ತೊಗರಿ ಬೆಳೆದ ರೈತ ಹವಾಮಾನ ವೈಪರೀತ್ಯದಿಂದ ಹೂ ಮತ್ತು ಕಾಯಿ ಉದುರುತ್ತಿದ್ದರೆ ಈ ಕೆಳಗಿನ ಮಾಹಿತಿ ನೋಡಿ..!
ಇಂಡಿ : ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ತೊಗರಿ ಬೆಳೆದ ರೈತ ಜಮೀನಗಳಲ್ಲಿ ಹವಾಮಾನ ವೈಪರೀತ್ಯದಿಂದ ಹೂ ಮತ್ತು ಕಾಯಿ ಉದುರುತ್ತಿರುವದು ಕಂಡು ಬಂದಲ್ಲಿ ರೈತರು ಬೆಳೆ ವಿಮೆ ನೊಂದಣ ಮಾಡಿದ ರಶೀದಿ ಜಿಪಿಎಸ್ ಫೋಟೋದೊಂದಿಗೆ ಅರ್ಜಿಯನ್ನು ಆಯಾ ರೈತ ಸಂಪರ್ಕ ಕೇಂದ್ರ ಅಥವಾ ಓರಿಯಂಟಲ್ ವಿಮಾ ಸಂಸ್ಥೆಯ ಪ್ರತಿನಿಧಿ ಇವರಿಗೆ ನ. ೩೦ ರೊಳಗೆ ನೀಡಲು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಚನಬಸಪ್ಪ ಝಳಕಿ ೬೩೬೦೩೨ ೯೩೭೮ ಇವರಿಗೆ ಸಂಪರ್ಕಿಸಲು ಮಹಾದೇವಪ್ಪ ತಿಳಿಸಿದ್ದಾರೆ.