ಶಾಲೆಗಳು ನೈತಿಕ ಮೌಲ್ಯಗಳ ಕೇಂದ್ರವಾಗಬೇಕು
ಇಂಡಿ : ಕಿತ್ತೂರ ಚೆನ್ನಮ್ಮ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ಶಾಂತೇಶ್ವರ ಸಂಸ್ಕೃತ ಪಾಠಶಾಲೆಯ ವಾರ್ಷಿಕ ಸಮ್ಮೇಳನದ ಅತಿಥಿ ಉಪನ್ಯಾಸ ನೀಡಿದ ಹಿರಿಯ ವರದಿಗಾರ ಶರಣು ಕಾಂಬಳೆ ಮಾತನಾಡುತ್ತಾ ,ಶಿಕ್ಷಕರು ಮಕ್ಕಳಿಗೆ ಕೇವಲ ಅಕ್ಷರ ಜ್ಞಾನದ ನೀಡಿದರೆ ಸಾಲದು, ಮಾನವೀಯ ಮೌಲ್ಯಗಳನ್ನು ಕಲಿಸಿ ,ದೇಶದ ಉತ್ತಮ ನಾಗರೀಕನ್ನು ನಿರ್ಮಾಣಮಾಡುವದು,ಇಂದು ಬಹು ಪ್ರಸ್ತುತ ವಾಗಿದೆ. ಮಕ್ಕಳಿಗೆ ಒತ್ತಡ ಹಾಕಿ ಬಲವಂತದ ಕೃತಕ ಜ್ಞಾನನೀಡಭೇಡಿ, ಡಾ ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಡಾ.ಎಪಿಜೆ ಕಲಾಂರು ಬಾಲ್ಯದಲ್ಲಿ ಅನುಭವಿಸಿದ ಕಷ್ಟಗಳು ಸಂಕಷ್ಟಗಳು , ಅವರ ಸಾಧನೆಗೆ ಹೇಗೆ ಪ್ರೇರಣೆ ನೀಡಿದ್ದವು ಎಂಬುವುದು ಮಕ್ಕಳಿಗೆ ಶಿಕ್ಷಕ ಹಾಗೂ ಪಾಲಕ ಮನವರಿಕೆ ಮಾಡಬೇಕು ಎಂದು ಮಾತನಾಡಿದರು.
ಅಥಿತಿಯಾಗಿ ಆಗಮಿಸಿ ನೌಕರ ಸಂಘದ ಉಪಾಧ್ಯಕ್ಷ ಜಿ ಜಿ ಬರಡೋಲ ಮಾತನಾಡುತ್ತಾ , ಶಿಕ್ಷಣ ಕೇವಲ ಅಕ್ಷರ ಕಲಿಸುವ ಕೇಂದ್ರವಾಗಿದೆ, ಸಂಸ್ಕಾರವನ್ನು ಕಲಿಸುವ ತಾಣವಾಗಿ ಬೇಕು ಎಂದು ಆಶಯ ವ್ಯಕ್ತಪಡಿಸಿದರು. ವೇದಿಕೆ ಮೇಲೆ ಸಂಸ್ಥೆಯ ಅಧ್ಯಕ್ಷ ಎಸ್ ಎಸ್ ಮಣೂರ, ಹಿರಿಯ ದಿವಾನಿ ನ್ಯಾಯಾಲಯ ಶಿರಸ್ತೇದಾರ್,ವಾಯ್ ಎಮ್ ತಹವಾರ, ಉದ್ಯಮಿ ಯಾಶಿನ ಅರಬ್,ನಿವೃತ್ತ ಪ್ರಾಚಾರ್ಯ ಆಯ್ ಸಿ ಪೂಜಾರಿ, ಮುಖ್ಯಗುರುಗಳಾದ ಎಸ್.ಸಿ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅನೀಲ ಪತಂಗೆ, ಮಾಜಿ ಪುರಸಭಾ ಸದಸ್ಯರ ಸಿದ್ದು ಡಂಗಾ, ಪುರಸಭಾ ಸದಸ್ಯರಾದ ಪಿಂಟು ರಾಠೋಡ, ವಕೀಲರ ಸಂಘದ ಕಾರ್ಯದರ್ಶಿ ಎಸ್ ಆರ್ ಬಿರಾದಾರ,ಆಕಾಶ ಇಂಡಿ, ವೈಯ್.ಆರ್ ಗೋಳಸಂಗಿ . ಸುರೇಶ್ ಮಿರಗಿ, ಎಸ್ ಎಸ್ ಕಟ್ಟಿಮನಿ, ಪ್ರತಿಭಾ ನಾಯ್ಕ್ ಲಕ್ಷ್ಮೀ ಕಾಳೆ, ಚಿನ್ನಮ್ಮ ನಾಟೀಕಾರ, ಉಪಸ್ಥಿತರಿದ್ದರು ಕುಮಾರಿ ಎಸ್ ಎಸ್ ಇಂಡಿ ನಿರೂಪಿಸಿ ವಂದಿಸಿದರು.