ಶರಣ ಅಂಬಿಗ ಕುಮಾರ ಚೌಡಯ್ಯ ಗಣಾಚಾರ ಪ್ರಶಸ್ತಿ’ ಗೆ ಶರಣೆ ಶಿಕ್ಷಕಿ, ಸಾಹಿತಿ ಪಾರ್ವತಿ ಸೊನ್ನದ ಆಯ್ಕೆ
ಇಂಡಿ : 2025 ನೇ ವರ್ಷದ “ಶರಣ ಅಂಬಿಗ ಕುಮಾರ ಚೌಡಯ್ಯ ಗಣಾಚಾರ ಪ್ರಶಸ್ತಿ’ ಗೆ ಶರಣೆ ಶಿಕ್ಷಕಿ, ಸಾಹಿತಿ ಪಾರ್ವತಿ ಸೊನ್ನದ ಆಯ್ಕೆಯಾಗಿದ್ದಾರೆ.
ಬಸವ ಕೇಂದ್ರ-ಅಕ್ಕನ ಬಳಗ- ತರುಣ ಸಂಘ ಶರಣ ಸಂಸ್ಕೃತಿ ಮಹೋತ್ಸವ ಸಮಿತಿ, ಚಿತ್ತರಗಿ ಶ್ರೀ ವಿಜಯಮಹಾಂತೇಶ್ವರ ಸಂಸ್ಥಾನಮಠ ಇಳಕಲ್ಲ ಇವರ ಸಹಯೋಗದೊಂದಿಗೆ,
ಶ್ರೀ ಅಂಬಿಗಚೌಡಯ್ಯ ಪ್ರತಿಷ್ಠಾನ, ಗದಗ-ಬೆಟಗೇರಿ ಇವರು ಆಯೋಜಿಸಿರುವ ನಿಜಶರಣ ಅಂಬಿಗ ಚೌಡಯ್ಯ ಜಯಂತ್ಯುತ್ಸವ ಆಚರಣೆ ಗಣಾಚಾರದ ಶರಣ ಅಂಬಿಗಕುಮಾರ ಚೌಡಯ್ಯನವರ ಶರಣೋತ್ಸವ ಆಚರಣೆ ಹಾಗೂ ಶ್ರೀ ಅಂಬಿಗ ಚೌಡಯ್ಯ ಮತ್ತು ಶ್ರೀ ಅಂಬಿಗ ಕುಮಾರ ಚೌಡಯ್ಯ ಶರಣರ ಗಣಾಚಾರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಆಯ್ಕೆಯಾಗಿದ್ದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತರಾದ ಶಿಕ್ಷಕಿ ಸಾಹಿತಿ, ಪಾರ್ವತಿ ಸೊನ್ನದ ಅವರು ಬಸವ ಜನ್ಮ ಭೂಮಿಯಾಗಿರುವ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನವರಾಗಿದ್ದಾರೆ. ಅವರು ಎಂ.ಎ., ಟಿ.ಸಿ.ಎಚ್. ಶಿಕ್ಷಣ ಓದಿರುವ ಇವರು ಇಂಡಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಭೈರೂಣಗಿ ತಾಲೂಕ ಇಂಡಿಯಲ್ಲಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶರಣೆ ಪಾರ್ವತಿ ಅವರು ಕವಿಯಿತ್ರಿ, ಆಧುನಿಕ ವಚನಕಾರ್ತಿ, ಗದ್ಯಲೇಖಕಿ, ಶರಣಸಾಹಿತಿ ಹಾಗೂ ಮಕ್ಕಳ ಸಾಹಿತಿ ಕಥೆಗಾರ್ತಿಯಾಗಿಯೂ ಕನ್ನಡ ಸಾರಸ್ವತ ಲೋಕದಲ್ಲಿ ಹೆಸರು ಮಾಡಿದ್ದಾರೆ. ಸಾಹಿತ್ಯ ಕೃತಿಗಳು 1) ನಿಸರ್ಗದೊಡಲು ತಪಸಿ, 3) ವಚನವನ, 4) ಅರಳುವ ಹೂಗಳು, 5) ಹೆಮ್ಮೆಯ ಪುತ್ರ ಮುಂತಾದವು.
ಜುಲೈ 27 ರಂದು ಬಸವ ಮಂಟಪ, ಚಿತ್ತರಗಿ, ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನಮಠ, ಇಳಕಲ್ಲ ನಲ್ಲಿ ಕಾರ್ಯಕ್ರಮ ಜರುಗುತ್ತದೆ.