ಇಂಡಿ: ಹಿಂದುಳಿದ ಸಮುದಾಯಗಳ ವ್ಯಕ್ತಿಗಳನ್ನು ಗುರುತಿಸಿ, ಅವರಿಗೆ ಸೂಕ್ತ ಶಿಕ್ಷಣ ಕೊಡುವ ಕಾರ್ಯದಲ್ಲಿ ಒಂದು ಸಂಸ್ಥೆ ನಿರತವಾಗಿದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಶಿಕ್ಷಣ ಕೊಟ್ಟು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕೆಲಸಮಾಡುತ್ತಿದೆ. ಇಂತಹ ಕಾರ್ಯೋನ್ಮುಖ ಚಟುವಟಿಕೆಗಳಲ್ಲಿ ಮುನ್ನುಗ್ಗುತ್ತಿರುವ ಸಂಸ್ಥೆಗೆ ಸಾರ್ವಜನಿಕ ವಲಯದಲ್ಲಿ ಅತೀ ಹೆಚ್ಚು ಮೆಚ್ಚುಗೆ ವ್ಯಕ್ತವಾಗಿದೆ.
ಹೌದು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಾಕ್ಷರತಾ ಸಮಿತಿ, ಜಿಲ್ಲಾ ಪಂಚಾಯತ್ ವಯಸ್ಕರ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆದ ಕೇಂದ್ರ ಪುರಸ್ಕೃತ ಪಡ್ನಾ ಲಿಖ್ನಾ ಅಭಿಯಾನವು ಹಿಂದುಳಿದ ವರ್ಗಗಳ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸುವ ಕಾರ್ಯಕ್ರಮದಲ್ಲಿ ಮಹಿಳೆಯರು ಸಾಕ್ಷರರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಎರಡು ದಿನಗಳ ಬೋಧಕರ ತರಬೇತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ತಾಲೂಕಾ ನೌಕರ ಸಂಘದ ಅಧ್ಯಕ್ಷ,ಸಾಕ್ಷಾರತಾ ಸಂಯೋಜಕ ಎಸ್ ಆರ್ ಪಾಟೀಲ್ ಹೇಳಿದರು.
ಇಂಡಿ ಪುರಸಭೆ ವ್ಯಾಪ್ತಿಯ ಒಂದು ವಾರ್ಡಿನಲ್ಲಿ 1163(ದೇಶಪಾಂಡೆ ತಾಂಡಾ) ಅನಕ್ಷರಸ್ಥರನ್ನು ಸರ್ಕಾರೇತರ ಸಂಸ್ಥೆಗಳ ಮೂಲಕ ಸಮೀಕ್ಷೆ ಮಾಡಿಸುವದರ ಮೂಲಕ ಗುರುತಿಸಿದ್ದು, ಸರ್ಕಾರ ಉಚಿತವಾಗಿ ಕಲಿಕೋಪಕರಣಗಳನ್ನು ನೀಡಿದ್ದು ವಿದ್ಯಾವಂತ ಬೋಧಕರು ಅನಕ್ಷರಸ್ಥರಿಗೆ ಕಲಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಸಾಕ್ಷರ ನಾಡಕಟ್ಟುವಲ್ಲಿ ಶ್ರಮಿಸಲು ವಿನಂತಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಸಿಎಂ ಬಂಡಗಾರ್ ಮಾತನಾಡಿ ಅನಕ್ಷರಸ್ಥರು ಹಲವಾರು ಪ್ರಸಂಗಗಳಲ್ಲಿ ಮೋಸ ಹೋಗುತ್ತಾರೆ. ಪಡ್ನಾಲಿಖನಾ ದಂತಹ ಸಾಕ್ಷರ ಕಾರ್ಯಕ್ರಮಗಳಲ್ಲಿ ಅನಕ್ಷರಸ್ಥರು ವಿದ್ಯೆಯನ್ನು ಪಡೆದು ವಿದ್ಯಾವಂತರಾಗಿ ಸಮೃದ್ಧ ಸಮಾಜದ ನಿರ್ಮಾಣಕ್ಕೆ ಪಣ ತೊಡಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಲಿಂಬಾಜಿ ರಾಠೋಡ ಶಿವಾನಂದ ಕಾಮಗೊಂಡ, ಪುರಸಭೆ ಸದಸ್ಯ ಲಿಂಬಾಜಿ ರಾಠೋಡ, ಜಿ.ಜಿ ಬರಡೋಲ, ತೆಲ್ಲೂರ ಅರುಣಕುಮಾರ ಅನೇಕರು ಉಪಸ್ಥಿತರಿದ್ದರು.