ಇಂಡಿ : ಮರ ಬೆಳಸಿ ನಾಡು ಉಳಿಸಿ ಆಧುನಿಕ ಕಾಲದ ಕಲುಷಿತ ವಾತಾವರಣದಲ್ಲಿ ಒಂದು ಜೀವಿತಾವಧಿಯಲ್ಲಿ ಒಂದು ಮರ ಅನೇಕ ರೀತಿಯಲ್ಲಿ ಮಾನವನಿಗೆ ನೆರವಾಗುತ್ತದೆ. ಮರಗಳ ಕುರಿತು ಜಾಗೃತಿ ಮೂಡಿಸಲು ಸರಕಾರಿ ಕಾರ್ಯಕ್ರಮವಾದ ಮಳೆಬಿಲ್ಲು ಅಡಿಯಲ್ಲಿ ಪ್ರಶಸ್ತಿ ವಿಜೇತಳಾದ ಕರ್ನಾಟಕದ ಸಾಲು ಮರದ ತಿಮ್ಮಕ್ಕ ಏಕಾಂಕ ನಾಟಕವನ್ನು ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನೀಯರು, ಶಿಕ್ಷಕ ದಶರಥ ಕೋರಿ ನಿರ್ದೇಶನ ಮೇರೆಗೆ ವಂದನಾ ಸಾಲೋಟಗಿ, ಸಹನಾ ಬಾರಿಕಾಯಿ, ಅಂಜಲಿ ಕೂಡಿಗನೂರ ಜೊತೆಗೆ ಇತರರು ಸೇರಿ ಮನೋಜ್ಞವಾಗಿ ಅಭಿನಯಸಿ ನೆರೆದವರ ಮನಗೆದ್ದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳು ಯು. ಎಚ್. ಚವ್ಹಾಣ ಕಾರ್ಯಕ್ರಮ ವನ್ನ ಉದ್ದೇಶಿಸಿ ಮಾತಾನಾಡಿದ ಅವರು, ಮರಗಳಿಂದ ಮಳೆ ಬರುವದು ಮರದಿಂದ ಅಸಂಖ್ಯಾತ ಹಣ್ಣುಗಳು ದೊರೆಯುವವು. ಶುದ್ಧವಾದ ಗಾಳಿ ಸಿಗುವದಲ್ಲದೇ ಮಣ್ಣಿನ ಸವಕಳಿ ತಡೆಯುವದು. ಪಶು ಪಕ್ಷಿಗಳ ಬದುಕಿಗೆ ಆಸರೆಯಾಗುವದು. ಹೀಗೆ ಅನೇಕ ರೀತಿಯಲ್ಲಿ ಮಾನವನಿಗೆ ಉಪಯೋಗವಾವುದರ ಜೋತೆಗೆ ಮಾನವನ ಉಸಿರುಯಾಗಿ ನಿಲ್ಲುತ್ತೆದೆ ಎಂದರು. ಒಂದು ವೇಳೆ ಗಿಡ ಮರಗಳು ಇಲ್ಲಂದರೆ ನಮ್ಮ ಉಸಿರು ನಿಲ್ಲುತ್ತೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ವಿಧ್ಯಾರ್ಥಿನಿರು ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.