ಮಲೈ ಮಹದೇಶ್ವರ ಬೆಟ್ಟದ ಪಾದಯಾತ್ರಿಕರಿಂದ ಹನೂರಿನಲ್ಲಿ ಸದ್ಭಾವ ಸೇವಾ ಸಮಿತಿ ಉದ್ಘಾಟನಾ ಸಮಾರಂಭ:
ಹನೂರು : ಪಟ್ಟಣದ ಮಲೈ ಮಹದೇಶ್ವರ ಬೆಟ್ಟದ ಪಾದಯಾತ್ರಿಕರಿಂದ ಹನೂರಿನಲ್ಲಿ ಸದ್ಭಾವ ಸೇವಾ ಸಮಿತಿಯ ಉದ್ಘಾಟನಾ ಸಮಾರಂಭವನ್ನು ಪಟ್ಟಣದ ಹೃದಯ ಭಾಗವಾದ ಖಾಸಗಿ ಬಸ್ ನಿಲ್ದಾಣದಲ್ಲಿ ನೆರವೇರಿಸಲಾಯಿತು.
ಗೋಪಿಶೆಟ್ಟಿಯೂರು ಮಠದ ಸ್ವಾಮಿಗಳಾದ ಬಸವಣ್ಣ ಸ್ವಾಮಿಗಳು ಪುಷ್ಪಾರ್ಚನೆ ಮೂಲಕ ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಸಮಿತಿಯ ಅಧ್ಯಕ್ಷರಾದ ಗಂಗಾಧರ್ ರವರು ಮಾತನಾಡಿ, ಹನೂರಿನಿಂದ ಕಳೆದ 20 ವರ್ಷಗಳಿಂದ ಬೆರಳೆಣಿಕೆಯಷ್ಟು ಜನರಿಂದ ಪಾದಯಾತ್ರೆ ಕಾರ್ಯಕ್ರಮ ನಡೆಯುತ್ತಿದ್ದು ಕಳೆದ2,3 ವರ್ಷಗಳಿಂದ ಎರಡೂ ಸಾವಿರಕ್ಕೂ ಅಧಿಕ ಜನರಿಂದ ಪಾದಯಾತ್ರೆ ನಡೆಯುತ್ತಿರುವುದು ಸಂತಸ ತಂದಿದೆ, ಹನೂರಿನ ಹಲವು ಮುಖಂಡರು, ಭಕ್ತಾದಿಗಳು ಪಾದಯಾತ್ರೆಯ ಖರ್ಚು ವೆಚ್ಚಗಳಿಗೆ ಹಾಲು, ಮೊಸರು ಅಕ್ಕಿ ಹಾಗೂ ಹಣದ ರೂಪದಲ್ಲಿ ಸಹಾಯಮಾಡುತ್ತಿದ್ದು ಕಾರ್ಯಕ್ರಮ ಮುಗಿದ ನಂತರ ಉಳಿದ ಹಣವನ್ನು ಯಾವುದೇ ರೀತಿ ದುರ್ಬಳಕೆ ಮಾಡಿಕೊಳ್ಳದೆ ಆ ಹಣವನ್ನು ಸಮಿತಿಯ ಖಾತೆಯಲ್ಲಿರಿಸಿ ಮುಂದಿನ ದಿನಗಳಲ್ಲಿ ಕರ್ನಾಟಕದ ಯಾವುದೇ ಭಾಗದಿಂದ ಪಾದಯಾತ್ರಿಕರು ಬಂದರೆ ನಮ್ಮ ಸಮಿತಿಯ ಉಪಯೋಗವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷರಾದ ಶಂಕರ್, ಕಾರ್ಯದರ್ಶಿ ಗೋವಿಂದರಾಜು(ಶಶಿ) ಖಜಾಂಚಿ ನಾರಾಯಣ್ ಹಾಗೂ ಸಮಿತಿಯ ಪದಾಧಿಕಾರಿಗಳು, ಮುಖಂಡರಾದ ನಿಂಗಣ್ಣ, ಮಹೇಶ್, ಆನಂದ್, ರಾಜು ವೆಂಕಟೇಗೌಡ, ಮಾದೇಶ್ ,ಮಲ್ಲೇಶ್, ಅನಿಲ್, ಸುಂದರ್, ಸಂತೋಷ್, ರವಿ ಇನ್ನಿತರರು ಭಾಗವಹಿಸಿದ್ದರು.