ಸಿಂಧನೂರ : ರೈತರ ಪಾಲಿನ ಜೀವನಾಡಿಯಾದ ತುಂಗಭದ್ರಾ ನದಿಯ ದಡದಲ್ಲಿ ಶಿವ ದೇವಸ್ಥಾನ ಪುನರ್ ನಿರ್ಮಾಣ ಗೊಳ್ಳಲಿದ್ದು, ಭಕ್ತಾದಿಗಳು ತನು ,ಮನ, ಧನ ಸಾಹಾಯದಿಂದ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಲು ಶ್ರೀ ತುಂಗಭದ್ರೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ ಧಡೇಸೂಗುರು ಭಕ್ತರಲ್ಲಿ ಭಕ್ತಿಯ ಸಂದೇಶವನ್ನ ಸಾರಿದೆ.
ರಾಯಚೂರು ಜಿಲ್ಲೆಯ ಸಿಂಧನೂರ್ ತಾಲೂಕಿನ ಧಡೆಸುಗುರ್ ಗ್ರಾಮದಲ್ಲಿ ಶಿವನ ದೇವಸ್ಥಾನ ಪುನ ರ್ನಿರ್ಮಾಣ ಹಾಗೂ ಜೀರ್ಣೋದ್ಧಾರದ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕಮೀಟಿಯವರು ಮಾತಾನಾಡಿ ಈಗಾಗಲೇ ಸಕಲ ಸಿದ್ಧತೆಗಳು ನಡೆತ್ತಿವೆ. ಇನ್ನು ಶ್ರೀ ತುಂಗಭದ್ರೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ ಧಡೆಸುಗೂರ್ ಈ ಒಂದು ಸತ್ಕಾರ್ಯಕ್ಕೆ ಕೈ ಹಾಕಿದೆ ಎಂದು ಹೇಳಿದರು.
ವೆಂಕಟರಾವ್ ನಾಡಗೌಡ , ಎಂ ಎಸ್ ಸೋಮಲಿಂಗಪ್ಪ, ಬಸವರಾಜ್ ಧಡೆಸಸೂಗೂರ್, ಶಿವನಗೌಡ ಗೋರೆಬಾಳ ಹಾಗೂ ಊರಿನ ಗಣ್ಯಮಾನ್ಯರು ಉಪಸ್ಥಿತರು.