ನಾಗರಬೆಟ್ಟದ ಎಸ್‌ಡಿಕೆ ವಿದ್ಯಾರ್ಥಿನಿ ರಾಜ್ಯಕ್ಕೆ ಮೂರನೇ ಸ್ಥಾನ ಕನ್ನಡ ವಿಭಾಗಕ್ಕೆ ಶೇ.೯೩, ಇಂಗ್ಲೀಷ್ ವಿಭಾಗಕ್ಕೆ ಶೇ.೯೭ ಫಲಿತಾಂಶ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ನಾಗರಬೆಟ್ಟ ಬಸ್ ನಿಲ್ದಾಣ ಹತ್ತಿರ ಇರುವ ಎಸ್‌ಡಿಇ ಟ್ರಸ್ಟ್ನ ಆಕ್ಸಫರ್ಡ ಮಠ್ಸ್ ಎಸ್‌ಡಿಕೆ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಅಕ್ಷತಾ ಆಸಂಗಿ ೬೨೩ ಅಂಕದೊAದಿಗೆ ರಾಜ್ಯಕ್ಕೆ ಮೂರನೇ, ಶಾಲೆಗೆ ಮೊದಲನೇ ಸ್ಥಾನ ಪಡೆದು ಕೀರ್ತಿ ತಂದಿದ್ದಾಳೆ. ಈ ಶಾಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ.೯೩ರಷ್ಟಾಗಿದೆ. ಪರೀಕ್ಷೆಗೆ ಹಾಜರಾಗಿದ್ದ ೨೩೯ ವಿದ್ಯಾರ್ಥಿಗಳಲ್ಲಿ ೨೨೦ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ೧೧೦ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ೯೮ ವಿದ್ಯಾರ್ಥಿಗಳು ಪ್ರಥಮ ದರ್ಜೆ, ೧೧ ವಿದ್ಯಾರ್ಥಿಗಳು ದ್ವಿತಿಯ ದರ್ಜೆ, ಓರ್ವ ತೃತೀಯ ದರ್ಜೆಯ ಪಡೆದಿದ್ದಾರೆ. ಕನ್ನಡದಲ್ಲಿ ೧೩, ಇಂಗ್ಲೀಷಿನಲ್ಲಿ ೩, ಹಿಂದಿಯಲ್ಲಿ ೩೩, ಗಣ ತದಲ್ಲಿ ೮, ವಿಜ್ಞಾನದಲ್ಲಿ ೪, ಸಮಾಜವಿಜ್ಞಾನದಲ್ಲಿ ೬೧ ವಿದ್ಯಾರ್ಥಿಗಳು ಶೇ.೧೦೦ ಅಂಕ ಪಡೆದಿದ್ದಾರೆ. ರೋಹಿಣ ಲಿಂಗರೆಡ್ಡಿ ೬೨೧ ಅಂಕ ಪಡೆದು ಶಾಲೆಗೆ ದ್ವಿತೀಯ, ನಾಗರತ್ನ ಭೋಯೇರ ೬೨೦ ಅಂಕ ಪಡೆದು ಶಾಲೆಗೆ ತೃತಿಯ ಸ್ಥಾನ ಗಳಿಸಿದ್ದಾರೆ. ಪಲ್ಲವಿ ನಾಯಕ ೬೧೯, ಅನೀಲ ಹೂಗಾರ ೬೧೮, ಅರುಣಕುಮಾರ ಬಂಡಿಗೌಡರ ೬೧೭, ಆನಂದ ಗಾಂಜಿ, ಶರಣಬಸ್ಸು ದೇಸಾಯಿ, ಸಾಕ್ಷಿ ದೇಸಣಗಿ ೬೧೬, ಸೌಂದರ್ಯ ತುರಡಗಿ ೬೧೫ ಅಂಕ ಪಡೆದು ಟಾಪರ್ ಆಗಿ ಹೊರಹೊಮ್ಮಿದ್ದಾರೆ.
*ಇಂಗ್ಲೀಷ್ ಮಾಧ್ಯಮ: ಎಸ್‌ಡಿಕೆ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆ ಫಲಿತಾಂಶ ಶೇ.೯೭ರಷ್ಟಾಗಿದೆ. ಪರೀಕ್ಷೆಗೆ ಹಾಜರಾದ ೧೧೮ ವಿದ್ಯಾರ್ಥಿಗಳಲ್ಲಿ ೧೧೪ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ೫೭ ವಿದ್ಯಾರ್ಥಿಗಳು ಶೇ.೯೦ಕ್ಕೂ ಹೆಚ್ಚು ಪಡೆದಿದ್ದಾರೆ. ೧೫ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ೪೩ ವಿದ್ಯಾರ್ಥಿಗಳು ಪ್ರಥಮ, ೬ ವಿದ್ಯಾರ್ಥಿಗಳು ದ್ವಿತಿಯ ದರ್ಜೆಯಲ್ಲಿ ಪಾಸಾಗಿದ್ದಾರೆ. ಕನ್ನಡದಲ್ಲಿ ೧೦, ಇಂಗ್ಲೀಷಿನಲ್ಲಿ ೩, ಹಿಂದಿಯಲ್ಲಿ ೧೯, ಗಣ ತದಲ್ಲಿ ೫, ವಿಜ್ಞಾನದಲ್ಲಿ ೩, ಸಮಾಜವಿಜ್ಞಾನದಲ್ಲಿ ೧೬ ವಿದ್ಯಾರ್ಥಿಗಳು ಶೇ.೧೦೦ ಅಂಕ ಪಡೆದಿದ್ದಾರೆ. ಅಕ್ಷತಾ ಹಿರೇಮಠ ೬೧೭, ವಿನಯ್ ಮಾಮನಿ, ಪ್ರಗತಿ ಮೇಟಿ ೬೧೬, ಬನಶ್ರೀ ವಡವಡಗಿ, ಸಿದ್ದಲಿಂಗ ಭಂಗಿ ೬೧೪ ಅಂಕ ಪಡೆದು ಶಾಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಎರಡೂ ವಿಭಾಗದ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಮಠ, ಆಡಳಿತಾಧಿಕಾರಿ ಪ್ರಜ್ಞಲ್ ಮಠ, ಸಿದ್ದಯ್ಯ ಹಿರೇಮಠ, ಕನ್ನಡ ವಿಭಾಗದ ಮುಖ್ಯಾಧ್ಯಾಪಕ ಹೀರು ನಾಯಕ, ಇಂಗ್ಲೀಷ್ ವಿಭಾಗದ ಮುಖ್ಯಾಧ್ಯಾಪಕ ಶಿವಯ್ಯ ಮಠಪತಿ, ಶಿಕ್ಷಕರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.



















