ಹೌದು ಬುದುವಾರ ಸ್ಚ ಗ್ರಾಮದಲ್ಲಿ ವರದಿಗಾರರೊಂದಿಗೆ ಮಾತಾನಾಡಿದ ಅವರು, ತಾಲೂಕಿನ ನಾದ ಕೆಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾದ ಬಿಕೆ ಪ್ರಾಥಮಿಕ ಶಾಲೆ ಯು ‘ಬಿ’ ಮಾದರಿ ಕೇಂದ್ರ ವಾಗಿದ್ದು, ಇಲ್ಲಿ ಶಾಲಾ ಮಕ್ಕಳ ಸಂಖ್ಯೆಯು ಹೆಚ್ಚಾಗಿದ್ದು , ಗ್ರಾಮ ಪಂಚಾಯತ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ “ಹೈಟೇಕ್” ಶೌಚಾಲಯ ಕಳಪೆ ಮಟ್ಟದಿಂದ ಕೂಡಿದಾಗಿದೆ.
ಕಳೆದ ಎರಡು ವಷ೯ಗಳ ಹಿಂದೆ ವಿಧ್ಯಾರ್ಥಿಗಳಿಗಾಗಿ “ಹೈಟೇಕ್” ಶೌಚಾಲಯ ನಿರ್ಮಾಣ ಮಾಡಿದ್ದು,
ನೀರಿನ ಸೌಲಭ್ಯ ಕಲ್ಪಿಸದೆ ಸಮಸ್ಯೆಯಾಗುವ ರೀತಿಯಲ್ಲಿ ಶೌಚಾಲಯ ಕಟ್ಟಿಸಿದ್ದಾರೆ. ಅದು ಸಂಪೂರ್ಣ ಕಳಪೆ ಮಟ್ಟದ ಕಚ್ಚಾ ಶೌಚಾಲಯ ನಿಮಿ೯ಸಿದ್ದಾರೆ. ಅದು ವಿಧ್ಯಾರ್ಥಿಗಳಿಗೆ ಬಹಳಷ್ಟು ಸಮಸ್ಯೆ ಮಾಡುತ್ತಿದೆ ಎಂದರು. ಇಷ್ಟಲ್ಲದೆ ಶಾಲಾ ಮಕ್ಕಳಿಗೆ ಬಿಸಿಯೂಟ ಬಡಿಸಲು ಮೂರು ಜನ ಮಹಿಳಾ ಅಡುಗೆ ಸಿಬ್ಬಂದಿಗಳ ಅವಶ್ಯಕತೆ ಇದ್ದು, ಇಲ್ಲಿ ಕೇವಲ ಇಬ್ಬರು ಮಹಿಳಾ ಸಿಬ್ಬಂದಿಗಳು ಮಾತ್ರ ಇದ್ದಾರೆ. ಬಡ ವಿದ್ಯಾರ್ಥಿಗಳು ಕಲಿಯುತಿದ್ದು ಅವರಿಗೆ ಸಮಯಕ್ಕೆ ಸರಿಯಾಗಿ ಆಹಾರದ ಸೇವೆ ಮಾಡಲು ಅನಾನುಕೂಲ ವಾಗುತ್ತಿದೆ. ಇದನ್ನು ಸರಿಪಡಿಸುವಂತೆ ಮುಖ್ಯ ಗುರುಗಳಿಗೆ ಮನವರಿಕೆ ಮಾಡಿಕೊಂಡಿದ್ದೆವೆ ಎಂದರು. ಕೂಡಲೇ ಇನ್ನೋವ೯ ಅಡುಗೆ ಸಹಾಯಕಿ ಸಿಬ್ಬಂದಿಯ ಕೊರತೆಯಿದ್ದು ಅದರ ಬಗ್ಗೆ ಗಮನಹರಿಸಿ ಎಂದು ಈ ಹಿಂದೇ ಮುಖ್ಯ ಗುರುಗಳ ಗಮನಕ್ಕೆ ತರಲಾಗಿದೆ ಆದರೂ ಇಲ್ಲಿಯವರೆಗೂ ಸಮಸ್ಯೆ ಯಾಗಿ ಉಳಿದಿದೆ ಎಂದರು.