ಕ್ರೀಡಾ ಸಾಧನೆಗೆ ಗೌರವದ ಮುದ್ರೆ: ಎಂ.ಕೆ. ಗುಡಿಮನಿಗೆ ಗೌರವ ಡಾಕ್ಟರೇಟ್ ಪ್ರಧಾನ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ತಾಲೂಕಿನ ಡವಳಗಿ ಗ್ರಾಮದ ಆರ್‌ಡಿಪಿಆರ್ ಇಲಾಖೆಯ ಉದ್ಯೋಗಿ ಹಾಗೂ ರಾಷ್ಟ್ರಮಟ್ಟದ ಕ್ರೀಡಾಪಟು ಎಂ.ಕೆ. ಗುಡಿಮನಿ ಅವರ ಕ್ರೀಡಾ ಕ್ಷೇತ್ರದ ಅನನ್ಯ ಸಾಧನೆಗೆ ಗೌರವದ ಮುದ್ರೆ ನೀಡಲಾಗುತ್ತದೆ.
ಹೊಸೂರಿನಲ್ಲಿ ಶನಿವಾರ ಆಯೋಜಿಸಿದ್ದ ವಿಶೇಷ ಸಮಾರಂಭದಲ್ಲಿ ಅಮೆರಿಕನ್ ವೀಸಡಂ ಫೀಸ್ ವಿಶ್ವವಿದ್ಯಾಲಯದ ವತಿಯಿಂದ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ನೀಡಿ ಸನ್ಮಾನಿಸಲಾಯಿತು.
ರಾಷ್ಟ್ರಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ಎಂ.ಕೆ. ಗುಡಿಮನಿ ಅವರು ಸಾಧಿಸಿರುವ ನಿರಂತರ ಹಾಗೂ ಗಮನಾರ್ಹ ಸಾಧನೆಗಳನ್ನು ಪರಿಗಣಿಸಿ, ಕ್ರೀಡಾ ಕ್ಷೇತ್ರದ ಉತ್ತೇಜನಕ್ಕೆ ಅವರು ನೀಡಿರುವ ಸೇವೆಯನ್ನು ಗುರುತಿಸಿ ಈ ಗೌರವ ಡಾಕ್ಟರೇಟ್ ಪದವಿ ನೀಡಲಾಗಿದೆ. ಸರ್ಕಾರಿ ಸೇವೆಯ ಜವಾಬ್ದಾರಿಗಳ ನಡುವೆಯೂ ಕ್ರೀಡಾ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿರುವ ಅವರ ಸಾಧನೆ ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದೆ ಎಂದು ಸಮಾರಂಭದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿದ ಢವಳಗಿ ಗ್ರಾಪಂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ, ಹಾಗೂ ಕ್ರೀಡಾಪಟು ಎಂ.ಕೆ. ಗುಡಿಮನಿ ಅವರು, “ಈ ಗೌರವ ನನ್ನ ಕ್ರೀಡಾ ಬದುಕಿಗೆ ಮತ್ತಷ್ಟು ಶಕ್ತಿ ನೀಡಿದೆ. ಮುಂದಿನ ದಿನಗಳಲ್ಲಿ ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ಇನ್ನಷ್ಟು ಕೊಡುಗೆ ನೀಡುವ ಸಂಕಲ್ಪ ಮಾಡಿಕೊಂಡಿದ್ದೇನೆ” ಎಂದು ಹೇಳಿದರು.
ಈ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಗಣ್ಯರಿಗೆ ಶ್ರೇಷ್ಠ ಪ್ರಶಸ್ತಿಗಳನ್ನು ಪ್ರಧಾನಿಸಲಾಯಿತು.
ಪ್ರಶಸ್ತಿ ಪುರಸ್ಕೃತರು ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಹಾಗೂ ಐಎನ್‌ಟಿಯುಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಕೆ.ಎ. ಮನೋಕರನ್, ಶ್ರೀ ಕ್ಷೇತ್ರ ಧರ್ಮ ಧ್ವಜ ಪ್ರತಿಷ್ಠಾನದ ಮಾನ್ಯ ಅಧ್ಯಕ್ಷ ಪ್ರಣವ ಸ್ವರೂಪ ಮುನಿ ನಿರಂಜನಪೂಜ್ಯ ಶ್ರೀ ಶ್ರೀ ಡಾ. ಕೃಷ್ಣಮೂರ್ತಿ ಮಹಾಸ್ವಾಮಿಗಳು, ವ್ಯಾಪಾರ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಡಾ. ಎ. ಶ್ರೀಧರ್, ರಕ್ಷಣಾ ಇಲಾಖೆಯ ಹಿರಿಯ ವಿಜ್ಞಾನಿ ಡಾ. ಸುಬ್ರಹ್ಮಣ್ಯಂ ಕೆ.ಎಸ್., ಕರ್ನಾಟಕ ಹೈಕೋರ್ಟ್‌ನ ಹಿರಿಯ ನ್ಯಾಯವಾದಿ ಆರ್.ಬಿ. ಪಾಟೀಲ್ ಹಾಗೂ ಯುನೈಟೆಡ್ ರಾಷ್ಟ್ರ ಸೇವಾ ಫೌಂಡೇಶನ್ ಅಧ್ಯಕ್ಷ ಡಾ. ವೈಭವ ಗುಣ ಶೇಖರ್ ಸೇರಿದಂತೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು, ಕ್ರೀಡಾಭಿಮಾನಿಗಳು, ಸಹೋದ್ಯೋಗಿಗಳು, ಕುಟುಂಬಸ್ಥರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಸಲ್ಲಿಸಿದರು. ಕ್ರೀಡೆ, ಸಮಾಜಸೇವೆ, ವಿಜ್ಞಾನ, ಕಾನೂನು ಮತ್ತು ಸಾರ್ವಜನಿಕ ಜೀವನದಲ್ಲಿ ಸಾಧನೆ ಮಾಡಿದವರನ್ನು ಒಂದೇ ವೇದಿಕೆಯಲ್ಲಿ ಗೌರವಿಸಿದ ಈ ಕಾರ್ಯಕ್ರಮ ಗಮನ ಸೆಳೆಯಿತು.