ರಾಯಚೂರು : ಭಾರತೀಯ ಸೇನೆಯ ಸೇವಾನಿರತ ಬಿಎಸ್ಎಫ್ ಸೈನಿಕ ಅಮರೇಶ ಇವರ ತಾಯಿಯನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ ಜಿಲ್ಲಾ ಮಾಜಿ ಸೈನಿಕರ ಸಂಘದ ವತಿಯಿಂದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಲಿಂಗಸುಗೂರು ತಾಲ್ಲೂಕಿನ ನಿಲೋಗಲ್ ಗಾಮ್ರದ ಯೋಧ ಅಮರೇಶ ರವರ ಮನೆಯ ಮುಂದಿರುವ ಚರಂಡಿ ವಿಷಯಕ್ಕೆ ಅದೇ ಗ್ರಾಮದ 20 ಜನರು ಕೂಡಿಕೊಂಡು ಮಾರಾಣಾಂತಿಕ ಹಲ್ಲೆ ನಡೆಸಿದ ಯೋಧನ ತಾಯಿ ಈರಮ್ಮ ಅವರ ಕೊಲೆ ಮಾಡಿದ್ದಾರೆ ಎಂದು ದೂರಿದರು. ಹತ್ಯೆಗೆ ಕಾರಣ ಹಂತಕರನ್ನು ಶೀಘ್ರವಾಗಿ ಪತ್ತೆ ಹಚ್ಚಬೇಕು ಯೋಧನ ಕುಟುಂಬದ ಮೇಲೆ ದೌರ್ಜನ್ಯ , ದಬ್ಬಾಳಿಕೆ ಮಾಡಿದವರ ವಿರುದ್ಧ ಸೂಕ್ತವಾದ ಕಾನೂನಿನ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮಾಜಿ ಸೈನಿಕರ ಸಂಘವು ಒತ್ತಾಯ ಮಾಡಿದರು.
ದೇಶದ ರಕ್ಷಣೆ ಮಾಡುವ ವೀರಯೋಧರ ಸಮಸ್ಯೆಗಳನ್ನು ಪರಿಹರಿಸಿ ಬೆಂಬಲ ನೀಡುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯವಾಗಿರುತ್ತದೆ. ಶೀಘ್ರದಲ್ಲಿ ತಪ್ಪಿಸ್ಥರನ್ನು ಬಂಧನ ಮಾಡದಿದ್ದರೆ ರಾಜ್ಯದ್ಯಾಂತ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ರಾಯಚೂರು ಜಿಲ್ಲಾ ಮಾಜಿ ಸೈನಿಕರ ಸಂಘ ಅವರು ನಗರದ ಟಿಪ್ಪುಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸುಂದರ್ ಸಿಂಗ್ ,ಉಪಾಧ್ಯಕ್ಷ ಕಿಶನ್ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಕೆ ಎಸ್ ರಾವ್ ಗೌರವಧ್ಯಕ್ಷ ವಿಜಯನಂದ, ಸಂಘಟನೆ ಕಾರ್ಯದರ್ಶಿ ಅಬ್ದುಲ್ ರಹೀಂ, ಭಗೀರಥ ಟ್ರಸ್ಟ್ ಅಧ್ಯಕ್ಷ ಆದೋನಿ ಅಂಬರೀಶ್ ,ಆದೋನಿ ಆದಿರಾಜ ಸೇರಿದಂತೆ ಅನೇಕರು ಮಾಜಿ ಸೈನಿಕರು ಭಾಗಿಯಾಗಿದ್ದರು.