ಬೆಳೆ ಸಮೀಕ್ಷೆದಾರರ ಸಂಘದ ಜಿಲ್ಲಾ ಕಾರ್ಯದರ್ಶಿಯಾಗಿ ಶಾಜೀದ ಆಯ್ಕೆ.
ಇಂಡಿ : ಬೆಳೆ ಸಮೀಕ್ಷೆದಾರರ ಸಂಘದ ಜಿಲ್ಲಾ ಕಾರ್ಯದರ್ಶಿಯಾಗಿ ಶಾಜೀದ ಮಹಮ್ಮದ್ ಶಫೀಕ ನಾಗಠಾಣ ಆಯ್ಕೆಯಾಗಿದ್ದು, ಸಂಘದ ಪದಾಧಿಕಾರಿಗಳು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು
ಇಂಡಿ ಪಟ್ಟಣದ ವ್ಯಾಪ್ತಿಯಲ್ಲಿ ವಾರ್ಡ 9 ರ ತವಕಲಶ್ಯಾ ಗಲ್ಲಿಯ ಶಾಜೀದ ಮಹ್ಮದಶಫೀಕ ನಾಗರಾಣ ಅವರು ಮಾತನಾಡಿ, ಸುಮಾರು 8 ವರ್ಷಗಳಿಂದ ಬೆಳೆಗಳ ಸಮೀಕ್ಷೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದೆನೆ. ಈ ಸದ್ಯ ಬೆಳೆ ಸಮೀಕ್ಷೆದಾರರ ಕುಂದು-ಕೊರತೆಗಳ ನಿವಾರಣೆ ಮಾಡಿಕೊಳ್ಳುವ ಸದುದ್ದೇಶದಿಂದ, 2024-2025ನೇ ಸಾಲಿನಲ್ಲಿ ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘ ರಚನೆಯಾಗಿದ್ದು, ಈ ಸಂಘದ ಅಂಘವಾಗಿ ಕಾರ್ಯನಿರ್ವಹಿಸುವ ವಿಜಯಪೂರ ಜಿಲ್ಲಾ ಘಟಕದಲ್ಲಿ ಜಿಲ್ಲಾ ಸಹ ಕಾರ್ಯದರ್ಶಿಯ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು ತಿಳಿಸಿದರು. ಪ್ರಾಮಾಣಿಕವಾಗಿ
ಬೆಳೆ ಸಮೀಕ್ಷೆದಾರರ ಕಾರ್ಯವ್ಯಾಪ್ತಿಗೆ ತೊಂದರೆಯಾಗುವ ಸಮಸ್ಯೆಗಳಿಗೆ ಅನುಗುಣವಾಗಿ ಸ್ಪಂದಿಸಲು ಬದ್ಧನಿದ್ದೇನೆ. ನನ್ನ ಕಾರ್ಯವನ್ನು ಕಾನೂನಿನ ಚೌಕಟ್ಟಿನಲ್ಲೇ ನಿರ್ವಹಿಸುವೆನೆಂದು ಎಂದು ತಿಳಿಸಿದರು.


















