ವಿವಿಧ ಗ್ರಾಮಗಳಿಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆ : ಶಾಸಕ ಎಂ.ಆರ್ ಮಂಜುನಾಥ್
ವರದಿ:ಚೇತನ್ ಕುಮಾರ್ ಎಲ್
ಹನೂರು:ತಾಲೂಕಿನ ದೊಡ್ಡಿಂದವಾಡಿ ಗ್ರಾಮದ ಕನಕಗಿರಿ ಮಾರಮ್ಮನ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು
.
ಕ್ಷೇತ್ರ ವ್ಯಾಪ್ತಿಯ ಶ್ರೀ ಕ್ಷೇತ್ರ ಚಿಕಲ್ಲೂರು ಸಿದ್ದಪ್ಪಾಜಿ ಧಾರ್ಮಿಕ ಸ್ಥಳ ದೇವಾಲಯಕ್ಕೆ ತೆರಳುವ ಭಕ್ತಾದಿಗಳಿಗೆ ಮತ್ತು ವಿವಿಧ ಗ್ರಾಮಗಳಿಗೆ ತೆರಳಲು ಹಲವಾರು ವರ್ಷಗಳಿಂದ ರಸ್ತೆ ಅಭಿವೃದ್ಧಿ ಕಾಣದೆ ಹದಗೆಟ್ಟು ಹೋಗಿದ್ದನ್ನು ಮನಗಂಡು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಮಾತನಾಡಿ ಶ್ರೀ ಕ್ಷೇತ್ರದಲ್ಲಿರಸ್ತೆ ಅಭಿವೃದ್ಧಿಗೆ ಅನುದಾನ ನೀಡುವ ಮೂಲಕ ಶ್ರೀ ಕ್ಷೇತ್ರದ ಭಕ್ತರಿಗೆ ಮತ್ತು ಈ ಭಾಗದ ಬಹುದಿನದ ಜನತೆಯ ಬೇಡಿಕೆಯ ಅನುಗುಣವಾಗಿ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಎರಡುವರೆ ದಶಕಗಳಿಂದ ( 25 ) ವರ್ಷಗಳ ನಂತರ ಬಂಡಳ್ಳಿ
ಮಣಗಳ್ಳಿ ಹನೂರು ಪಟ್ಟಣದ ಮುಖ್ಯ ರಸ್ತೆ ತೀವ್ರವಾಗಿ ಹದಗೆಟ್ಟಿದ್ದು ರಸ್ತೆಯಲ್ಲಿ ಸಂಚರಿಸುವುದೇ ಈ ಭಾಗದ ಜನತೆಯೇ ಕಷ್ಟಕರದ ಹಲವಾರು ವರ್ಷಗಳ ಬಹು ಬೇಡಿಕೆಯ ನಂತರ ಸಾರ್ವಜನಿಕರ ಮತ್ತು ವಿವಿಧ ಗ್ರಾಮಗಳ ರಸ್ತೆ ಅಭಿವೃದ್ಧಿಗೆ ಒತ್ತು ನೀಡುವ ಸದುದ್ದೇಶದಿಂದ ಅನುದಾನ ತಂದು ಭೂಮಿ ಪೂಜೆ ನೆರವೇರಿಸಲಾಗುತ್ತಿದೆ.
ಅಂತರಾಜ್ಯ ರಸ್ತೆ ಅಭಿವೃದ್ಧಿಗೆ ಒತ್ತು : ಹನೂರು ಪಟ್ಟಣದಿಂದ ನಾಲಾರ ರೋಡ್ ಮಾರ್ಗವಾಗಿ ರಾಮಾಪುರ ಸೇರಿದಂತೆ ತಮಿಳುನಾಡಿಗೆ ದಿನನಿತ್ಯ ನೂರಾರು ವಾಹನಗಳು ಸರಕು ಸಾಗಾಣಿಕೆ ವಾಹನಗಳು ಸಂಚರಿಸುತ್ತಿರುವುದರಿಂದ ದಿಂಬಂ ರಸ್ತೆಯಲ್ಲಿ ಪಾರಿವಾಹನಗಳಿಗೆ ನಿಷೇಧ ಏರಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ದಿನನಿತ್ಯ ರಾತ್ರಿ ಅಗಲು ಎನ್ನದೆ ವಾಹನಗಳು ಸಂಚರಿಸುತ್ತಿರುವುದರಿಂದ ತೀವ್ರವಾಗಿ ಅದೇ ಕಟ್ಟಿರುವ ರಸ್ತೆ ಅಭಿವೃದ್ಧಿ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಈ ರಸ್ತೆಯನ್ನು ಅಂತರ್ ರಾಜ್ಯ ರಸ್ತೆಯನ್ನಾಗಿ ಪರಿವರ್ತಿಸಿ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರದ ಗಮನಕ್ಕೆ ತಂದು ಸುಸರ್ಜಿತವಾದ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಲಾಗುವುದು.
ಹನೂರಿನಿಂದ ರಾಮಪುರ ಮಾರ್ಗವಾಗಿ ಕೌದಳ್ಳಿ ಗ್ರಾಮದವರೆಗೆ ರಸ್ತೆ ಅಭಿವೃದ್ಧಿಗೂ ಸಹ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು ಡಾ ದತ್ತೇಶ್ ಕುಮಾರ್, ಲೋಕೋಪಯೋಗಿ ಇಲಾಖೆ ವ. ಇ. ಇ ಪುರುಷೋತ್ತಮ್ ಚಿನ್ನಣ್ಣ ಸುರೇಂದ್ರ ಹಾಗೂ ವಿವಿಧ ಗ್ರಾಮದ ಮುಖಂಡರುಗಳು ಉಪಸ್ಥಿತರಿದ್ದರು