ಇಂಡಿ: ಗ್ರಾಮೀಣ ಪ್ರದೇಶದಲ್ಲಿ ಆರಂಭವಾದ ಶಿಕ್ಷಣ ಸಂಸ್ಥೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆದಿರುವುದು ಅತ್ಯಂತ ಶ್ಲಾಘನೀಯ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸಂತಸ ವ್ಯಕ್ತಪಡಿಸಿದರು.
ಅವರು ಸೋಮವಾರ ತಾಲೂಕಿನ ಸಾತಲಗಾಂವ ಗ್ರಾಮದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ 19ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನದ ಪಾವನ ಸನ್ನಿಧಿ ವಹಿಸಿ ಆಶೀರ್ವಚನ ನೀಡಿದರು. ಗ್ರಾಮೀಣ ಭಾಗದ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವ ಉತ್ತಮ ಸಂಸ್ಥೆಗಳು ಬೆಳೆಯಲಿ.
‘ಗ್ರಾಮೀಣ ಭಾಗದ ರೈತರ ಮಕ್ಕಳಿಗೆ ಭವಿಷ್ಯ ನಿರ್ಮಿಸುವ ಕೆಲಸವನ್ನು ಶಿಕ್ಷಣ ಸಂಸ್ಥೆಗಳು ಮಾಡಬೇಕು. ನಗರಗಳಲ್ಲಿ ಉತ್ತಮ ಶಿಕ್ಷಣ ದೊರೆಯುತ್ತದೆ ಎಂಬ ಭಾವನೆಯನ್ನು ಪಾಲಕರಲ್ಲಿ ಹೊಡೆದು ಹಾಕುವ ಕಾರ್ಯ ಗ್ರಾಮೀಣ ಭಾಗದಲ್ಲಿ ನಡೆಯಲಿ. ಮಕ್ಕಳಿಗೆ ಹೊಸ ಹೊಸ ತರಬೇತಿ ನೀಡುವ ಮೂಲಕ ಅವರ ಮೆದುಳು ಇನ್ನಷ್ಟು ಚುರುಕಾಗುವಂತೆ ಶಿಕ್ಷಕರು ಮಾಡಲಿ’ ಎಂದರು.
ನಿವೃತ್ತ ಪ್ರಾಚಾರ್ಯ ವಿ.ಹೆಚ್. ಬಿರಾದಾರ್ ಮಾತನಾಡಿ, ‘ಹೊಲದಲ್ಲಿ ರೈತರು ಬೆಳೆ ಬೆಳೆದರೆ ಮಕ್ಕಳ ತಲೆಯಲ್ಲಿ ಅಕ್ಷರ ಬೆಳೆಯುತ್ತದೆ. ಪಾಲಕರು ಮಕ್ಕಳ ಕುರಿತು ನಿಗಾ ಇಟ್ಟರೆ ಮಾತ್ರ ಇತರ ಕೆಟ್ಟಚಟಗಳನ್ನು ಬೆಳೆಯದಂತೆ ತಡೆಯಬಹುದು. ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆ ಬೆಳೆಯುತ್ತಿರುವುದು ಸಂತಸ ತಂದಿದೆ. ಪ್ರತಿಯೊಬ್ಬರ ಸಹಕಾರ ಸಂಸ್ಥೆಯ ಮೇಲಿರಲಿ’ ಎಂದರು. ಸಂಸ್ಥೆಯ ಅಧ್ಯಕ್ಷ ರಮೇಶ ಬಿರಾದಾರ ಶ್ರೀ ಸಿದ್ಧಗಂಗಾ ಮಠದಲ್ಲಿ ಶಿಕ್ಷಣ ಪಡೆದು ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳ ಹೆಸರಿನಲ್ಲಿ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು .
ಡಾ. ರಾಜೇಶ ತುಪ್ಪದ ಶ್ರೀ ಸಿದ್ಧಗಂಗಾ ಶ್ರೀಗಳವರಿಗೆ ಭಕ್ತಿ ಸಮರ್ಪಿಸಿದರು.
ಶ್ರೀಶೈಲ ಮಾಲಗಾರ, ಆನಂದ ಪಾರಶೆಟ್ಟಿ, ಶಿವಗೊಂಡಪ್ಪ ಬಿರಾದಾರ, ಸಂಗಮೇಶ ಹೊಸೂರ, ನೀಲಕಂಠಗೌಡ ಬಿರಾದಾರ, ಸಂಸ್ಥೆಯ ಅಧ್ಯಕ್ಷ ರಮೇಶ ಬಿರಾದಾರ, ಶಿಕ್ಷಕಿ ಮಯೂರಿ ಪಾತಾಳಿ, ಮನೋಲ ಶಹಾ, ಆರತಿ ಶಾವರಿ, ಕವಿತಾ ವಾಘಮೋರೆ, ಭೀಮಾಶಂಕರ ಕಲ್ಯಾಣಿ, ರಾಜಶೇಖರ ಮಠಪತಿ, ಧಾನಯ್ಯ ಮಠಪತಿ, ಸಿದ್ರಾಮಯ್ಯ ಮಠ, ಶಿವಾನಂದ ಹಿರೇಮಠ, ಗೌಡಪ್ಪಗೌಡ ಪಾಟೀಲ, ಶಂಕರಗೌಡ ಬಿರಾದಾರ, ಸಿದ್ದಾರಾಮಗೌಡ ಬಿರಾದಾರ, ಶಿವಯೋಗೆಪ್ಪ ಖಣದಾಳ, ಶಿವಣ್ಣ ಗುಂಜ್ಜೆಟ್ಟಿ, ಮಾದೇವಪ್ಪ ಬಿರಾದಾರ, ಬಸಣ್ಣ ಪಾತಾಳಿ, ಲಿಂಗದಳ್ಳಿ, ರೇವಣಸಿದ್ಧ ಬಿರಾದಾರ, ಶಿವಕುಮಾರ ಬಿರಾದಾರ, ನೀಲಕಂಠ ನಂದಗೊಂಡ, ರಮೇಶ ಕೆಂಗೇರಿ, ಮುಕುಂದ ಬೇಡರ , ವಿಠೋಬಾ ಬಂಗಲಿ, ರಾಜು ಕಾಮಗೊಂಡ, ಮಲ್ಲು ನಿಂಬರಗಿ, ಶ್ರೀಮಂತ ಮಸಳಿ, ಸೇರಿದಂತೆ ಮತ್ತಿತರರು ಇದ್ದರು.