ಯಲಗೋಡ ಪಿಕೆಪಿಎಸ್ ನೂತನ ಅಧ್ಯಕ್ಷ ಸಾಯಬಣ್ಣಗೆ ಸನ್ಮಾನ್..!
ವಿಜಯಪುರ : ಗ್ರಾಮೀಣ ಭಾಗದ ರೈತರ ಆರ್ಥಿಕ ಬೆಳವಣಿಗೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಪಾತ್ರ ಮಹತ್ವದ್ದಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಚಂದ್ರಶೇಖರ ಕೋಡಿಹಳ್ಳಿ ಬಣ) ಜಿಲ್ಲಾ ಅಧ್ಯಕ್ಷ ಎಸ್ ಬಿ ಕೆಂಬೋಗಿ ಹೇಳಿದರು.
ತಾಲ್ಲೂಕಿನ ಯಲಗೋಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಸಾಯಬಣ್ಣ ಬಾಗೇವಾಡಿ ಅವರಿಗೆ ಸನ್ಮಾನಿಸಿ ಗೌರವಿಸಿ ಮಾತನಾಡಿದರು.
ವಿಜಯಪುರ ಜಿಲ್ಲೆಯ ತಳವಾರ ಸಮಾಜದ ಯುವಕರು ಪಿಕೆಪಿಎಸ್ ನೂತನ ಅಧ್ಯಕ್ಷ ಸಾಯಬಣ್ಣ ಬಾಗೇವಾಡಿ ಅವರಿಗೆ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಪಿಕೆಪಿಎಸ್ಗಳು ರೈತರಿಗೆ ಸಕಾಲದಲ್ಲಿ ಆರ್ಥಿಕ ನೆರವು ಒದಗಿಸಿ ಕೃಷಿ ಕ್ಷೇತ್ರದ ಅಭ್ಯುದಯಕ್ಕೆ ಕಾರಣವಾಗಿವೆ. ಆದ್ದರಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಆರ್ಥಿಕವಾಗಿ ಸದೃಢವಾಗಿ, ಗ್ರಾಮೀಣ ಜನರ ಬದುಕಿಗೆ ಆಸರೆಯಾಗಲು ಶಕ್ತಿ ಮೀರಿ ಶ್ರಮಿಸಬೇಕು ಎಂದು ಹೇಳಿದರು. ಕೇವಲ ದುರ್ಬಲರು, ಬಲಿಷ್ಠರು ಎಂದು ಗುರುತಿಸಿದೆ, ಸರ್ವರನ್ನು ಅದರಲ್ಲೆ ರೈತ ವರ್ಗವನ್ನು ಸಂಪೂರ್ಣ ಗಮನದಲ್ಲಿಟ್ಟುಕೊಂಡು ಆ ರೈತ ಸಮೂಹಕ್ಕೆ ಸಹಕಾರ ನೀಡಿ ಕೃಷಿ ಕ್ಷೇತ್ರಕ್ಕೆ ಹೊಸ ಸ್ಪರ್ಶ ನೀಡಿ ಎಂದು ಹೇಳಿದರು.
ಸಂಜೀವ ತಳವಾರ, ಆನಂದ ಗೊರಗುಂಡಗಿ,ಸೋಮು ಜಮಾದಾರ, ಶಿವಾನಂದ ಬಮ್ಮನಹಳ್ಳಿ ಹಾಗೂ ಪತ್ರಕರ್ತ ಶಂಕರ್ ಜಮಾದಾರ ಮಾತನಾಡಿದ ಅವರು, ಸಾಯಬಣ್ಣ ಬಾಗೇವಾಡಿ ಅವರು ಸಾಮಾಜಿಕವಾಗಿ, ಅತ್ಯಂತ ಪ್ರಾಮಾಣಿಕ ಮತ್ತು ನಿಷ್ಠೆ ಬದ್ಧತೆಯಿಂದ ಬದುಕು ನಡೆಸುತ್ತಾ ಬಂದವರು, ಇಂದು ಅವರಿಗೆ ರೈತರ ಸೇವೆ ಮಾಡುವ ಸುವರ್ಣ ಅವಕಾಶ ದೊರೆತ್ತಿದ್ದು ಅತ್ಯಂತ ಹೆಮ್ಮೆಯ ವಿಷಯ. ಇನ್ನೂ ನಮ್ಮ ತಳವಾರ ಸಮುದಾಯ ತುಳಿತಕ್ಕೆ ಹಾಗೂ ಶೋಷಣೆಗೆ ಒಳಗಾದ ಸಮುದಾಯ. ಈ ಸಮುದಾಯಕ್ಕೆ ಅವಕಾಶ ಕೊರತೆಯಿಂದ ಸರ್ವಕ್ಷೇತ್ರದಲ್ಲಿ ಹಿಂದುಳಿದಿದೆ. ತಾವು ಸರ್ವ ಜನಾಂಗದ ಜೊತೆಯಲ್ಲಿ ತಳವಾರ ಸಮುದಾಯಕ್ಕೆ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಜೊತೆಯಲ್ಲಿ ರಾಜಕೀಯ ಜಾಗೃತಿಯೊಂದಿಗೆ ನ್ಯಾಯ ಒದಗಿಸುವ ಕಾರ್ಯ ಮಾಡಬೇಕು. ಅದಲ್ಲದೇ ಜಿಲ್ಲೆಯಲ್ಲಿ ತಳವಾರ ಸಮುದಾಯದ ಯುವಕರಿಗೆ ನೀವು ಮಾದರಿಯಾಗಿದ್ದು , ನಿಮ್ಮ ಅದರ್ಶ ಪಾಲಿಸುವ ಕಾರ್ಯ ಮಾಡುತ್ತೆವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಂಗಾರಪ್ಪ ಜಮಾದಾರ, ಮಲ್ಲಿಕಾರ್ಜುನ ಸುಣಗಾರ, ಸಿದ್ದು ಕೋಳಿ, ಸದಾಶಿವ ಶಿವೂಪರ (ತಳವಾರ) ರೇವಣ ಹತ್ತಳ್ಳಿ,ಸುರೇಶ್ ಡೊಂಗ್ರೊಜ್, ಸಂತೋಷ ಹತ್ತಿ, ಬಸವರಾಜ ನಾಯಕೋಡಿ, ರವಿ ರಾಯಜಿ, ನಿಂಗಪ್ಪ ತಿಳಗೋಳ, ಅರ್ಜುನ ಆಲಮೇಲ, ವಿರೇಶ ಸುಣಗಾರ, ಈಶ್ವರ ಮಣಗಿರಿ, ಸಿದ್ದು ನಾಟಿಕಾರ, ಅನೀಲ ಕೋಳಿ ಸೇರಿದಂತೆ ಇನ್ನೂ ಯುವಕರು ಹಾಗೂ ಮುಖಂಡರು ಉಪಸ್ಥಿತರಿದ್ದರು.


















