ಪ್ರಸಾದ ನಿಲಯಕ್ಕೆ ರೂ 2 ಲಕ್ಷ ಧನ ಸಹಾಯ
ಇಂಡಿ : ಶ್ರೀ ಕಾಳಿಕಾದೇವಿ ಪ್ರಸಾದ ನಿಲಯ ಕಟ್ಟಡ ಇಂಡಿ ಪಟ್ಟಣದಲ್ಲಿ ನಿರ್ಮಾಣವಾಗುತ್ತಿದ್ದು, ಸದರಿ ಕಟ್ಟಡಕ್ಕೆ ಅನುದಾನ ನೀಡುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಶ್ರೀ ಡಾ. ವಿರೇಂದ್ರ ಹೆಗ್ಗಡೆಯವರಿಗೆ ಇಂಡಿ ತಾಲೂಕಾ ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಮನವಿ ಸಲ್ಲಿಸಿದ್ದರು.
ಸೋಮವಾರದಂದು ಸಂಸ್ಥೆಯ ಕಾರ್ಯಾಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯೋಜನಾಧಿಕಾ – ರಿಗಳ ಉಪಸ್ಥಿತಿಯಲ್ಲಿ ಸಭೆ ಜರುಗಿತು. ಮನವಿಗೆ ಸ್ಪಂದಿಸಿದ ಪೂಜ್ಯರು ಈ ದಿನ 2 ಲಕ್ಷ ರೂಪಾಯಿಗಳನ್ನು ಪ್ರಸಾದ ರೂಪವಾಗಿ ಕಟ್ಟಡಕ್ಕೆ ಅನುದಾನ ನೀಡಿದ್ದಾರೆ ಎಂದು ಹೇಳುವುದರೊಂದಿಗೆ ಇಂಡಿ ತಾಲೂಕಾ ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಕಾರ್ಯದರ್ಶಿ ಶಿವು ಬಡಿಗೇರ ಪೂಜ್ಯರಿಗೆ ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದರು.
2 ಲಕ್ಷ ಅನುದಾನದ ಡಿ. ಡಿ ವಿತರಿಸಿ ಮಾತನಾಡಿದ
ಧರ್ಮಸ್ಥಳ ಕ್ಷೇತ್ರ ಯೋಜನಾಧಿಕಾರಿ ನಟರಾಜ ಎಲ್ ಎಮ್. ಅವರು ಶ್ರೀ ಕ್ಷೇತ್ರವು ಬಡವರ ಪಾಲಿನ ಆಶಾಕಿರಣವಾಗಿ ಸಹಾಯ ನೀಡುತ್ತಾ ಬಂದಿದೆ.
ಇನ್ನೂ ಹೆಚ್ಚಿನ ಅನುದಾನ ಶ್ರೀ ಕ್ಷೇತ್ರದಿಂದ
ತಮಗೆ ಸಿಗಲಿ ಹಾಗೂ ತಮ್ಮ ಸಂಸ್ಥೆಯ ವತಿಯಿಂದ
ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿ
ಎಂದರು.
ಪುರಸಭೆಯ ಸದಸ್ಯ ಅನಿಲಗೌಡ ಬಿರಾದಾರ ಮಾತನಾಡಿ ಇಂಡಿ ತಾಲೂಕಿನಲ್ಲಿ ಧರ್ಮಸ್ಥಳ
ಗ್ರಾಮಾಭಿವೃದ್ಧಿಯ ಸಂಸ್ಥೆಯಿಂದ ಸಾಕಷ್ಟು
ಬಡಜನರಿಗೆ ಸಹಾಯವಾಗಿದೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷರಾದ ಭೀಮರಾಯ ಧೂ ಬಡಿಗೇರ, ಪುಷ್ಪ ನರಸಿಂಹ ಬಡಿಗೇರ, ಶಿವಪ್ಪ ಬಡಿಗೇರ, ಶ್ರೀಮಂತ ಬಡಿಗೇರ, ಅನುರಾಧ ದತ್ತಾತ್ರೇಯ ಸುತಾರ, ಶಿವಶರಣ
ಬಡಿಗೇರ,ಜಯಶ್ರೀ ಪತ್ತಾರ,ಆನಂದ ಹಿರೇಮಠ, ಗುರುನಾಥ ಬಡಿಗೇರ, ಕುಮಾರ ಗೋಕಾಕ, ಸರಸ್ವತಿ ರೆಡ್ಡಿ, ಜ್ಯೋತಿ ವಂದಾಲ, ಪದ್ಮಾವತಿ ಪೋದ್ದಾರ ಮತ್ತಿತರಿದ್ದರು.
ಸಂಸ್ಥೆಯ ಕಾರ್ಯಾಲಯದಲ್ಲಿ ಶ್ರೀ ಕ್ಷೇತ್ರ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ
ಯೋಜನಾಧಿಕಾರಿಗಳ ಉಪಸ್ಥಿತಿಯಲ್ಲಿ ಎರಡು ಲಕ್ಷ
ರೂ ಚೆಕ್ಕು ವಿತರಿಸಿದರು.