ಸದ್ಭಾವ ಸೇವಾ ಸಮಿತಿ( ರಿ) ಟ್ರಸ್ಟ್ ವತಿಯಿಂದ ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ 19ನೇ ವರ್ಷದ ಪಾದಯಾತ್ರೆಗೆ ಚಾಲನೆ..
ಹನೂರು: ಪಟ್ಟಣದ ಅನ್ನಪೂರ್ಣೇಶ್ವರಿ ಹೋಟೆಲ್ ನಿಂದ ಪ್ರಾರಂಭವಾಗಿ ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ಸಾವಿರಾರು ಮಂದಿ ಕಾಲ್ನಡಿಗೆಯಲ್ಲಿ ಮಾದಪ್ಪನ ದರ್ಶನಕ್ಕೆ ಭಕ್ತರುಗಳು ಹೋಗುತ್ತಿದ್ದೇವೆ ಎಂದು ಸದ್ಭಾವ ಸೇವಾ ಸಮಿತಿಯ ಅಧ್ಯಕ್ಷ ಗಂಗಾಧರ್ ರವರು ತಿಳಿಸಿದರು.
ಸದ್ಭಾವ ಸೇವಾ ಸಮಿತಿ ವತಿಯಿಂದ ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ 19ನೇ ವರ್ಷದ ಪಾದಯಾತ್ರೆಗೆ ಸಮಿತಿಯ ಅಧ್ಯಕ್ಷರಾದ ಗಂಗಾಧರ್ ರವರು ಚಾಲನೆಯನ್ನು ನೀಡಿದರು. ಮಾತನಾಡಿ ಕಳೆದ 19 ವರ್ಷಗಳಿಂದ ಬೆರಳೆಣಿಕೆಯಷ್ಟು ಜನರಿಂದ ಪಾದಯಾತ್ರೆ ಕಾರ್ಯಕ್ರಮ ನಡೆಯುತ್ತಿದ್ದು ಕಳೆದ ಎರಡು ಮೂರು ವರ್ಷಗಳಿಂದ 2000ಕ್ಕೂ ಅಧಿಕ ಜನರಿಂದ ಪಾದಯಾತ್ರೆ ನಡೆಯುತ್ತಿರುವುದು ಸಂತಸ ತಂದಿದೆ ಹನೂರಿನ ಹಲವು ಮುಖಂಡರುಗಳು ಭಕ್ತರುಗಳು ಪಾದಯಾತ್ರೆಯ ಖರ್ಚು ವೆಚ್ಚ ಹಾಲು, ಮೊಸರು, ಅಕ್ಕಿ, ದವಸಧಾನ್ಯ, ಹಾಗೂ ಹಣದ ರೂಪದಲ್ಲಿ ಸಹಾಯ ಮಾಡುತ್ತಿದ್ದು ಕಾರ್ಯಕ್ರಮ ಮುಗಿದ ನಂತರ ಉಳಿದ ಹಣವನ್ನು ಯಾವುದೇ ರೀತಿಯ ದುರ್ಬಳಕೆ ಮಾಡಿಕೊಳ್ಳದೆ ಸದ್ಭಾವ ಸೇವಾ ಸಮಿತಿ ಟ್ರಸ್ಟ್ ನ ಖಾತೆಯಲ್ಲಿ ಇರಿಸಲಾಗುತ್ತದೆ.
ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆ ಆಗದ ರೀತಿಯಲ್ಲಿ ಸದ್ಭಾವ ಸೇವಾ ಸಮಿತಿ ನೋಡಿಕೊಳ್ಳಲಿದ್ದು, ಹಾಗೂ ಪ್ರತಿವರ್ಷದಂತೆ ಈ ವರ್ಷವೂ ಅನ್ನ ಸಂತರ್ಪಣೆ ಕಾರ್ಯವನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಶಂಕರ್, ಕಾರ್ಯದರ್ಶಿ ಗೋವಿಂದರಾಜು (ಶಶಿ ),ಖಜಾಂಜಿ ನಾರಾಯಣ್, ಸಮಿತಿಯ ಪದಾಧಿಕಾರಿಗಳು ಗುತ್ತಿಗೆದಾರಾದ ನಿಂಗಣ್ಣ, ಹಾಗೂ ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದಾರೆ.