ಸಾಲೋಟಗಿ ನಾಡಿಗೆ ಗುರುವಾಗಿತ್ತು..!
ಸಾಲೋಟಗಿಯಲ್ಲಿ ಉತ್ಖನನ ಅವಶ್ಯಕತೆಯಿದೆ..!
ಇಂಡಿ: ರಾಷ್ಟ್ರಕೂಟರ ಕಾಲದಲ್ಲಿ ಸಾಲೋಟಗಿಯಲ್ಲಿ
ಅಸ್ತಿತ್ವದಲ್ಲಿದ್ದ ಅಗ್ರಹಾರ, ಆಗಿನ ಕಾಲದಲ್ಲಿ ಜ್ಞಾನದ
ಕೇಂದ್ರವಾಗಿ ನಾಡಿಗೆ ಗುರುವಾಗಿತ್ತು ಎಂದು ಶಿಕ್ಷಕ, ಸಾಹಿತಿ ದಶರಥ ಕೋರಿ ಉಪನ್ಯಾಸದ ಮೂಲಕ ಮಕ್ಕಳಿಗೆ ಮಾಹಿತಿ ನೀಡಿದರು.
ತಾಲೂಕಿನ ಸಾಲೋಟಗಿ ಗ್ರಾಮದ ಎಸ್.ವಾಯ್.ಪದವಿ ಪೂರ್ವ ಕಾಲೇಜು (ಪ್ರೌಡವಿಭಾಗದ) 2023-24 ನೇ ಸಾಲಿನ ಎಸ್.ಎಸ್.ಎಲ್.ಸಿ ಮಕ್ಕಳ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿದರು. ಸಾಲೋಟಗಿ ಐತಿಹಾಸಿಕವಾಗಿ, ಧಾರ್ಮಿಕವಾಗಿ, ಜಾನಪದವಾಗಿ
ನಾಡಿನಲ್ಲಿ ಅತ್ಯಂತ ಶ್ರೇಷ್ಠವಾದ ಸಾಧನೆಯ
ಮೈಲುಗಲ್ಲನ್ನು ಸ್ಥಾಪಿಸಿದೆ. ಸಾಲೋಟಗಿಯಲ್ಲಿನ
ಅಗ್ರಹಾರದ ಕುರಿತು ಮತ್ತು ಕಾಲಜ್ಞಾನಿ
ಶಿವಯೋಗಿಶ್ವರರು ಬರೆದಿರುವೆನ್ನಲಾದ ಡಂಗರು
ಪದಗಳ ಕುರಿತು ಇನ್ನಷ್ಟು ಬೆಳಕು ಚೆಲ್ಲಬೇಕು.
ಅದರ ಜೊತೆಗೆ ನಾಡಿಗೆ ಜ್ಞಾನ ಕೇಂದ್ರವಾಗಿ, ಗುರುವಾಗಿದ್ದ ಇಲ್ಲಿನ ಅಗ್ರಹಾರ ಮತ್ತು ಹಲವು ದೇವಸ್ಥಾನದ ಪೂರಕ ಮಾಹಿತಿ ತಿಳಿಯಲು
ಉತ್ಖನನದ ಅವಶ್ಯಕತೆಯಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರೌಡಶಾಲಾ ಮುಖ್ಯಗುರುಗಳಾದ
ಎಸ್.ವಾಯ್. ಉಪಾಸೆ ಮಾತನಾಡಿ, ಮಕ್ಕಳಲ್ಲಿ ಸಂಶೋಧನಾ ಪ್ರವೃತ್ತಿ ಹೆಚ್ಚು ಮಾಡಿಕೊಳ್ಳಬೇಕೆಂದು ಕರೆ
ನೀಡಿದರು.
ಬೀಳ್ಕೊಡುವ ಸಮಾರಂಭದಲ್ಲಿ ರಾಜ್ಯ ಮಟ್ಟದಲ್ಲಿ ಕ್ರೀಡಾ
ಸಾಧನೆ ಮಾಡಿದ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನೀಯ – ರನ್ನು ಮತ್ತು ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ
ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಎಸ್.ಬಿ. ಢಾಣೆ, ಜೆ.ಎಮ್.ಕಡಣಿ,
ಎಸ್.ಆರ್.ರಾಠೋಡ, ಎನ್. ಆರ್. ಬಗಲಿ, ಎಲ್.ಎಸ್. ಛಾಯಾಗೋಳ, ಬಿ.ಕೆ.ಪಾಟೀಲ, ಕುಮಾರಿ ಎ.ಪಿ. ಮಠಪತಿ, ಎಸ್.ವಿ. ಗಾಣಗೇರ, ಎಸ್.ಆರ್. ಈಶ್ವರಗೊಂಡ ಉಪಸ್ಥಿತರಿದ್ದರು.
ಸಾಲೋಟಗಿ ಗ್ರಾಮದ ಎಸ್.ವಾಯ್.ಪದವಿ ಪೂರ್ವ ಕಾಲೇಜು (ಪ್ರೌಡವಿಭಾಗದ) 2023-24 ನೇ ಸಾಲಿನ ಎಸ್.ಎಸ್.ಎಲ್.ಸಿ ಮಕ್ಕಳ ಬೀಳ್ಕೊಡುವ ಸಮಾರಂಭದಲ್ಲಿ ಸಾಹಿತಿ ದಶರಥ ಕೋರಿ ಅವರನ್ನು ಸತ್ಕರಿಸಲಾಯಿತು.