ಸೇವಾಲಾಲ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಭವ್ಯ
ಮೆರವಣೆಗೆ
ಇಂಡಿ : ಪಟ್ಟಣದ ದೇಶಪಾಂಡೆ ತಾಂಡಾದಲ್ಲಿ ನೂತನವಾಗಿ ಕಟ್ಟಿದ ಸಂತ ಸೇವಾಲಾಲ ಮತ್ತು ದುರ್ಗಾದೇವಿ ದೇವಸ್ಥಾನದಲ್ಲಿ ಕಳಸಾಹರೋಹಣ ಮತ್ತು ಸಂತ ಸೇವಾಲಾಲ ಹಾಗೂ ಶ್ರೀದುರ್ಗಾದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಜರುಗಿತು.
ಪಟ್ಟಣದ ಶಿವಾಜಿ ವೃತ್ತದಿಂದ ದೇಶಪಾಂಡೆ ತಾಂಡಾದ ವರೆಗೆ ಭವ್ಯ ಮೆರವಣೆಗೆ ನಡೆಯಿತು. ಮಹಿಳೆಯರು ಕಳೆದ ೫ ದಿವಸದಿಂದ ಗೋಧಿ ಸಸಿ ನೆಟ್ಟು ಕುಂಭ ಮತ್ತು ಗೋಧಿ ಸಸಿ ಹೊತ್ತ ೫೦೧ ಮಹಿಳೆಯರಿಂದ ಭವ್ಯ ಮೆರವಣೆಗೆ ನಡೆಯಿತು. ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಬಾಲಯೋಗಿ ಸೋಮನಿಂಗ ಮಹಾರಾಜರು ನಡೆಸಿಕೊಟ್ಟರು.
ಚೌಡಾಪುರದ ಬಳಿರಾಮ ಮಹಾರಾಜರು ಮಾತನಾಡಿ
ಲಂಬಾಣಿ ಜನಾಂದಲ್ಲಿರುವ ಅಜ್ಞಾನ ಅಂಧಕಾರವನ್ನು
ದೂರಮಾಡಿ ಜ್ಞಾನ ಮಾರ್ಗ ತೋರಿಸಿದ ಸೇವಾಲಾಲರು
ನಾಡು ಕಂಡ ಶ್ರೇಷ್ಠ ಸಂತರು ಎಂದರು. ಪ್ರಾಧ್ಯಾಪಕ ವಿಜಯಕುಮಾರ ರಾಠೋಡ ಮಾತನಾಡಿ ಶಿಕ್ಷಣದ ಮಹತ್ವವನ್ನು ಸಾರುವ ಮೂಲಕ ಎಲ್ಲರೂ ಶಿಕ್ಷಿತರಾಗಿ ಅಕ್ಷರ ಜ್ಞಾನವನ್ನು ಪಡೆದು ಜಗತ್ತಿಗೆ ದಾರಿದೀಪವಾಗಿ ಎಂದು ಸಾರಿದ ಸೇವಾಲಾಲರು ಸಮ ಸಮಾಜ ನಿರ್ಮಾಣ ಹಾಗೂ ಸರ್ವರಲ್ಲೂ ಸೋದರತೆಯ ಭಾವನೆಯನ್ನು ಮೂಡಲು ಪ್ರೇರೆಪಿಸಿದರು. ತನ್ನ ಸಮಾಜದ ಜನರ ಕಷ್ಟಕ್ಕಾಗಿ ತಮ್ಮ ಪ್ರಾಣಾರ್ಪಣೆಗೂ ಸಿದ್ಧರಾದರು ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಪಿಂಟು ರಾಠೋಡ, ಹೀರು ರಾಠೋಡ, ಬಾಮ ರಾಠೋಡ, ಥಾವರು ಚವ್ಹಾಣ,
ರಂಗನಾಥ ಚವ್ಹಾಣ, ಸೋಮು ರಾಠೋಡ, ಗಣೇಶ
ರಾಠೋಡ ಮತ್ತಿತರಿದ್ದರು.