ಸಂತ ಸೇವಾಲಾಲರ ಸಂದೇಶಗಳು ಈಗಲೂ
ಪ್ರಸ್ತುತ – ಎಸಿ ಗದ್ಯಾಳ
ಜಗತ್ತಿನಲ್ಲಿ ಯಾರೂ ಮೇಲಲ್ಲ, ಯಾರೂ
ಕಿಳಲ್ಲ..! ಕೀಳರಮೆಯಿಂದ ಹೊರಬನ್ನಿ : ಅಬೀದ್ ಗದ್ಯಾಳ
ಇಂಡಿ : ಜಗತ್ತಿನಲ್ಲಿ ಯಾರೂ ಮೇಲಲ್ಲ, ಯಾರೂ
ಕಿಳಲ್ಲ, ಜಾತಿ, ಮತ, ವರ್ಣ, ವರ್ಗಗಳ ಕೀಳರಮೆಯಿಂದ ಹೊರಬನ್ನಿ, ಸತ್ಯ, ಧರ್ಮ ನಿಮ್ಮ ಉಸಿರಾಗಲಿ ಎಂದು ಸಂದೇಶ ಸಾರಿದ ಸಂತ ಸೇವಾಲಾಲರ ಸಂದೇಶಗಳು ಯುವಕರಿಗೆ ಇಗಲೂ ಪ್ರಸ್ತುತ ಎಂದು ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ವತಿಯಿಂದ ಮಿನಿ
ವಿಧಾನಸಭೆಯಲ್ಲಿ ನಡೆದ ಸೇವಾಲಾಲ ಜಯಂತಿ
ಕಾರ್ಯಕ್ರಮದಲ್ಲಿ ಮಾತನಾಡಿದರು. ಸರಕಾರ ಕಂದಾಯ ಗ್ರಾಮಗಳನ್ನಾಗಿ ಮಾಡಿ
ಹಕ್ಕು ಪತ್ರ ವಿತರಿಸುತ್ತಿದ್ದು ಅವು ಸಮುದಾಯದವರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ತಿಳಿಸಿದರು.
ತಹಸೀಲ್ದಾರ ಮಂಜುಳಾ ನಾಯಕ ಮಾತನಾಡಿ
ದುಡಿದರೆ ಮಾತ್ರ ಪ್ರತಿಫಲ ಸಿಗುತ್ತದೆ. ಯಾವದೇ ಕಾಯಕವಿರಲಿ ಶೃದ್ಧೆಯಿಂದ ಮಾಡಿ ಎಂದು
ಹೇಳಿದರು ಸೇವಾಲಾಲರು ಎಂದರು.
ಅಖಿಲ ಭಾರತ ಬಂಜಾರಾ ಸಮಾಜದ ತಾಲೂಕಾ ಅಧ್ಯಕ್ಷ
ಸಂಜು ಚವ್ಹಾಣ, ಪುರಸಭೆ ಸದಸ್ಯ ದೇವೆಂದ್ರ ಕುಂಬಾರ, ಚಂದ್ರಶೇಖರ ಹೊಸಮನಿ, ಉಪನ್ಯಾಸಕ
ವಿಜಯ ರಾಠೋಡ ಸೇವಾಲಾಲರ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾ.ಪಂ ಅಧಿಕಾರಿ ಬಾಬು ರಾಠೋಡ, ಎಚ್ ಎಸ್ ಪಾಟೀಲ್, ಸುನೀಲ ಪವಾರ ಶಶಿಕಾಂತ ರಾಠೋಡ, ಲಾಲು ರಾಠೋಡ, ಪಿಂಟು ರಾಠೋಡ, ಮೋಹನ ರಾಠೋಡ, ಸಂತೋಷ ರಾಠೋಡ, ಧರ್ಮ ರಾಠೋಡ, ಪುರಸಭೆಯ ಸೋಮು ನಾಯಕ, ಲಕ್ಷ್ಮೀಕಾಂತ ಚವಡಿಹಾಳ, ಎಚ್.ಎಚ್. ಗುನ್ನಾಪುರ ಮತ್ತಿತರಿದ್ದರು.
ಇಂಡಿ ಪಟ್ಟಣದ ಮಿನಿ ವಿಧಾನಸೌಧದಲ್ಲಿ ನಡೆದ ಸೇವಾಲಾಲ ಜಯಂತಿ ಕಾರ್ಯಕ್ರಮದಲ್ಲಿ ಎಸಿ ಅಬೀದ್ ಗದ್ಯಾಳ ಮಾತನಾಡಿದರು.