ಲೋಕ-ಕಲ್ಯಾಣಾರ್ಥವಾಗಿ ಶ್ರೀ ಕೋಳೂರ ಬಸವೇಶ್ವರ ಗೆ ರುದ್ರಾಭಿಷೇಕ ಪೂಜೆ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಆರಾಧ್ಯ ದೈವ, ಕಲಿಯುಗದ ಕಾಮಧೇನು,ಕಲ್ಪವೃಕ್ಷ, ನಂಬಿ ಬಂದತಂಹ ಭಕ್ತರಿಗೆ ಬೇಡಿದ ವರಗಳನ್ನ ಕರುಣಿಸುವ, ಪುಣ್ಯಕ್ಷೇತ್ರ
ತಾಲ್ಲೂಕಿನ ಕೋಳೂರ ಗ್ರಾಮದ ಶ್ರೀ ಕೊಟ್ಟೂರ ಬಸವೇಶ್ವರ ದೇವರು ಪವಿತ್ರ ಶ್ರಾವಣ ಮಾಸ ಶುಭಾರಂಭವಾಗಲಿದ್ದು, ಉದ್ಭವಮೂರ್ತಿ ಶ್ರೀ ಕೊಟ್ಟೂರ ಬಸವೇಶ್ವರ ಕರ್ತೃ ಗದ್ದುಗೆಗೆ ಶ್ರಾವಣ ಮಾಸದ ನಿಮಿತ್ಯ ಹಾಗೂ ಸಮಸ್ತ ಲೋಕ-ಕಲ್ಯಾಣಾರ್ಥವಾಗಿ, ಪ್ರಾಥಃಕಾಲ 5ಗಂಟೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಮಹಾ ಮಂಗಳಾರುತಿ ಜರುಗುವದು
ದಿ.24 ಜುಲೈ 2025 ಗುರುವಾರ, ನಾಗರ ಅಮಾವಾಸ್ಯೆಯಂದು ಪ್ರಾರಂಭವಾಗಿ ದಿ.23 ಆಗಸ್ಟ್ 2025 ಶನಿವಾರ ಬೆನಕನ ಅಮಾವಾಸ್ಯೆಯ, ತನಕ ರುದ್ರಾಭಿಷೇಕ ಪೊಜೆಗಳು ದೇವಾಲಯದಲ್ಲಿ ಸಾಗಿಬರುವದು.ಕಾರಣ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿಬಹುದು ಪುರೋಹಿತರು: ವೇ ಮೂರ್ತಿ ಶ್ರೀ ಸಂತೋಷ ಸ್ವಾಮೀಜಿ ಹಿರೇಮಠ ಮೊ: 9901789200 ಅರ್ಚಕರು: ವೇ. ಶ್ರೀ ದಯಾನಂದ ಅ ಪೂಜಾರಿ ಮೊ: 8152887342
ಶ್ರೀ ಕೋಳೂರ ಬಸವೇಶ್ವರ ಆಶೀರ್ವಾದ ಪಡೆದು ಪುನೀತರಾಗಿ ಎಂದು ದೇವಾಲಯದ ಪುರೋಹಿತರಾದ ವೇದಮೂರ್ತಿ ಶ್ರೀ ಸಂತೋಷ ಸ್ವಾಮೀಜಿ ಹಿರೇಮಠ ಗುರುಗಳು ಈ ಮೂಲಕ ಭಕ್ತಾದಿಗಳಿಗೆ ತಿಳಿಸಿದ್ದಾರೆ.