ವರದಿ: ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ. ಪಟ್ಟಣದ ಕೆಬಿಎಂಪಿಎಸ್ ಶಾಲೆಯಲ್ಲಿ ಭಾರತ ಸೇವಾದಳ ಶಿಕ್ಷಕ ಮತ್ತು ಶಿಕ್ಷಕಿಯರ ಪುನಶ್ಚೇತನ ಶಿಬಿರವನ್ನು ಆಯೋಜಿಸಲಾಗಿತ್ತು.
ಮಕ್ಕಳಲ್ಲಿ ದೇಶಪ್ರೇಮ ದೇಶ ಅಭಿಮಾನ ಮತ್ತು ರಾಷ್ಟ್ರಪ್ರೇಮವನ್ನು ಸೇವಾದಳದಿಂದ ಸಾಧ್ಯ . ಗಾಂಧೀಜಿ ನೆಹರು ಮತ್ತು ಡಾ.ಎನ್ .ಎಸ್. ಹರ್ಡಿಕರ್ ಮುಂದಾಳತ್ವದಲ್ಲಿ ಸ್ವಾತಂತ್ರ್ಯ ಕಿಚ್ಚನ್ನು ಎಲ್ಲರಲ್ಲಿ ಹೆಚ್ಚಿಸುವ ಸಲುವಾಗಿ 1923ರಲ್ಲಿ ಶಿಸ್ತು ದೇಶಾಭಿಮಾನ ಬೆಳೆಸಲು ಸೇವಾದಳ ಸ್ಥಾಪನೆ ಆಯಿತು. ಸೇವಾದಳದ ತರಬೇತಿಯನ್ನು ಪಡೆದುಕೊಂಡ ಶಾಲೆಗಳಲ್ಲಿ ಮಕ್ಕಳಿಗೆ ದೇಶಾಭಿಮಾನ ಭಾವೈಕ್ಯತೆ ನಾಯಕತ್ವ ಗುಣ ಸೇವಾ ದಳದ ಬಗ್ಗೆ ಹೇಳಿಕೊಡಬೇಕು ಎಂದು ಬೆಳಗಾವಿ ವಿಭಾಗದ ವಲಯ ಸಂಚಾಲಕರಾದ ನಾಗೇಶ್ ಡೋಣುರ ಅವರ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿದರು.
1923ರಲ್ಲಿ ರಾಷ್ಟ್ರಪಿತ ಗಾಂಧೀಜಿ ಭಾರತದ ಪ್ರಥಮ ಪ್ರಧಾನ ಪಂಡಿತ್ ಜವಾಹರ್ ಲಾಲ್ ನೆಹರು ಮತ್ತು ಡಾಕ್ಟರ್ ನಾಸು ಹರಡಿಕರ್ ಅವರ ಮುಂದಾಳತ್ವದಲ್ಲಿ ಸೇವಾದಳ ಸ್ಥಾಪನೆಯಾದ ಮೇಲೆ ಆ ಸಮಯದಲ್ಲಿ ಸ್ವತಂತ್ರದ ಕಿಚ್ಚನ್ನು ಎಲ್ಲರಲ್ಲಿ ಹೆಚ್ಚಿಸುವ ಶಿಸ್ತು ದೇಶಾಭಿಮಾನ ಬೆಳೆಸಲು ಹರ್ಡಿಕರ್ ಅವರು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದರು , ನಮ್ಮ ತಾಲೂಕಿನಲ್ಲಿ ಶಿಬಿರಗಳನ್ನ ಆಯೋಜನೆ ಮಾಡ್ರಿ ಅದಕ್ಕೆ ತಗಲು ವೆಚ್ಚವನ್ನು ನಾನು ನೀಡುತ್ತೇನೆ . ಶಿಕ್ಷಕರು ಮುಖ್ಯ ಶಿಕ್ಷಕರು ಆಸಕ್ತಿ ವಹಿಸಿ ಸ್ಥಳವನ್ನು ಆಯ್ಕೆ ಮಾಡಿರಿ ಎಂದು ಭಾರತ ಸೇವಾದಳ ಮುದ್ದೇಬಿಹಾಳ ತಾಲೂಕ ಘಟಕದ ಉಪಾಧ್ಯಕ್ಷರಾದ ಸಿದ್ಲಿಂಗಯ್ಯ ಕಲ್ಯಾಣಮಠ ಅವರ ತಿಳಿಸಿದರು.
