ಸಾವಳಸಂಗ ಪ್ರವಾಸಿ ತಾಣವಾಗಿ ಹೆಸರಾಗಲಿದೆ : ಅಮೃತಾನಂದ ಶ್ರೀಗಳು
ಇಂಡಿ: ಪರಿಸರ ಸಂರಕ್ಷಣೆ ಕೇವಲ ಇಲಾಖೆಯ ಕರ್ತವ್ಯ ಮಾತ್ರವಲ್ಲ, ಪ್ರತಿಯೊಬ್ಬ ಸಾರ್ವಜನಿಕನ ಜವಾಬ್ದಾರಿಯಾಗಿದೆ. ಪರಿಸರ ಮಾನವನ ಪ್ರತಿ ಬದುಕಿನಲ್ಲೂ ಹಾಸು ಹೊಕ್ಕಿದೆ ಎಂದು ಕಾತ್ರಾಳ ಗುರುದೇವಾಶ್ರಮದ ಅಮೃತಾನಂದ ಶ್ರೀಗಳು ಹೇಳಿದರು.
ತಾಲೂಕಿನ ಸಾವಳಸಂಗ ಗುಡ್ಡದಲ್ಲಿ ಕರ್ನಾಟಕ ಸರಕಾರ ಅರಣ್ಯ ಇಲಾಖೆ ಇಂಡಿ ವಲಯದ ವತಿಯಿಂದ ಸಾವಳಸಂಗದಲ್ಲಿ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ವೃಕ್ಷೆÆÃಧ್ಯಾನ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಿಡಮರಗಳು ಮಳೆಯನ್ನು ಆಕರ್ಷಣೆ ಮಾಡುತ್ತವೆ. ಗಿಡಮರಗಳು ನಮಗೆ ಪ್ರಾಣವಾಯು ನೀಡುತ್ತವೆ. ಸಿದ್ದೇಶ್ವರ ಶ್ರೀಗಳು ಪರಿಸರ, ಪ್ರಕೃತಿ, ನಿಸರ್ಗ, ನದಿ,ಹಳ್ಳ, ಕೊಳ್ಳ,ಸರೋವರ ಪ್ರೀತಿಸುತ್ತಿದ್ದರು.ರೈತರಿಗೆ ನೀರು ಕೊಡಿ ಅವರ ಬದುಕು ಸುಂದರವಾಗಿರುತ್ತದೆ ಎಂದು ಶ್ರೀಗಳ ಸದಾಶಯವಾಗಿತ್ತು. ಬರುವ ದಿನಗಳಲ್ಲಿ ಸಾವಳಸಂಗ ಪ್ರವಾಸಿ ತಾಣವಾಗಿ ಹೆಸರಾಗಲಿದೆ ಎಂದರು.
ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಸಿದ್ದೇಶ್ವರ ಶ್ರೀಗಳ ಪಾದಸ್ಪರ್ಶದಿಂದ ಸಾವಳಸಂಗ ಪಾವನ ಕ್ಷೇತ್ರವಾಗಿದೆ. ಮುಂದಿನ ದಿನಗಳಲ್ಲಿ ಸಾವಳಸಂಗ ಪ್ರವಾಸಿ ತಾಣವನ್ನಾಗಿ ಮಾಡಲು ಸರಕಾರ ಎರಡೂವರೆ ಕೋಟಿ ರೂ ವೆಚ್ಚದಲ್ಲಿ ವೃಕ್ಷೆÆÃಧ್ಯಾನ ಮಾಡುತ್ತಿದ್ದೇವೆ.ಇದರ ಜೊತೆಗೆ ಸಿಎಸ್ಆರ್ ಮತ್ತು ಶಾಸಕರ ಅನುದಾನ ನೀಡಿ ಮುಂದಿನ ಮೂರು ವರ್ಷಗಳಲ್ಲಿ ವೃಕ್ಷೆÆÃಧ್ಯಾನ ಪೂರ್ಣಗೊಳಿಸಲಾಗುವದು ಎಂದರು.
ಸಾಮಾಜಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ವನಿತಾ ಆರ್, ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಮಂಜುನಾಥ ಧುಳೆ, ಎಲ್.ಜಿ.ನಾದ, ಧನರಾಜ ಮುಜಗೊಂಡ ಮಾತನಾಡಿದರು.
ಸಿದ್ದರಾಮೇಶ್ವರ ಸ್ವಾಮೀಜಿ, ಗಜಣೇಶಾನಂದ ಸ್ವಾಮೀಜಿ, ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶರಣಯ್ಯ, ಕಂದಾಯ ಉಪ ವಿಬಾಗಾಧಿಕಾರಿ ಅಬೀದ್ ಗದ್ಯಾಳ, ತಹಶೀಲ್ದಾರ ಬಿ.ಎಸ್.ಕಡಕಬಾವಿ, ಎ.ಎಸ್.ಪಾಕಿ, ಬಾಗ್ಯವಂತ ಮಸೂದಿ, ಇಒ ನಂದೀಪ ರಾಠೋಡ, ಚಡಚಣ ಇಓ ಸಂಜಯ ಖಡಗೇಕರ, ಎಸ್.ಜಿ.ಸಂಗಾಲಕ, ಮಹಾದೇವಪ್ಪ ಏವೂರ ಮತ್ತಿತರಿದ್ದರು.
ಇಂಡಿ: ತಾಲೂಕಿನ ಸಾವಳಸಂಗ ಗುಡ್ಡದಲ್ಲಿ ಶ್ರೀ ಸಿದ್ದೇಶ್ವರ ವೃಕ್ಷೆÆÃದ್ಯಾನಕ್ಕೆ ಅಮೃತಾನಂದ ಶ್ರೀಗಳು ಭೂಮಿಪೂಜೆ ನೇರವೇರಿಸಿದರು.



















