ಸಂತ ಶ್ರೀ ಸೇವಾಲಾಲ ಮಹಾರಾಜರ ಜಯಂತಿ : ಮಾಲಾಧಾರಿ ಅಭಿಯಾನದ ಪೂರ್ವಭಾವಿ ಸಭೆ
ವಿಜಯಪುರ: ಸಂತ ಶ್ರೀ ಸೇವಾಲಾಲ ಮಹಾರಾಜರ ಜಯಂತಿ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ ಮಾಲಾಧಾರಿ ಅಭಿಯಾನದ ಪೂರ್ವಭಾವಿ ಸಭೆಯನ್ನು ಇಂದು ಜಿಲ್ಲೆಯ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಲಾಯಿತು.
ಸಭೆಯ ದಿವ್ಯ ಸಾನಿಧ್ಯವನ್ನು ಶ್ರೀ ಸಂಜು ಮಹಾರಾಜ ಆಹೇರಿ ಅವರು ವಹಿಸಿಕೊಂಡಿದ್ದರು ಹಾಗೂ ಮಾಲಾಧಾರಿ ಅಭಿಯಾನದ ಮುಖಂಡರಾದ ಡಾ|| ಬಾಬುರಾಜೇಂದ್ರ ನಾಯಕ ಅವರ ನೇತೃತ್ವದಲ್ಲಿ ಸಭೆಯು ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ|| ಬಾಬುರಾಜೇಂದ್ರ ನಾಯಿಕ ಅವರು ಮಾಲಾಧಾರಣೆಯ ಮಹತ್ವ, ಅದರ ಉದ್ದೇಶ ಹಾಗೂ ಸಮಾಜದಲ್ಲಿ ಅದರ ಪಾತ್ರದ ಕುರಿತು ವಿವರವಾಗಿ ತಿಳಿಸಿದರು. ಸತತವಾಗಿ ಪ್ರತಿವರ್ಷದಂತೆ ಮಾಲಾಧಾರಣೆ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ ಈ ಬಾರಿ ಕೂಡಾ ಹೆಚ್ಚಿನ ಪ್ರಮಾಣದಲ್ಲಿ ಯುವಕರು ಈ ಮಾಲಾಧಾರಣೆ ಅಭಿಯಾನದಲ್ಲಿ ಭಾಗಿಯಾಗುವಂತೆ ಹೇಳಿದರು.
ಸಂತ ಶ್ರೀ ಸೇವಾಲಾಲ ಮಹಾರಾಜರ ಜೀವನ, ತ್ಯಾಗ ಹಾಗೂ ಅವರ ಆದರ್ಶಗಳನ್ನು ಅನುಸರಿಸುವ ಮೂಲಕ ಸಮಾಜದಲ್ಲಿ ಶಾಂತಿ, ಶಿಸ್ತು ಹಾಗೂ ಏಕತೆಯನ್ನು ಬೆಳೆಸಬೇಕೆಂದು ಅವರು ಕರೆ ನೀಡಿದರು. ಮಾಲಾಧಾರಿ ಅಭಿಯಾನವು ಸಮಾಜದ ಎಲ್ಲ ವರ್ಗಗಳನ್ನೂ ಒಂದೆಡೆ ಸೇರಿಸುವ ಪವಿತ್ರ ಪ್ರಯತ್ನವಾಗಿದ್ದು, ಪ್ರತಿಯೊಬ್ಬರೂ ಇದರಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಶ್ರೀ ಸುರೇಶ ಬಿಜಾಪೂರ, ಶ್ರೀ ಚಂದು ಜಾಧವ, ಶ್ರೀ ಈಶ್ವರ ಜಾಧವ, ರಾಜು ರಾಠೋಡ, ಅಪ್ಪು ರಾಠೋಡ, ರವಿ ರಾಠೋಡ, ರಾಕೇಶ ರಜಪೂತ, ಗಣಪತಿ ಪೂಜಾರಿ, ಸಮಾಜದ ಪ್ರಮುಖರು, ಮುಖಂಡರು ಹಾಗೂ ಯುವಕರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಮಾಲಾಧಾರಣೆ ಕುರಿತಾಗಿ ಹೆಚ್ಚಿನ ಮಾಹಿತಿಗಾಗಿ 9945336448, 7892801976, 9900946179, 9916206021 ಈ ಸಂಖ್ಯೆಗಳನ್ನು ಸಂಪರ್ಕ ಮಾಡಬಹುದಾಗಿದೆ.


















