ಲಿಂಗಸೂಗೂರು: ತಾಲೂಕಿನ ನಾಗರಹಾಳ ಸರ್ಕಾರಿ ಪ್ರೌಢಶಾಲೆಯಲ್ಲಿ ಸಂತ ಸೇವಾಲಾಲರ ಜಯಂತಿಯನ್ನು ಆಚರಿಸಲಾಯಿತು. ಸೇವಾಲಾರ ಭಾವಚಿತ್ರಕ್ಕೆ ಶಿಕ್ಷಕಿಯಾದ ಶ್ರೀಮತಿ ರೈಲನಬಿ ಪೂಜೆ ನೆರವೇರಿಸಿದರು.
ಇನ್ನು ಸೇವಾಲಾಲರ ಕುರಿತು ಶ್ರೀಧರ್ ಜಾಧವ್ ಅವರು ಉಪನ್ಯಾಸ ನೀಡಿದರು. ಶ್ರೀಮತಿ ಶಾಂತಾಬಾಯಿ ಸೇವಾಲಾಲರ ಕುರಿತು ಹಾಡನ್ನು ಹಾಡಿದರು. ಕಾರ್ಯಕ್ರಮವನ್ನು ಮರಿಯಣ್ಣ ನಿರೂಪಿಸಿ ವಂದಿಸಿದರು. ಮುಖ್ಯಗುರುಗಳು ಹಾಗೂ ಶಿಕ್ಷಕ ವೃಂದದವರು ವಿದ್ಯಾರ್ಥಿಗಳು ಭಾಗವಹಿಸಿದ್ದರು.