ಶಾಲೆಗಳಲ್ಲಿ ರಾಷ್ಟ್ರೀಯ ಹಬ್ಬಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮ , ಸಂಸ್ಕೃತಿ ಕಾರ್ಯಕ್ರಮಗಳನ್ನು ನಿರ್ಭಯದಿಂದ ಮಾಡಬೇಕಾದರೆ ಸೇವಾದಳವೇ ಕಾರಣ ಈ ಸೇವಾದಳ ತರಬೇತಿಯಿಂದ ದೈಹಿಕ ಶಿಕ್ಷಕರಾದ ನಾವು ಮಕ್ಕಳಲ್ಲಿ ದೇಶಾಭಿಮಾನ ದೇಶಭಕ್ತರನ್ನಾಗಿ ರೂಪಿಸುವಲ್ಲಿ ,ನಾಯಕತ್ವ ಗುಣ ಬಳಸುವಲ್ಲಿ ತುಂಬಾ ಸಹಾಯಕವಾಗಿದೆ ಎಂದು ಮುದ್ದೇಬಿಹಾಳ ತಾಲೂಕ ಸರಕಾರಿ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಎ.ಸಿ.ಕೆರೂರ ಅವರು ತಿಳಿಸಿದರು .
ಕೇವಲ ತರಬೇತಿಯನ್ನು ಪಡೆದುಕೊಂಡು ಹೋಗುವುದು ಅಲ್ಲ ಪಡೆದುಕೊಂಡಂತ ತರಬೇತಿ ಸದುಪಯೋಗ ಆಗಬೇಕು ಅಂದರೆ, ತಮ್ಮ ತಮ್ಮ ಶಾಲೆಗಳಲ್ಲಿ ಈ ಸೇವಾದಳ ಶಾಖೆಯನ್ನು ತೆರೆದು ಮಕ್ಕಳಲ್ಲಿ ಇದರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಗಬೇಕು ಅಂದಾಗ ಮಾತ್ರ ಕಾರ್ಯಕ್ರಮಕ್ಕೆ ಮೆರವ ಸಿಕ್ಕ ಹಾಗೆ ಎಂದು ಎಂ.ಎಸ್ .ಕವಡಿಮಟ್ಟಿ ಮುಖ್ಯೋಪಾಧ್ಯರು ಸರ್ಕಾರಿ ಪ್ರೌಢಶಾಲೆ ಮುದ್ದೇಬಿಹಾಳ ಅತಿಥಿ ಭಾಷಣದಲ್ಲಿ ತಿಳಿಸಿದರು.
