ಸಂದನ ಪಾಳ್ಯ ಚರ್ಚ್ ಉದ್ಘಾಟನೆಗೆ ಹೆಲಿಕಾಪ್ಟರ್ ನಿಂದ ಪುಷ್ಪವೃಷ್ಟಿ..!
ಹನೂರು: ತಾಲ್ಲೂಕಿನ ಸಂದನಪಾಳ್ಯ ಸೇಂಟ್ ಆನ್ಸ್ ಚರ್ಚ್ ಉದ್ಘಾಟನೆಯನ್ನು ಭಾನುವಾರ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಬಿಷಪ್ ಬರ್ನಾರ್ಡ್ ಮೋರಸ್ ಮೈಸೂರು ಧರ್ಮಪ್ರಾಂತ್ಯದ ಅಪೋಸ್ಟೋಲಿಕ್ ಆಡಳಿತಾಧಿಕಾರಿ ಮತ್ತು ಊಟಿ ಬಿಷಪ್ ಅಮಲರಾಜ್ ಮತ್ತು ಮೈಸೂರಿನ ನಿವೃತ್ತ ಬಿಷಪ್ ಥಾಮಸ್ ಆಂಟನಿ ಸೇರಿ ಚರ್ಚ್ ಅನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಹನೂರು ಶಾಸಕ ಎಂ ಆರ್ ಮಂಜುನಾಥ್, ಸಂದನಪಾಳ್ಯ ವಿಚಾರಣೆಯ ಗುರುಗಳಾದ ಫಾದರ್ ಫ್ರಾನ್ಸಿಸ್ ಇನಿತರ ಗುರುಗಳು ಇದ್ದರು. ಕರ್ನಾಟಕದಲ್ಲೆ ಇದೇ ಮೊದಲ ಬಾರಿಗೆ
ಚರ್ಚ್ ಉದ್ಘಾಟನೆಗೆ ಪುಷ್ಪಾರ್ಚನೆ ಮಾಡಲು ಹೆಲಿಕಾಪ್ಟರ್ ಆಗಮನ ಗಮನಾರ್ಹವಾಗಿದೆ.