ಸರ್ವಜ್ಞನ ತ್ರಿಪದಿಗಳು ಕರ್ನಾಟಕದ ಕೀರ್ತಿಯನ್ನು ಬೆಳಗಿಸಿವೆ : ನಾಗೇಶ್
ಇಂಡಿ: ಸರ್ವಜ್ಞನ ತ್ರಿಪದಿಗಳು ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಕೊಡುಗೆಯಾಗಿದೆ. ತ್ರಿಪದಿಗಳು ಸಾರುವ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ. ಇವುಗಳು
ಹಲವು ಭಾಷೆಗಳಿಗೆ ಭಾಷಾಂತರಗೊಂಡಿದ್ದು,
ಭಾಗ ಮತ್ತು ಗಡಿಗಳ ಎಲ್ಲೆ ಮೀರಿ ಕರ್ನಾಟಕದ
ಕೀರ್ತಿಯನ್ನು ಬೆಳಗಿಸಿವೆ ಎಂದು ಸರ್ವಜ್ಞ ಕರಿಯರ್ ಅಕಾಡೆಮಿಯ ಅಧ್ಯಕ್ಷ ನಾಗೇಶ ಹೆಗಡ್ಯಾಳ ಹೇಳಿದರು.
ಅವರು ಮಂಗಳವಾರ ಪಟ್ಟಣದ ಸರ್ವಜ್ಞ ಕರಿಯರ್ ಅಕಾಡೆಮಿಯಲ್ಲಿ ಹಮ್ಮಕೊಂಡಿದ್ದ ಸರ್ವಜ್ಞ ಜಯಂತಿ ಅಂಗವಾಗಿ ಸರ್ವಜ್ಞರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಮಾನವ ವಿಶ್ವ ಮಾನವನಾಗಲು ಬೇಕಾದ ಜೀವನ ಮೌಲ್ಯಗಳನ್ನು ಸರ್ವಜ್ಞ ತನ್ನ
ತ್ರಿಪದಿಗಳಲ್ಲಿ ನೀಡಿದ್ದಾನೆ. ಇದಿನ ಯುವ ಜನಾಂಗ ತ್ರಿಪದಿಗಳನ್ನು ಓದಿ ಅರ್ಥೈಸಿಕೊಂಡು ಜೀವನ ಸಾಗಿಸಿದರೆ ಜೀವನ ಪಾವನವಾಗುತ್ತದೆ
ಎಂದರು.
ಈ ಸಂದರ್ಭದಲ್ಲಿ ಈರನಗೌಡ ಪಾಟೀಲ್, ಲಕ್ಷ್ಮಣ
ಪಾರೆ, ರಮೇಶ ಮಂಗೂಣಿ ಹಾಗೂ ಸ್ಪರ್ಧಾರ್ಥಿಗಳು ಇದ್ದರು.
ಇಂಡಿ: ಮಂಗಳವಾರ ಪಟ್ಟಣದ ಸರ್ವಜ್ಞ ಕರಿಯರ್
ಅಕಾಡೆಮಿಯಲ್ಲಿ ಸರ್ವಜ್ಞ ಜಯಂತಿ
ಆಚರಿಸಲಾಯಿತು.