ಪುನಶ್ಚೇತನ ತರಬೇತಿ ಕೇವಲ ಹೆಸರಿಗೆ ಮಾತ್ರ ಆಗದೆ ಶಿಕ್ಷಕರಾದ ನಾವು ಶಾಲೆಯಲ್ಲಿ ಅನುಷ್ಠಾನ ಮಾಡಿ ತಾಲೂಕಿನಲ್ಲಿ ಒಳ್ಳೆಯ ಒಂದು ಪರಿಸರದಲ್ಲಿ ಶಿಬಿರವನ್ನು ಏರ್ಪಡಿಸಬೇಕು ಏರ್ಪಡಿಸುವುದರಿಂದ ಮಕ್ಕಳಲ್ಲಿ ಸಂಸ್ಕೃತಿಕ ಚಟುವಟಿಕೆ ಉತ್ಸಾಹ, ಕಲೆಯನ್ನು ತುಂಬಿದಂತಾಗುತ್ತದೆ ಎಂದು ತಾಲೂಕ ದೈಹಿಕ ಶಿಕ್ಷಣ ಶಿಕ್ಷಕರ ಅಧ್ಯಕ್ಷ ಎಸ್ ಎಸ್ ಲಮಾಣಿ ತಿಳಿಸಿದರು . ಇಂಥ ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವುದರಿಂದ ಸಮಾಜದಲ್ಲಿ ಗುರುತಿಸಿಕೊಳ್ಳಬಹುದು ಮತ್ತು ಉನ್ನತ ಸಂಘ-ಸಂಸ್ಥೆಗಳೆಗಳಲ್ಲಿ ಕಾರ್ಯನಿರ್ವಹಿಸಲು ಅವಕಾಶ ಸಿಗುತ್ತದೆ ಎಂದು ಭಾರತ ಸೇವಾದಳದ ಜಿಲ್ಲಾ ಘಟಕದ ಸದಸ್ಯರಾದ ದ್ಯಾಮನಗೌಡ ಪಾಟೀಲ್ ತಿಳಿಸಿದರು.
ನಾವು ನಮಗಾಗಿ ಬದುಕುವುದಕ್ಕಿಂತ ಸಮಾಜಕ್ಕಾಗಿ ಬದುಕಿದಾಗ ಮಾತ್ರ ಸಮಾಜದಲ್ಲಿ ಒಳ್ಳೆ ಗೌರವ ಮತ್ತು ಗುರುತಿಸಿಕೊಳ್ಳಲು ಸಾಧ್ಯ , ದೇಶ ನಮಗೇನು ನೀಡಿದೆ ಅನ್ನೋದಕ್ಕಿಂತ ದೇಶಕ್ಕಾಗಿ ನಾವೇನು ಮಾಡುತ್ತಿದ್ದೇವೆ ಎನ್ನುವುದು ಮುಖ್ಯ ಇಂಥ ಸಂಘ ಸಂಸ್ಥೆಗಳಿಂದ ಅಳಿಲು ಸೇವೆ ಮಾಡುವ ಒಂದು ಅವಕಾಶ ಸಿಗಲಿದೆ ಹಾಗಾಗಿ ವಿಭಾಗ, ಜಿಲ್ಲಾ ,ತಾಲೂಕು ,ಸಂಘಟಿಕರಾದ ತಾವುಗಳು ನಮ್ಮ ತಾಲೂಕಿನಲ್ಲಿ ಶಿಬಿರವನ್ನು ಆಯೋಜಿಸಿ ಮಕ್ಕಳಲ್ಲಿ ಶಿಕ್ಷಕರಲ್ಲಿ ಇದರ ಬಗ್ಗೆ ಅರಿವು ಮೂಡಲಿ ಅದಕ್ಕೆ ಎಲ್ಲ ರೀತಿಯ ಸಹಕಾರವನ್ನು ನಾವು ನೀಡುತ್ತೇವೆ ಎಂದು ಪ್ರಭುಲಿಂಗ ಶಿವಲಿಂಗಪ್ಪ ಕಡಿ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು .
ವೇದಿಕೆ ಮೇಲೆ ಮುದ್ದೇಬಿಹಾಳ ಘಟಕದ ಕಾರ್ಯದರ್ಶಿಗಳಾದ ಬೀರಪ್ಪ ಜಗಲಿ , ಎಂ.ವಿ.ಕೋರವಾರ, ಇದ್ದರು . ಪ್ರಾರ್ಥನೆಯನ್ನು ಹನುಮಗೌಡ ಪಿರಾಪುರ ಮಾಡಿದರು, ಎಸ್ ಸಿ ಪಾಟೀಲ್ ಸ್ವಾಗತವನ್ನು ಕೋರಿದರು, ಬಿ.ಬಿ.ಪೂಜಾರಿ ವಂದನಾರ್ಪಣೆ, ವಿಠ್ಠಲ್ ತೆಗ್ಗಿ ನಿರೂಪಣೆಯನ್ನು ಮಾಡಿದರು.