ಇಂಡಿ : ತಾಲೂಕಿನ ಕೃಷ್ಣಾ ಕಾಲುವೆಯ ಕೆಳಗಡೆಯ ಹಾಗೂ ನೀರಾವರಿ ಇರುವ ಗ್ರಾಮೀಣ ಪ್ರದೇಶದ ರೈತರ ಜಮೀನುಗಳಿಗೆ ನೀರು ಹರಿಸಲು ಹಗಲು ಸತತ ಏಳು ಗಂಟೆ ವಿದ್ಯುತ್ ಪೂರೈಕೆಗಾಗಿ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರ ನೇತೃತ್ವದಲ್ಲಿ ಇಂಡಿಯ ಕಾರ್ಯನಿರ್ವಾಹಕ ಅಭಿಯಂತರಾದ ಎಸ್ ಎಯ್.ಬಿರಾದಾರಗೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ, ಬಿ ಡಿ ಪಾಟೀಲ, ರಾತ್ರಿ ವೇಳೆಯಲ್ಲಿ ಹಲವು ರೈತರು ವಿದ್ಯುತ್ ಆವಾಂತರಗಳಿಂದ ಮತ್ತು ವಿಷ ಸರ್ಪಗಳಿಂದ ಸಾವು ನೋವು ಸಂಭವಿಸಿದೆ. ಅದಕ್ಕಾಗಿ ಬೆಳಗ್ಗೆ ವೇಳೆಯಲ್ಲಿ ಏಳು ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು. ಅದಕ್ಕಾಗಿ ಸಂಭಂದಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದೆ ಸಂದರ್ಭದಲ್ಲಿ ಅಯೂಬ್ ನಾಟೀಕರ ಸಿದ್ದು ಡಂಗಾ ಮಹಿಬೂಬ ಬೇವನೂರ,ಮರಪ್ಪ ಗಿರಣಿ ವಡ್ಡರ,ಪೀರಪ ಹೂಟಗಾರ,ಡಾ ರಮೇಶ್ ರಾಠೋಡ , ಸಂತೋಷ ರಾಠೋಡ.ಬಾಳು ರಾಠೋಡ, ಬಸವರಾಜ ಹಂಜಗಿ.ಮಜಿದ ಸೌದಾಗರ, ನಿಯಾಝ್ ಅಗರಖೇಡ ಇರ್ಫಾನ್ ಅಗರಖೇಡ,ರಾಜು ಮುಲ್ಲಾ,ರವಿ ಶಿಂದೆ, ರಮೇಶ್ ರಾಠೋಡ,ಸಿದ್ದಾರಾಮ ಹಂಜಗಿ, ಆರೀಫ್ ಜಮಾದಾರ,ಮಾಹಾದೇವ ಪೂಜಾರಿ,ಅಸ್ಪಾಕ ಶೇಖ, ಪರಮೇಶ್ವರ್ ಕಂಬಾರ, ಬಾಬು ಮೇತ್ರಿ, ಅನ್ವರ್ ದುದನಿ, ರಮೇಶ್ ಪೂಜಾರಿ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು