ಮಸ್ಕಿ: ಪ್ರಕೃತಿ ಫೌಂಡೇಶನ್ (ರಿ) ಮಸ್ಕಿ ವತಿಯಿಂದ ಓಂ ಶಾಂತಿ ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯ ಆಶ್ರಮದ ಸುತ್ತಾಮುತ್ತಾ ಹಾಗೂ ಆಶ್ರಮದಲ್ಲಿ ಸಸಿ ಗಳನ್ನು ಹಚ್ಚಿ ಅವುಗಳ ರಕ್ಷಣೆಗೆ ರಕ್ಷಾ ಕವಚದ ವ್ಯವಸ್ಥೆ ಮಾಡಿ ಸಸಿಗಳನ್ನು ನೆಡಲಾಯಿತು. ಅಲ್ಲದೆ ಅವುಗಳ ಪಾಲನೆ ಪೋಷಣೆ, ರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಎಂದು ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಈ ವೇಳೆ ಮಾತನಾಡಿದ ಪ್ರಕೃತಿ ಫೌಂಡೇಶನ್ ಸಂಸ್ಥಾಪಕ ಶಿವಮೂರ್ತಿ ಗದ್ಗಿಮಠ ಮಾತನಾಡಿ ಸಸಿಗಳು ನಮ್ಮ ಮನೆಯ ಮಕ್ಕಳಿದ್ದಂತೆ. ಅವುಗಳನ್ನು ಜೋಪಾನದಿಂದ ಬೆಳಸಬೇಕು. ಸಸಿಗಳನ್ನು ಲಾಲನೆ ಪಾಲನೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಓಂ ಶಾಂತಿ ಆಶ್ರಮದ ಅಕ್ಕನವರಾದ ಬಿ ಕೆ ಹೇಮಕ್ಕ ,ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಶಿವಮೂರ್ತಿ ಗದ್ಗಿಮಠ, ಅಯ್ಯಪ್ಪ ಕಿನಾಳ್, ನಾಂದೇವ ಹಂಪರಗುಂದಿ, ಈ ರಪ್ಪ, ಬಸವರಾಜ್ ಉಪಸ್ಥಿತರಿದ್ದರು.