ಇಂಡಿ : ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಹಿಂದುಳಿದಿದ್ದ ಪ್ರದೇಶ ಅಂತಾ ಅಂದರೆ, ವಿಜಯಪುರ ಅದರಲ್ಲೂ ವಿಶೇಷವಾಗಿ ಇಂಡಿ ಮತ್ತು ಸಿಂದಗಿ. ಇಂತಹ ಹಿಂದುಳಿದ ಪ್ರದೇಶದಲ್ಲಿ ಸರಕಾರ ಕೈಗಾರಿಕೆ ಬೆಳವಣಿಗೆಗೆ ಏನು ಕ್ರಮ ತೆಗೆದುಕೊಂಡಿದೆ. ಈ ಭಾಗದಲ್ಲಿ ತೋಟಗಾರಿಕೆ ಬೆಳೆ ಯತ್ತೆಚ್ಚವಾಗಿ ಬೆಳೆಯುತ್ತಾರೆ. ಅದರಲ್ಲಿ ಲಿಂಬೆ, ದಾಳಿಂಬೆ, ದ್ರಾಕ್ಷಿ, ಅದರಲ್ಲೂ ಲಿಂಬೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿದೆ. ಆದರೆ ಕೈಗಾರಿಕಾ ಕ್ಷೇತ್ರದಲ್ಲಿ ಇಂಡಿ ತಾಲೂಕು ಅತ್ಯಂತ ಹಿಂದುಳಿದಿದ್ದು, ಪೂರಕವಾದಂತಹ ವ್ಯವಸ್ಥೆ ಕಲ್ಪಿಸಿದ್ದರೆ, ಸಹಾಯ ಮಾಡಿದ್ರೆ ಕೈಗಾರಿಕೆ ಬೆಳವಣಿಗೆ ಯಾಗುತ್ತದೆ ಎಂದು ಸದನದಲ್ಲಿ ಚುಕ್ಕೆ ಗುರುತ್ತಿಲ್ಲದ ಪ್ರಶ್ನೆ ಮೂಲಕ ಶಾಸಕ ಯಶವಂತರಾಯಗೌಡ ಪಾಟೀಲ್ ದ್ವನಿ ಮೂಡಿಸಿದರು.
ಈ ಸಂದರ್ಭದಲ್ಲಿ ಉತ್ತರಿಸಿದ ಕೈಗಾರಿಕಾ ಸಚಿವ ಮುರಗೇಶ ನಿರಾಣಿ ಅವರು, ಇಂಡಿ ತಾಲ್ಲೂಕಿನಲ್ಲಿ ಕೈಗಾರಿಕಾ ನಿವೇಶನಗಳಿಗೆ ಕೈಗಾರಿಕೋದ್ಯಮಿಗಳಿಂದ ಬೇಡಿಕೆ ಇರುವ ಬಗ್ಗೆ ಕೆ.ಐ.ಎ.ಡಿ.ಬಿ.ಯ ವಿಶೇಷ ಭೂಸ್ವಾಧೀನಾಧಿಕಾರಿ, ಧಾರವಾಡ ಮತ್ತು ಕಾರ್ಯಪಾಲಕ
ಅಭಿಯಂತರರು, ಬೆಳಗಾವಿ ಹಾಗೂ ಜಂಟಿನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ವಿಜಯಪುರ ಇವರುಗಳು ಸ್ಥಳ ಪರಿಶೀಲನೆ ನಡೆಸಿ ಸಲ್ಲಿಸಿದ ದಿನಾಂಕ : 30.09.20200
ವರದಿಯಲ್ಲಿ ಇಂಡಿ ತಾಲ್ಲೂಕಿನಲ್ಲಿ ಕೈಗಾರಿಕಾ ವಸಾಹತು ಇರುವುದಿಲ್ಲವಾದ ಕಾರಣ ಸದರಿ ಪ್ರದೇಶದಲ್ಲಿ ಉದ್ದಿಮೆಗಳನ್ನು ಸ್ಥಾಪಿಸುವ ಸಲುವಾಗಿ ಅಮೀನಿನ ಬೇಡಿಕೆ ಇದ್ದು, ಇಂಡಿ ತಾಲ್ಲೂಕಿನ ಬೂದಿಹಾಳ ಗ್ರಾಮದ ರಿ.ಸ. ನಂ: 65 ರಲ್ಲಿನ 25-14 ಎಕರೆ ಸರ್ಕಾರಿ ಜಮೀನನ್ನು ಸ್ವಾಧೀನಪಡಿಸಿಕೊಂಡು ಕೈಗಾರಿಕಾ ಪ್ರದೇಶ ಸ್ಥಾಪನೆ
ಸ್ಥಾಪನೆ ಮಾಡುವುದು ಸೂಕ್ತವೆಂದು ಅಭಿಪ್ರಾಯಪಟ್ಟಿರುತ್ತಾರೆ.
ಇಂಡಿ – ಹಲಸಂಗಿ ರಾಜ್ಯ ಹೆದ್ದಾರಿಗೆ ಈ ಜಮೀನು ಗ್ರಾಮದಿಂದ ಸುಮಾರು 8 ಕಿ.ಮೀ. ದೂರದಲ್ಲಿದ್ದು, ಸದರಿ ಜಮೀನಿಗೆ ರಸ್ತೆ ಸಂಪರ್ಕ ಇರುವ ಬಗ್ಗೆ ಖಚಿತಪಡಿಸಿಕೊಂಡು, ಮಂಡಳ ಸಭೆಯ ಮುಂದೆ ಮಂಡಿಸಿ, ಅದರ ನಿರ್ಣಯದಂತೆ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.