೀಲ, ಎಂ ಎಂ ಕೊಡತೆ, ವಿನಯ ಕುಲಕರ್ಣಿ, ಪಿ ಎಸಗ ಮಠಪತಿ ಹಾಗೂ ಇನ್ನೂ ಅನೇಕ ಇಲಾಖೆ ಅಧಿಕಾರಿಗಳು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.