ಪ್ರಕೃತಿಯಲ್ಲಿ ಪರಮಾತ್ಮನನ್ನು ಕಾಣು :ಎಸ್ ಜಿ ಸಂಗಾಲಕ
ಇಂಡಿ : ಜಗತ್ತಿನಲ್ಲಿ ಎಲ್ಲಕ್ಕಿಂತ ಮುಖ್ಯವಾದ ಆಸ್ತಿವೆಂದರೆ, ಅದು ಆರೋಗ್ಯ ಮಾತ್ರ. ಆದ್ದರಿಂದ ಪ್ರತಿಯೊಬ್ಬರು ತಮ್ಮ ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ವಿರಬೇಕು ಎಂದು ಪ್ರಾದೇಶಿಕ ಅರಣ್ಯ ಅಧಿಕಾರಿ ಎಸ್ ಜಿ ಸಂಗಾಲಕ ಹೇಳಿದರು.
ತಾಲ್ಲೂಕಿನ ಜೇವೂರ ಗ್ರಾಮದ ಪ್ರಾದೇಶಿಕ ಅರಣ್ಯ, ಸಾಮಾಜಿಕ ಅರಣ್ಯ ವಲಯ , ಝಳಕಿ ಆರೋಗ್ಯ ಕೇಂದ್ರ, ತಾಲೂಕ ಆರೋಗ್ಯ ಇಲಾಖೆ ಹಾಗೂ ಪ್ರಾಥಮಿಕ ಅಂಚೆ ಇಲಾಖೆ ಇವರ ಸಹಯೋಗದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಹಾಗೂ ಸಿಬ್ಬಂದಿ ವರ್ಗದವರ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಅಂಚೆಮಿಮೆ ಬಗ್ಗೆ ಮಾಹಿತಿ ಜೊತೆಗೆ ಬೆಂಕಿ ನಿರ್ವಹಣಾ ಕ್ರಮಗಳ ಕುರಿತು ಕಾರ್ಯಗಾರ ಕಾರ್ಯಕ್ರಮದ ಉದ್ಘಾಟನೆ ನೆರೆವೆರಿಸಿ ಮಾತನಾಡಿದರು.
ಪ್ರತಿಯೊಬ್ಬರು ಮನೆ ಮನೆ ಮುಂದೆ ಹಸಿರು ಗಿಡ ನಡಿಸಿ, ಖಾಲಿ ಇರುವ ಜಾಗದಲ್ಲಿ ಮರ ಗಿಡಗಳನ್ನು ಬೆಳಿಸಿ, ಎಲ್ಲಿಯವರೆಗೆ ಹಸಿರು ಇರುತ್ತದೆಯೋ ಅಲ್ಲಿಯ ವರೆಗೆ ಮನುಷ್ಯನ ಉಸಿರಾಟ ಇರುತ್ತೆದೆ, ಅದರ ಮಹತ್ವ ಅರಿತು, ನಿಸರ್ಗ ಕಾಪಾಡಿ ಎಂದು ಹೇಳಿದರು.
ಇಂದಿನ ಆಧುನಿಕ ಯುಗದಲ್ಲಿ ಕೆಮಿಕಲ್ ಮಿಶ್ರಿತ ಆಹಾರ ಸೇವನೆ, ರಾಸಾಯನಿಕ ಸಿಂಪರಡನೆ ಮಾಡಿದ ಬೆಳೆಗಳನ್ನು ಇಂದು ಬೆಳೆಯುತ್ತೆವೆ, ಅವುಗಳನ್ನು ತಿಂದು ನಾವು ಬದುಕುತ್ತಿದ್ದೇವೆ ಆದ್ದರಿಂದ ಇಂದಿನ ಸದೃಡವಾದ ದೇಹ ಇಲ್ಲಾ, ಕಾಯಲೇಗಳು,ಇಂದಿನ ಯುಗದಲ್ಲಿ ಹೆಚ್ಚುತ್ತಿವೆ ಎಂದರು.
ಈ ಸಂದರ್ಭದಲ್ಲಿ ಸಾಮಾಜಿಕ ಅರಣ್ಯ ವಲಯ ಅಧಿಕಾರಿ ಮಂಜುನಾಥ ಧೂಳೆ, ತಾಲೂಕ ನೌಕರ ಸಂಘದ ಅಧ್ಯಕ್ಷ ಬಸವರಾಜ ರಾವೂರ,ಡಾ. ಹುಂಡೆಕರ ಆರೋಗ್ಯ ಇಲಾಖೆ ಅಧಿಕಾರಿಗಳು,ಎಸ್ ಎಮ್ ಹಿರೇಮಠ ಅಂಚೆ ಇಲಾಖೆ ಅಧಿಕಾರಿಗಳು , ಗೋಟ್ಯಾಳ ಆರೋಗ್ಯ ಇಲಾಖೆ ಅಧಿಕಾರಿ, ಅರಣ್ಯ ಇಲಾಖೆ, ಆರೋಗ್ಯ ಇಲಾಖೆ, ಅಂಚೆ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು ಇದ್ದರು.
ಝಳಕಿ ಸಮೀಪದ ಜೇವೂರದ ಇಂಡಿ ಪ್ರಾದೇಶಿಕ ಅರಣ್ಯ ವಲಯ, ಸಾಮಾಜಿಕ ಅರಣ್ಯ ವಲಯ, ತಾಲೂಕ ಆರೋಗ್ಯ ಇಲಾಖೆ ಪ್ರಾಥಮಿಕ ಆರೋಗ್ಯ ಕೇಂದ್ರ ಝಳಕಿ,ಹಾಗೂ ಅಂಚೆ ಇಲಾಖೆ ಇವರ ಸಹಯೋಗದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಅಂಚೆಮಿಮೆ ಬಗ್ಗೆ ಮಾಹಿತಿ, ಬೆಂಕಿ ನಿರ್ವಹಣಾ ಕ್ರಮಗಳ ಕುರಿತು ಕಾರ್ಯಗಾರ ಕಾರ್ಯಕ್ರಮದ ಜ್ಯೋತಿ ಬೆಳಗಿಸಿದ ಎಸ್ ಜಿ ಸಂಗಾಲಕ ಪ್ರಾದೇಶಿಕ ಅರಣ್ಯ ಅಧಿಕಾರಿ ಇಂಡಿ ರವರು ಮಾತನಾಡಿದರು.