ಲಿಂಗಸೂಗೂರು: ತತ್ವಪದ ಭಜನೆಯ ನಾನಾ ಪ್ರಕಾರಗಳಲ್ಲಿ ಅದ್ವೀತಿಯ ಸಾಧನೆ ಮಾಡಿದ 16 ಜನ ಅಪ್ರತಿಮ ಕಲಾವಿದರಿಗೆ ಅಮರಜ್ಞಾನ ಪೀಠದಿಂದ ಹಮ್ಮಿಕೊಂಡಿದ್ದ ಚಂದ್ರಮಂಡಲೋತ್ಸವ ಭಜನ ಮೇಳದಲ್ಲಿ ಸಾಧು ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಾಲೂಕಿನ ಚೆಕ್ಕ ಹೆಸರೂರು- ಪಾಮನಕಲ್ಲೂರಿನ ಆದಿ ದೈವ, ಆರೂಢ ಆದಿ ಬಸವೇಶ್ವರ ದೇವಸ್ಥಾನದಲ್ಲಿ ಆರೂಢ, ಅದೈತ, ಸಿದ್ಧ ಸಾಧಕರ ಪರಮೋಚ್ಛ ನಾಯಕ ಕೊಡೇಕಲ್ ಬಸವಣ್ಣನವರ ಅಮರ ಕಲ್ಯಾಣ ಮಠದ ಅಮರಜ್ಞಾನ ಪೀಠದಿಂದ ಹಂಪಿ ಹುಣ್ಣಿಮೆ ನಿಮಿತ್ತ ರಾತ್ರಿಯಿಡಿ ತತ್ವ ಭಜನೆಗಳ ಮೇಳ ನಡೆಯಿತು.
ಮೂಲೆಗಳಿಂದ ಅಪ್ರತಿಮ ಹಾಡುಗಾರರು ಮೇಳದಲ್ಲಿ ಪಾಲ್ಗೊಂಡು ತಮ್ಮ ಅದ್ಭುತ ಹಾಡುಗಾರಿಕೆ, ತಾಳ, ತಮ್ಮಡಿ, ದಿಮ್ಮಿ ನುಡಿಸುವ ಮೂಲಕ ಲೋಕೋದ್ಧಾರಕ್ಕೆ ಶರಣರು ತತ್ವಪದಗಳ ಭಜನೆಯಿಂದ ಕಣ್ಮರೆಯಾಗುತ್ತಿರುವ ತತ್ವಪದ ಸಾಹಿತ್ಯ, ಸಂಸ್ಕೃತಿಗೆ ಹೊಸ ಮೆರಗು ನೀಡಿದರು.
ಇದೇ ವೇಳೆ ಅಮರಜ್ಞಾನ ಪೀಠದಿಂದ ಅಪ್ರತಿಮ ತತ್ವಪದಗಳ ಭಜನಾ ಕಲಾವಿದರಾದ ಐದಬಾವಿಯ
ಶಾಂತಮ್ಮ ರಾಯಗೇರಿ, ದುರುಗಮ್ಮ ಜಾಲಿಬೆಂಚಿ, ಪ್ರಭು ಗದ್ದಿ ಹಾಗೂ ರಾಮಪ್ಪ ಅಡಿಕೇರ, ಹೊಳೆಪ್ಪ,
ನಾಡಿನ ನಾನಾ ರಚಿಸಿದ ಇದೇ ವೇಳೆ ಅಮರಜ್ಞಾನ ಪೀಠದಿಂದ ಅಪ್ರತಿಮ ತತ್ವಪದಗಳ ಭಜನಾ ಕಲಾವಿದರಾದ ಐದಬಾವಿಯ ಶಾಂತಮ್ಮ ರಾಯಗೇರಿ, ದುರುಗಮ್ಮ ಜಾಲಿಬೆಂಚಿ, ಪ್ರಭು ಗದ್ದಿ ಹಾಗೂ ರಾಮಪ್ಪ ಅಡಿಕೇರ, ಹೊಳೆಪ್ಪ, ಸೋಮಪ್ಪ ಮಾಸ್ತರ, ಹನುಮಂತ್ರಾಯ, ದಮಡಿ ಕಲಾವಿದ ದುರುಗಪ್ಪ ಭೀಮಣ್ಣ ಬಾಗೂರು(ಗೌಡಪ್ಪ), ಖ್ಯಾತಯ್ಯ ಹಿರೇಮಠ, ನಿಂಗಪ್ಪ ಗಡ್ಡರ, ಅಯ್ಯಪ್ಪ ಗೋಪಾಲಪ್ಪ ಗೌಡ, ಹನುಮಂತ, ಮಾನಯ್ಯ, ನಿಂಗಪ್ಪ ರಾಮಲೂಟಿ, ಅಮರೇಶ ಚಿಟ್ಟಿ ಸೇರಿದಂತೆ ತತ್ವಪದ ಭಜನೆಯಲ್ಲಿ ಅಹ್ವಾನಿಸಿ ಸೇವೆ ಸಲ್ಲಿಸುವ ಅದ್ವೀತಿಯ ಮೇರು ಕಲಾವಿದರಿಗೆ ಸಾಧು ಸಾಹಿತ್ಯ ಕಲಾಶ್ರೀ ಪ್ರಶಸ್ತಿಯನ್ನು ಅಮರಜ್ಞಾನ ಪೀಠದ ಸರ್ವಾಧ್ಯಕ್ಷ ಆರ್.ಮಾನಸಯ್ಯ, ಆದಿ ಬಸವೇಶ್ವರ ದೇವಸ್ಥಾನ ಸಮಿತಿ ನಾಗಪ್ಪ ತಳವಾರ ಸೇರಿದಂತೆ ಗಣ್ಯರು ಸೂರ್ಯೋದಯಕ್ಕೂ ಮುಂಚೆ ಪ್ರಧಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿದ ಹಾಡುಗಾರ ರಾಮಪ್ಪ ಅಡಿಕೇರ ಗುರುಗುಂಟಾ ಮಾತನಾಡಿ, ಹಗಲು-ರಾತ್ರಿ ಎನ್ನದೇ ತತ್ವ
ಸೇವೆ ಮಾಡುವ ಭಜನಾ ಕಲಾವಿದರಿಗೆ ಅಮರ ಜ್ಞಾನಪೀಠದಿಂದ ಸನ್ಮಾನಿಸುವ ಮೂಲಕ ಸಾಮಾನ್ಯರಲ್ಲಿನ ಅಸಮಾನ್ಯ ಕಲಾವಿದರನ್ನು ಗುರಿತಿಸುವ ಕಾರ್ಯ ಮಾಡುತ್ತಿರುವುದು ಭಜನಾ ಕಲಾವಿದರಿಗೆ ಮತ್ತು ತತ್ವ ಹಾಡಿಗೆ ಹೊಸ ದಿಕ್ಕು ತೋರಿದ್ದಾರೆ. ಇದು ಕಲಾವಿದರಿಗೆ ಸಿಗುವ ಬಹುದೊಡ್ಡ ಗೌರವಾಗಿದೆ ಎಂದರು.
ಈ ವೇಳೆ ಅಮರಜ್ಞಾನ ಪೀಠದ ಸರ್ವಾಧ್ಯಕ್ಷ ಆರ್.ಮಾನಸಯ್ಯ, ನಾಗಪ್ಪ ತಳವಾರ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ತತ್ವಪದ ಭಜನೆ ಮೇಳೆ ಕಲಾವಿದರು ಇದ್ದರು.