ಇಂಡಿ: ಡಾll ಬಿ.ಆರ್.ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಡಾll ಬಾಬು ಜಗಜೀವನ ರಾಂ ಸಮುದಾಯ ಭವನದಲ್ಲಿ ಜಿಲ್ಲಾ ಮಾದಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ವಿಜಯಪುರ, ತಾಲ್ಲೂಕ ಘಟಕದ ವತಿಯಿಂದ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ತಾಲ್ಲೂಕು ಘಟಕ ಇಂಡಿಯ ವತಿಯಿಂದ ಪ್ರಥಮ ಬಾರಿಗೆ ಕೊಡಮಾಡಿದ “ಸಾಧಕರಿಗೊಂದು ಸಲಾಂ” ಪ್ರಶಸ್ತಿ ಪ್ರಧಾನ ಸಮಾರಂಭ ಮಾಡಲಾಯಿತು. ಶ್ರೀ ಅರ್ಜುನ ಗಂಗಾಧರ, ಗೌರವ ಅಧ್ಯಕ್ಷರಾದ ಶ್ರೀ ಎಮ್.ಆರ್. ಪೂಜಾರ ಹಾಗೂ ಎಮ್.ಎಲ್. ಹಡಲಸಂಗ ಸಂಘಟನಾ ಕಾರ್ಯದರ್ಶಿ ಪ್ರಶಸ್ತಿಯನ್ನು ಪ್ರಧಾನ ಮಾಡಿದರು. ಪ್ರತಿ ವರ್ಷ ಡಾll ಬಿ.ಆರ್. ಅಂಬೇಡ್ಕರ್ ಜಯಂತಿಯಂದು ಈ ಪ್ರಶಸ್ತಿ ನೀಡಲಾಗುವದು ಎಂದು ಹೇಳಿದರು. ಪ್ರಶಸ್ತಿ ಸ್ಚಿಕರಿಸಿ ಮಾತನಾಡುತ್ತಾ, ಮಾದಿಗ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ, ಸಮಾಜದ ಗೌರವ ಹೆಚ್ಚಿಸುವ, ಹೆಮ್ಮೆಯ ಕಾರ್ಯ ಮಾಡುವ ವ್ಯಕ್ತಿಗಳನ್ನು ಗುರುತಿಸುವ ಹಾಗೂ ಗೌರವಿಸುವ ಕೆಲಸ ಈ ಮೂಲಕ ನಮ್ಮ ಇಂಡಿ ತಾಲ್ಲೂಕಾ ಮಾದಿಗ ನೌಕರರ ಕ್ಷೇಮಾಭಿವೃದ್ಧಿ ಘಟಕ ಮಾಡುತ್ತಿರುವದು ಶ್ಲಾಘನೀಯ ಕಾರ್ಯ ಎಂದು ಪ್ರಶಸ್ತಿ ಸ್ವಿಕರಿಸಿದ ಶ್ರೀ ಚಂದ್ರಶೇಖರ ಹೊಸಮನಿ ಕರ್ನಾಟಕ ಪ್ರದೇಶ ಮಾದಿಗರ ಸಂಘದ ತಾಲೂಕ ಅಧ್ಯಕ್ಷ ಇಂಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕಾರ್ಯದಲ್ಲಿ ಸಂಘದ ಸದಸ್ಯರು ವಾಯ್.ಬಿ. ಹೊಲೆಕರ, ಮಲ್ಲು ವಾಲಿಕಾರ ಬಿ.ಜೆ.ಪಿ ಎಸ್.ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರು, ಪರಶುರಾಮ ಭಾವಿಕಟ್ಟಿ, ಮಹಾದೇವಿ ಕಟ್ಟಿಮನಿ, ಚೇತನ ಆಲಗೂರ, ಮೀರಾ ವಾಘಮೂರೆ, ದತ್ತಾ ಬಂಡೆನವರ, ಕಿರಣ ಕಟ್ಟಿಮನಿ ಬಿ.ಜೆ.ಪಿ ಎಸ್.ಸಿ ಮೋರ್ಚಾ ಇಂಡಿ ತಾಲೂಕು ಉಪಾಧ್ಯಕ್ಷರು, ಸತಿಶ ಬೋಳೆಗಾಂವ ನಾಮ ನಿರ್ದೇಶನ ಸದಸ್ಯರು ಪುರಸಭೆ ಇಂಡಿ, ಪ್ರದೀಪ ಡೊಳ್ಳಿನ, ಭೀಮಾಶಂಕರ ಸೊನ್ನದ, ಅವಿನಾಶ ಹಚ್ಚಾಳ, ಸುನೀಲ ಡೊಳ್ಳಿನ, ಮಲ್ಲಿಕಾರ್ಜುನ ಹೊಸಮನಿ, ಭೀಮಾಶಂಕರ ವಾಲಿಕಾರ, ಹುಸೇನಿ ಮಾದರ, ಶಾಂತು ಭಾವಿಕಟ್ಟಿ, ಅಂಭಣ ಭಾವಿಕಟ್ಟಿ ಹಾಗೂ ಸಮಾಜದ ಗುರು ಹಿರಿಯರು ಉಪಸ್ಥಿತರಿದ್ದರು.